ಕೊಳಕ ಉಗ್ರ ಬುರ್ಹಾನ್ ವನಿಯನ್ನು ಹೊಗಳಿದ, ಖಲಿಸ್ತಾನ ಪ್ರತ್ಯೇಕ ಬೆಂಬಲಿಗ ಮೂಲಭೂತವಾದಿ ಪತ್ರಿಕೆ
ಚಂಡಿಗಡ್: ಕಾಶ್ಮೀರ ಕಣಿವೆಯಲ್ಲಿ ಭಾರತದ ಸೌರ್ವಭೌಮತ್ವಕ್ಕೆ ಕಂಟವಾಗಿದ್ದ ಉಗ್ರ ಬುರ್ಹಾನ್ ವನಿಯನ್ನು ಸೇನೆ 2016 ಜುಲೈನಲ್ಲಿ ಹೊಡೆದುರುಳಿಸಿತ್ತು, ಆಗ ಕೆಲ ಡೋಂಗಿ ವಿಚಾರವ್ಯಾದಿಗಳು ವನಿ ಹತ್ಯೆಯನ್ನು ಖಂಡಿಸಿ, ಸೌಹಾರ್ದದ ನಾಟಕವಾಡಿದ್ದರು. ಇದೀಗ ಅವರ ಸಾಲಿಗೆ ಪಾಕಿಸ್ತಾನ ಪರವಿರುವ ಸಿಖ್ ಮೂಲಭೂತವಾದಿಗಳು ಸೇರಿದ್ದು, ಅವರ ಪತ್ರಿಕೆಯೊಂದರಲ್ಲಿ ಉಗ್ರ ಬುರ್ಹಾನ್ ವನಿಯನ್ನು ಬೆಂಬಲಿಸಿ, ಹೊಗಳಲಾಗಿದೆ.
ಪಾಕ್ ಪರ ಹೋರಾಟಕ್ಕೆ ಬೆಂಬಲಿಸುತ್ತಿರುವ ಸಿಖ್ ಮೂಲಭೂತವಾದಿಗಳು ಭಾರತದಿಂದ ಸಿಖ್ ರಾಷ್ಟ್ರ ಪ್ರತ್ಯೇಕವಾಗಬೇಕು ಎಂದು ಆಗ್ರಹಿಸಿದ್ದಾರೆ. ಆದ್ದರಿಂದ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲಿಸಿದ, ಸೈನಿಕರ ಗುಂಡಿಗೆ ಬಲಿಯಾದ ಬುರ್ಹಾನ್ ವನಿಯನ್ನು ಬೆಂಬಲಿಸಿದ್ದಾರೆ. ಆತನಿಗೆ ಹೀರೋ ಪಟ್ಟ ಕಟ್ಟಿ, ಯುವಕರನ್ನು ಮತ್ತು ಪಾಕಿಸ್ತಾನವನ್ನು ಸೆಳೆಯುವ ವಿಫಲ ಯತ್ನ ನಡೆಸಿದೆ. ತನ್ನ ಪತ್ರಿಕೆಯ ಮುಖಪುಟದಲ್ಲಿ ಬುರ್ಹಾನ್ ವನಿಗೆ ಹೀರೋ ಪಟ್ಟ ಕಟ್ಟಿರುವುದು ಸ್ವಾಭಿಮಾನಿಗಳು ಮತ್ತು ದೇಶಾಭಿಮಾನಿಗಳಾಗಿರುವ ಸಿಖ್ ರು ಮತ್ತು ಭಾರತವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಪರವಿರುವ ‘ವಂಗಾರ್’ ಪತ್ರಿಕೆಯಲ್ಲಿ ‘ಹೀರೋ ಆಫ್ ಪ್ರಿಡ್ಂ ಆಫ್ ಕಾಶ್ಮೀರ್’ ಎಂದು ಮುಖಪುಟದಲ್ಲೇ ವರ್ಣಿಸಿದೆ. ಅಲ್ಲದೇ ಬುರ್ಹಾನ್ ವನಿ ಚಿತ್ರವನ್ನು ಬಳಸಿ, ‘ಇಂಡಿಯಾ ಔಟ್ ಆಫ್ ಕಾಶ್ಮೀರ್’ ಎಂದು ಹೆಡಿಂಗ್ ನೀಡಿ ಭಾರತದಿಂದ ಪ್ರತ್ಯೇಕವಾಗಬೇಕು ಎಂದು ಆಗ್ರಹಿಸಿ ಲೇಖನ ಬರೆದಿದೆ. ಅಲ್ಲದೇ ಕಾಶ್ಮೀರದಲ್ಲಿ ಕಲ್ಲು ಎಸೆಯುವವರ ಚಿತ್ರ ಬಳಸಿದೆ.
ಪತ್ರಿಕೆ 2016 ಅಗಸ್ಟ್ ನಲ್ಲೇ ಪ್ರಕಟಣೆಯಾಗಿದ್ದು, ಆದರೆ ಒಂದು ವರೆ ವರ್ಷದ ನಂತರ ನಡೆಯುತ್ತಿರುವ ಜೋರ್ ಮೇಳದಲ್ಲಿ ಪತ್ರಿಕೆ ದೊರೆತಿದೆ. ಗುರುಗೋವಿಂದ್ ಸಿಂಗ್ ರ ಮಕ್ಕಳಾದ ಶಹಿಬ್ಜಾದ್ ಬಾಬಾ ಜೋರಾವರ್ ಸಿಂಗ್ ಮತ್ತು ಶಹಿಬ್ಜಾದ್ ಬಾಬಾ ಫತೆಹ್ ಸಿಂಗ್ ಹುತಾತ್ಮರಾದ ದಿನದ ನಿಮಿತ್ತ ಜೋರ್ ಮೇಳ ಆಚರಿಸಲಾಗುತ್ತದೆ. ಮೇಳದಲ್ಲಿ ಸಿಖ್ ಧರ್ಮದ ಲಕ್ಷಾಂತರ ಜನರು ಭಾಗವಹಿಸುತ್ತಾರೆ.
ಖಲಿಸ್ತಾನ ಬೆಂಬಲಿಗ ಅಂಗಡಿಯಲ್ಲಿ ಈ ಪತ್ರಿಕೆ ಜತೆಗೆ ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಕುರಿತ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ. ಅಲ್ಲದೇ ಬೈಕ್ ಮೇಲೆ ಅಂಟಿಸುವ ಚೀಟಿಗಳು, ಕರ ಪತ್ರಗಳು, ಬ್ಯಾಡ್ಜ್ ಸ್ ಗಳನ್ನು ಮಾರಾಟ ಮಾಡುತ್ತಿದ್ದ. ಅಲ್ಲದೇ ಖಲಿಸ್ತಾನ ಹೋರಾಟಗಾರ ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಬೆಂಬಲಿಸಿ ಕರ ಪತ್ರಗಳನ್ನು ಮಾರಾಟ ಮಾಡುತ್ತಿದ್ದ. ಪತ್ರಿಕೆಯಲ್ಲಿ ‘ಸ್ವಾತಂತ್ರ್ಯದ ಸಂದೇಶ’ ಎಂಬ ಹೆಸರಲ್ಲಿ ಎರಡು ಲೇಖನಗಳನ್ನು ಜಗ್ತಾರ್ ಸಿಂಗ್ ಹವಾರಾ ಬರೆದಿದ್ದಾನೆ. ಈತ ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದಾನೆ.
Leave A Reply