ಜಾಧವ್ ಅವರ ತಾಯಿ, ಹೆಂಡತಿಯನ್ನು ದೇಶಕ್ಕೆ ಕರೆಸಿ ಅವಮಾನ ಮಾಡಿದ ದುರುಳ ಪಾಕಿಸ್ತಾನ!
ದೆಹಲಿ: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯನ್ನು ವಿನಾಕಾರಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ಉದ್ಧಟತನ ಮುಂದುವರಿದಿದ್ದು, ಕುಲಭೂಷಣ ಜಾಧವ್ ಅವರನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಅವಮಾನ ಮಾಡಿದೆ.
ಜಾಧವ್ ಅವರ ಭೇಟಿಗೂ ಮುನ್ನ ಪಾಕಿಸ್ತಾನಿ ಅಧಿಕಾರಿಗಳು ಕುಲಭೂಷಣ ಅವರ ತಾಯಿ ಹಾಗೂ ಪತ್ನಿಯ ಸಿಂಧೂರ, ಮಂಗಳಸೂತ್ರ ಹಾಗೂ ಕೈಬಳೆಯನ್ನು ಬಲವಂತವಾಗಿ ಪಡೆದು ಕಳುಹಿಸಿದ್ದರು. ಅಲ್ಲದೆ ಭೇಟಿಗೂ ಮೊದಲು ಪಡೆದಿದ್ದ ಜಾಧವ್ ಪತ್ನಿಯವರ ಚಪ್ಪಲಿಯನ್ನೂ ಹಿಂದಿರುವಾಗ ವಾಪಸ್ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದ್ದು, ಪಾಕಿಸ್ತಾನದ ಕುತ್ಸಿತ ಮನಸ್ಸಿನ ಪ್ರದರ್ಶನವಾಗಿದೆ.
ಅಲ್ಲದೆ ಜಾಧವ್ ಅವರ ತಾಯಿ ಹಾಗೂ ಪತ್ನಿ ತೊಟ್ಟುಕೊಂಡಿದ್ದ ಬಟ್ಟೆಗೆ ಬದಲಿಗೆ ಬೇರೆ ಬಟ್ಟೆ ನೀಡಿ ಕಳುಹಿಸಿದ್ದು, ಪಾಕಿಸ್ತಾನ ಎಂಥ ಮನಸ್ಥಿತಿ ಹೊಂದಿದೆ ಎಂಬುದು ಸಾಬೀತಾಗಿದೆ.
ಇದಕ್ಕೂ ಮೊದಲು ಕುಲಭೂಷಣ ಜಾಧವ್ ಸಂಬಂಧಿಕರಿಗೆ ಭೇಟಿ ನೀಡಲು ಅನುಮತಿ ಹಾಗೂ ವೀಸಾ ಒದಗಿಸುವುದಾಗಿ ಘೋಷಿಸಿದ್ದ ಪಾಕಿಸ್ತಾನ, ವಿಶ್ವದ ಎದುರು ಮಾನವೀಯತೆಯ ನಾಟಕವಾಡಿತ್ತು. ಆದರೆ ಭಾರತೀಯರನ್ನು ತನ್ನ ದೇಶಕ್ಕೆ ಕರೆಯಿಸಿಕೊಂಡು ಅಗೌರವದಿಂದ ನಡೆದುಕೊಂಡಿರುವುದು ನೆರೆರಾಷ್ಟ್ರದ ಕೀಳು ಚಿಂತನೆಯ ಅನಾವರಣವಾಗಿದೆ. ಆ ಮೂಲಕ ಪಾಕಿಸ್ತಾನ ಎಂದಿಗೂ ನಂಬಿಗೆಯ ಹಾಗೂ ಸಾತ್ವಿಕ ವಿಚಾರವುಳ್ಳ ರಾಷ್ಟ್ರವಲ್ಲ ಎಂಬುದು ವಿಶ್ವದ ಎದುರು ಬಹಿರಂಗವಾಗಿದೆ.
Leave A Reply