ಬೆಳಗ್ಗೆ ತಡವಾಗಿ ಎದ್ದಳೆಂದು ತಲಾಖ್ ನೀಡಿದ ಭೂಪ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿರುವ ತ್ರಿವಳಿ ತಲಾಖ್ ನಿಷೇಧಕ್ಕೆ ಸಿದ್ಧತೆ ನಡೆಸುತ್ತಿದ್ದರೇ, ಇತ್ತ ತ್ರಿವಳಿ ತಲಾಖ್ ನೀಡಿ ಮುಸ್ಲಿಂ ಮಹಿಳೆಯರನ್ನು ಬೀದಿಗೆ ತಳ್ಳುವ ಹೀನ ಪದ್ಧತಿ ಮುಂದುವರಿದಿದೆ. ನಿತ್ಯ ಹೊಸ ಹೊಸ ತಲಾಖ್ ನೀಡಿರುವ ವರದಿಗಳು ದೇಶದಲ್ಲಿ ನಿರಂತರವಾಗಿ ಕೇಳಿ ಬರುತ್ತಿವೆ. ಇದೀಗ ಉತ್ತರ ಪ್ರದೇಶದ ಅಜಿಮ್ ನಗರದ ರಾಮಪುರದಲ್ಲಿ ಮಹಿಳೆಯೊಬ್ಬಳು ಬೆಳಗ್ಗೆ ತಡವಾಗಿ ಎದ್ದಳು ಎಂದು ತ್ರಿವಳಿ ತಲಾಖ್ ನೀಡಿದ್ದಾನೆ.
ಬೆಳಗ್ಗೆ ತಡವಾಗಿ ಎದ್ದಿದ್ದಾಳೆ ಎಂಬ ಕ್ಷುಲಕ ಕಾರಣಕ್ಕೆ ತ್ರಿವಳಿ ತಲಾಖ್ ನೀಡಿದಲ್ಲದೇ, ಮಹಿಳೆಯಳೆಗೆ ಹೀನಾಯವಾಗಿ ಹೊಡೆದು, ನಿರಂತರವಾಗಿ ಕಿರುಕುಳವನ್ನು ಪತಿ ನೀಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ನ್ಯಾಯ ಕೊಡಿಸಿ ಎಂದು ಸರ್ಕಾರದ ಕದ ತಟ್ಟಿದ್ದಾಳೆ. ಅಜಿಮ್ ನಗರದ ಗುಲ್ ಅಫ್ಶನ್ ತ್ರಿವಳ ತಲಾಖ್ ನೀಡಿದಲ್ಲದೇ ಮಹಿಳೆಗೆ ಕಿರುಕುಳ ನೀಡಿ, ನಿರಂತರವಾಗಿ ಹಿಂಸೆ ನೀಡಿರುವ ಆರೋಪಿ.
ತ್ರಿವಳ ತಲಾಖ್ ನ್ನು ಕೇಂದ್ರ ಸರ್ಕಾರ ನಿಷೇಧಿಸಿ, ಅದಕ್ಕೆ ಅಪರಾದ ಎಂದು ನಿರ್ಧರಿಸುತ್ತಿರುವ ವೇಳೆಯೇ ಈ ಹೊಸ ಘಟನೆ ನಡೆದಿದ್ದು, ಇದಕ್ಕೆ ಶೀಘ್ರ ತಡೆ ಒಡ್ಡದಿದ್ದರೇ ಇಂತಹ ಹೀನ ಘಟನೆಗಳನ್ನು ಇನ್ನು ಹೆಚ್ಚಲಿವೆ ಎಂದು ಮುಸ್ಲಿಂ ಮಹಿಳಾ ಸಂಘಟನೆಗಳು ಆಗ್ರಹಿಸಿವೆ.
Leave A Reply