• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಡೀ ದಿನ ಜಾತಿ, ಧರ್ಮವನ್ನು ತಲೆಯ ಮೇಲೆ ಹೊತ್ತುಕೊಂಡರೆ ಅದು ಭಾರವಾಗುತ್ತದೆ!

Hanumantha Kamath Posted On December 27, 2017


  • Share On Facebook
  • Tweet It

ಉತ್ತರ ಕರ್ನಾಟಕದಲ್ಲಿ ಮಹಾದಾಯಿಯ ಗಲಾಟೆಯಾಗುತ್ತಿದೆ. ಅದೀಗ ಬೆಂಗಳೂರಿನ ತನಕ ವ್ಯಾಪಿಸಿ ಆಕ್ರೋಶ ಬುಗಿಲೆದ್ದಿದೆ. ಒಂದಿಷ್ಟು ಸಮಯದ ಹಿಂದೆ ಕಾವೇರಿ ಗಲಾಟೆ ನಡೆದಿತ್ತು. ನಮ್ಮಲ್ಲಿ ನೇತ್ರಾವತಿಯನ್ನು ಉಳಿಸುವ ಬಗ್ಗೆ ಹೋರಾಟ ನಡೆದಿದೆ. ಮುಂದೆ ಯುದ್ಧ ಏನಾದರೂ ಆದರೆ ಅದು ನೀರಿಗಾಗಿ ಎನ್ನುವುದು ನಿಜವಾಗುತ್ತದೆಯೋ ಎನ್ನುವ ಪೂರ್ವಸೂಚನೆ ಇದು ಇರಬಹುದಾ. ಇದರ ನಡುವೆ ನನ್ನ ಕನಸಿನ ಕರ್ನಾಟಕ ಹೇಗಿರಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಲು ಸೂಕ್ತ ಕಾಲ. ಯಾರಿಗೂ ಗಲಾಟೆ ಬೇಡಾ, ಎಲ್ಲರೂ ಬಯಸುವುದು ಶಾಂತಿ, ಸುವ್ಯವಸ್ಥೆ ಉಳ್ಳ ಕರ್ನಾಟಕವನ್ನು. ಹಾಗಾದರೆ ಅದು ಹೇಗಿರಬೇಕು ಎನ್ನುವುದನ್ನು ನಾವೇ ಹೇಳಬೇಕು.
ಯುವ ಬ್ರಿಗೇಡ್ ಈ ನಿಟ್ಟಿನಲ್ಲಿ ನನ್ನ ಕನಸಿನ ಕರ್ನಾಟಕ ಎನ್ನುವ ಘೋಷವಾಕ್ಯದ ಅಡಿಯಲ್ಲಿ ಸಮಾಜದ ವಿವಿಧ ಸ್ತರಗಳ ಜನರನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸುತ್ತಿದೆ. ಆ ನಿಟ್ಟಿನಲ್ಲಿ ಯುವ ಬ್ರಿಗೇಡ್ ಕಾರ್ಯಕತೃರು ನನ್ನನ್ನು ಭೇಟಿಯಾಗಿ ನನ್ನ ಕನಸಿನ ಮಂಗಳೂರು ಹೇಗಿರಬೇಕು ಎನ್ನುವುದರ ಕುರಿತು ಅಭಿಪ್ರಾಯ ಕೇಳಿದ್ದಾರೆ. ಆಗ ನಾನು ಅವರ ಉದ್ದೇಶ ಹಾಗೂ ಅದು ಅನುಷ್ಟಾನಕ್ಕೆ ಬರಲು ಹೇಗೆ ಸಾಧ್ಯ ಎನ್ನುವುದರ ಕುರಿತು ಅವರೊಂದಿಗೆ ಚರ್ಚಿಸಿದ್ದೇನೆ. ಅವರ ಪ್ರಕಾರ “ನಮ್ಮಲ್ಲಿ ಹಲವಾರು ಜನರಲ್ಲಿ ತಮ್ಮ ಊರು ಹೇಗಿರಬೇಕು ಎನ್ನುವುದರ ಕುರಿತು ವಿವಿಧ ಐಡಿಯಾಗಳಿವೆ. ಹೆಚ್ಚಿನವರಿಗೆ ಅದನ್ನು ಅನುಷ್ಟಾನಕ್ಕೆ ತರಲು ಸಾಧ್ಯ ಎನ್ನುವ ಕಲ್ಪನೆಗಳಿರುತ್ತವೆ. ಕೆಲವರು ತಮಗೆ ಬಂದ ಯೋಚನೆಗಳನ್ನು ಗೆಳೆಯರಲ್ಲಿ, ಸಹೋದ್ಯೋಗಿಗಳಲ್ಲಿ ಚರ್ಚಿಸಿ ಅಲ್ಲಿಯೇ ಬಿಟ್ಟಿರುತ್ತಾರೆ. ಇದರಿಂದ ಏನು ಪ್ರಯೋಜನವಿಲ್ಲ. ನಾವು ಆರಿಸಿ ಕಳುಹಿಸಿದ ಶಾಸಕರು ನಮಗಾಗಿ ಏನು ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆ ನಮ್ಮಲ್ಲಿರಬೇಕು. ಒಬ್ಬ ಶಾಸಕನಿಗೆ ಐದು ವರ್ಷ ಕೊಟ್ಟರೆ ಅವನು ಇಂತಿಂತಹ ಕೆಲಸ ಮಾಡಿದರೆ ಮಾತ್ರ ನಮ್ಮ ಊರು ಚೆನ್ನಾಗಿರುತ್ತದೆ ಎನ್ನುವ ದೂರದೃಷ್ಟಿ ನಮ್ಮಲ್ಲಿ ಇರಬೇಕು. ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡರೆ ಅದು ಅಲ್ಲಿಯೇ ಕರಗಿ ಹೋಗುತ್ತದೆ” ಎಂದರು. ಅದು ನಿಜ ಕೂಡ.
ಹಾಗಂತ ನಿಮ್ಮ ಯುವಕ, ಯುವತಿ ಮಂಡಲದ ಕಾರ್ಯಕ್ರಮದಲ್ಲಿ ನಿಮ್ಮ ಊರಿನ ಅಭಿವೃದ್ಧಿಯ ಕನಸುಗಳ ಬಗ್ಗೆ ನೀವು ಭಾಷಣ ಮಾಡಿದರೆ ಮರುದಿನ ದಿನಪತ್ರಿಕೆಗಳ ಸಪ್ಲಿಮೆಂಟರಿಯಲ್ಲಿ ಎಲ್ಲಿಯೋ ಮೂಲೆಯಲ್ಲಿ ಬರುತ್ತದೆ. ಫೇಸ್ ಬುಕ್ಕಿನಲ್ಲಿ ಬರೆದರೆ ಅಸಂಖ್ಯಾತ ಜನರಿಗೆ ಮುಟ್ಟಬಹುದಾದರೂ ಅದು ಬಿಡಿಬಿಡಿಯಾಗಿ ಇರುವುದರಿಂದ ಒಂದೇ ಗುಟುಕಿಗೆ ಸಿಗುವುದಿಲ್ಲ. ಆದ್ದರಿಂದ ಅಂತಹ ಹಲವು ಆಲೋಚನೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟು ಮಾಡುವ ಯುವ ಬ್ರಿಗೇಡಿನ ವಿನೂತನ ಪ್ರಯತ್ನ ಚೆನ್ನಾಗಿದೆ.
ಕಳೆದ ಐದು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಆದಂತಹ ಅನೇಕ ಘಟನೆಗಳನ್ನು ನೋಡಿ ಜನ ನಿಜಕ್ಕೂ ರೋಸಿ ಹೋಗಿದ್ದಾರೆ. ಪಟ್ಟಿ ಮಾಡಿದರೆ ನಾನು ಕಾಂಗ್ರೆಸ್ಸಿನ ವಿರೋಧಿ ಎಂದು ಕೂಡಲೇ ಕಮೆಂಟ್ ಮಾಡಲು ಕೆಲವರು ಕಾಯುತ್ತಾ ಇರುತ್ತಾರೆ. ಆದರೆ ನೆಗೆಟಿವ್ ಅಂಶಗಳನ್ನು ಪಟ್ಟಿ ಮಾಡಿ ಕುಳಿತರೆ ಅದು ನನ್ನ ಕನಸಿನ ಕರ್ನಾಟಕ ಆಗುವುದಿಲ್ಲ. ಹಾಗಂತ ಇಡೀ ಕರ್ನಾಟಕದ ಬಗ್ಗೆ ನಾನು ಹೇಳುವುದಕ್ಕಿಂತ ಮೊದಲಿಗೆ ನನ್ನ ಊರು ಸರಿಯಾಗಬೇಕು. ನನ್ನ ಕನಸಿನ ಮಂಗಳೂರು ಬದಲಾದರೆ ಆಗ ಇಡೀ ರಾಜ್ಯದ ಆಯಾ ಊರಿನ ನಾಗರಿಕರ ಕನಸಿನೊಂದಿಗೆ ಸಮ್ಮಿಳಿತಗೊಂಡು ಒಂದು ಸಮಗ್ರ ಚಿತ್ರಣ ಸಿಗಬಹುದು. ಹಾಗೆ ನನ್ನ ಮಂಗಳೂರು ಹೇಗಿರಬೇಕು ಎನ್ನುವ ಕನಸನ್ನು ನಿಮ್ಮೆದರು ಬಿಚ್ಚಿಡುತ್ತಾ ಹೋಗುತ್ತಿದ್ದೇನೆ. ನಾಳೆ, ನಾಡಿದ್ದೋ ಯುವ ಬ್ರಿಗೇಡಿನ ಹುಡುಗರು ಬಂದು ನನ್ನ ಅಭಿಪ್ರಾಯವನ್ನು ಚಿತ್ರೀಕರಿಸಿ ಹೋಗುತ್ತಾರಂತೆ. ಅದಕ್ಕಿಂತ ಮೊದಲು ನಿಮ್ಮೊಂದಿಗೆ ನನ್ನ ಕನಸು ಹಂಚಿಕೊಳ್ಳುತ್ತಿದ್ದೇನೆ. ಕಳೆದ ಎರಡೂವರೆ ವರ್ಷಗಳಲ್ಲಿ ಸಕ್ರಿಯವಾಗಿ ಫೇಸ್ ಬುಕ್ಕಿನಲ್ಲಿ ನಿರಂತರ ಬರೆಯಲು ಶುರು ಮಾಡಿದ ನಂತರ ನನ್ನ ಕನಸುಗಳ ಬಗ್ಗೆ ನನ್ನ ಹಿತೈಷಿಗಳಿಗೆ ಒಂದಿಷ್ಟು ಐಡಿಯಾ ಇದ್ದೇ ಇರುತ್ತದೆ.
ಮೊದಲನೇಯದಾಗಿ ನಾನು ಅಂದುಕೊಳ್ಳುವುದೇನೆಂದರೆ ನಮ್ಮ ಜಾತಿ, ಧರ್ಮ, ಮತ, ಪಂಗಡ ಎಲ್ಲವನ್ನು ಮನೆಯ ಒಳಗೆ ಇಟ್ಟು ಹೊರಗೆ ಬಂದ ಬಳಿಕ ನಾನೊಬ್ಬ ಸುಸಂಸ್ಕೃತ ನಾಗರಿಕ ಎನ್ನುವುದು ಮಾತ್ರ ಮಾಡಲು ಸಾಧ್ಯವಿದೆಯಾ ಎನ್ನುವುದು ನನ್ನ ಕನಸು. ನೀವು ಮನೆಯಲ್ಲಿ ಯಾವ ಧರ್ಮವನ್ನು ಬೇಕಾದರೂ ಆಚರಿಸಿ, ಆದರೆ ಅದನ್ನು ತಲೆಯ ಮೇಲೆ ಹೊತ್ತುಕೊಂಡು ಇಡೀ ದಿನ ಇದ್ದರೆ ಅದು ನಿಮಗೂ ಭಾರವೆನಿಸುತ್ತದೆ. ಧರ್ಮ, ಜಾತಿಯನ್ನು ಮನೆಯ ಅಂಗಳ ದಾಟುವ ಮೊದಲು ಕೆಳಗಿಳಿಸಿ ಎಲ್ಲರ ಬಗ್ಗೆ ಪ್ರೀತಿ, ಕಾಳಜಿ ತೋರಿಸುವಂತಹ ವ್ಯವಸ್ಥೆ ಆಗಬಹುದಾ ಎನ್ನುವುದು ನನ್ನ ಕನಸು. ಸಾರ್ವಜನಿಕವಾಗಿ ನಾನು ಕೇವಲ ಮನುಷ್ಯ. ಬೇಕಾದರೆ ನಿಮ್ಮ ಹೆಸರನ್ನು ಹೇಳುವಾಗ ಆದಷ್ಟು ಸರ್ ನೇಮ್ ಹೇಳಬೇಕಾದ ಅವಶ್ಯಕತೆ ಇಲ್ಲದಿದ್ದಲ್ಲಿ ಹೇಳಲು ಹೋಗುವುದೇ ಬೇಡಾ. ಕೆಲವರು ಸರ್ ನೇಮ್ ಕೇಳುವುದೇ ನಿಮ್ಮ ಜಾತಿ ಗೊತ್ತಾಗಲು. ಆದಷ್ಟು ಅದನ್ನು ನಿಲ್ಲಿಸೋಣ. ಪರಸ್ಪರರ ಧರ್ಮದ ಹಬ್ಬಗಳಂದು ನಿಮ್ಮ ಸ್ನೇಹಿತನ ಮನೆಗಳಿಗೆ ಸಿಹಿತಿಂಡಿ ಕಳುಹಿಸಿಕೊಟ್ಟು ವಿಶ್ ಮಾಡಿ. ಒಂದು ನಗು ಅವರ ಮುಖದಲ್ಲಿ ಮೂಡಿಸುವ ಕೆಲಸ ನಮ್ಮದಾಗಲಿ. ಜಾತಿ, ಧರ್ಮದ ಮೇಲೆ ರಾಜಕೀಯ ಮಾಡುವ ಯಾರ ಮಾತುಗಳಿಗೂ ಕಿವಿ ಕೊಡಬೇಡಿ. ನೀವು ಕೇಳುವುದಿಲ್ಲ ಎಂದ ಕೂಡಲೇ ಅವರು ಕೂಡ ಹಾಗೆ ಮಾತನಾಡಲು ಹೋಗುವುದಿಲ್ಲ. ನಾವು ಬೇರೆಯವರಿಗೆ ಏನು ಕೊಡುತ್ತೇವೆಯೋ ನಮಗೂ ಅದೇ ತಿರುಗಿ ಬರುತ್ತದೆ ಎನ್ನುವುದು ನೆನಪಿರಲಿ. ಇಂತಹ ಮಂಗಳೂರನ್ನು ಕಾಣುವ ಕನಸು ನಿಮಗೂ ಬಿದ್ದಿರಬಹುದು, ಅಲ್ವಾ. ಅದರೊಂದಿಗೆ ಲವ್ ಜಿಹಾದ್ ಎನ್ನುವ ಶಬ್ದ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಮಟ್ಟದಲ್ಲಿ ಕೇಳುತ್ತಿದೆ. ಅದಕ್ಕೆ ಸರಿಯಾಗಿ ಒಂದಿಷ್ಟು ಹೆಣ್ಣುಮಕ್ಕಳು ಸಾಮಾಜಿಕ ತಾಣಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದು ಮನಸ್ಸುಗಳನ್ನು ಒಡೆಯುತ್ತಿದೆ. ಇದಕ್ಕೆ ಪುಲ್ ಸ್ಟಾಪ್ ಕೊಡೋಣ್ವಾ. ಹೀಗೆ ಹೇಳಿದ ಕೂಡಲೇ ಇಲ್ಲಿ ಬೇರೊಂದು ಧರ್ಮದ ವಿರುದ್ಧ ಅನಿಸಿಕೆ ವ್ಯಕ್ತಪಡಿಸಿದ್ದೆನೆ ಎಂದಲ್ಲ. ಬಟ್ಟೆ ಹಾರಿ ಮುಳ್ಳಿನ ಬೀಳುವುದನ್ನು ತಪ್ಪಿಸುವುದಕ್ಕಾಗಿ ಬಟ್ಟೆಯನ್ನು ಒಣಗಿಸಲು ಬಿಸಿಲಿಗೆ ಹಾಕುವಾಗ ಅದಕ್ಕೊಂದು ಕ್ಲಿಪ್ ಕೂಡ ಹಾಕಿದರೆ ಬಟ್ಟೆ ಅಲ್ಲಾಡುವುದಿಲ್ಲ!

  • Share On Facebook
  • Tweet It


- Advertisement -
nanna Kansina Karnataka


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search