ಅಫ್ಜಲ್ ಗುರುವಿಗೆ ಜೈ ಎನ್ನುವ ಮನಸ್ಥಿತಿಯವರಿಗೆ ಜಾಧವ್ ಉಗ್ರನಾಗಿ ಕಾಣುವುದರಲ್ಲಿ ಅಚ್ಚರಿಯಿಲ್ಲ ಬಿಡಿ!
ಲಖನೌ: ಪ್ರಾಯಶಃ ಹೀಗೆ ಭಾರತ ಬಿಟ್ಟು ಯಾವ ದೇಶದಲ್ಲೂ ನಡೆಯಲಿಕ್ಕಿಲ್ಲ ಬಿಡಿ. ಎಲ್ಲೋ ಇರಾಕ್ ನಲ್ಲಿ ಯುದ್ಧವಾಗಿ ಮುಸ್ಲಿಮರು ಸತ್ತರೆ ಭಾರತದಲ್ಲಿ ಮೇಣದ ಬತ್ತಿ ಉರಿಸುತ್ತಾರೆ. ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಜೆಎನ್ ಯು ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತಾನೆ. ಪಾಕಿಸ್ತಾನ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿದರೆ ವಿಜಯಪುರದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಇವರೆಲ್ಲ ದೇಶದ್ರೋಹಿ ಮನಸ್ಥಿತಿಯವರೆಂದು ಬಿಡಿಸಿ ಹೇಳಬೇಕಿಲ್ಲ.
ಇದೇ ರೀತಿ, ಸಮಾಜವಾದಿ ಪಕ್ಷದ ಮುಖಂಡನೊಬ್ಬ ಹೇಳಿಕೆ ನೀಡಿದ್ದು, ಪಾಕಿಸ್ತಾನದಿಂದ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ವಿಷಯದಲ್ಲಿ ಪಾಕಿಸ್ತಾನದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತ ಭಯೋತ್ಪಾದಕರನ್ನು ಹೇಗೆ ನಡೆಸಿಕೊಳ್ಳುತ್ತದೆಯೋ ಅದೇ ರೀತಿ ಜಾಧವ್ ಅವರನ್ನೂ ಉಗ್ರರಂತೆಯೇ ಪಾಕಿಸ್ತಾನ ನೋಡಿಕೊಳ್ಳುತ್ತದೆ ಎಂದು ಸಂಸದ ನರೇಶ್ ಅಗರ್ ವಾಲ್ ಹೇಳಿಕೆ ನೀಡಿದ್ದಾರೆ.
ಜಾಧವ್ ಅವರಂತೆ ಬೇಹುಗಾರಿಕೆ ಆರೋಪದಲ್ಲಿ ಭಾರತೀಯ ಜೈಲುಗಳಲ್ಲಿ ಪಾಕಿಸ್ತಾನಿಯರು ಇದ್ದಾರೆ. ಪಾಕಿಸ್ತಾನ ಸಹ ಬೇಹುಗಾರಿಕೆ ಆರೋಪದಲ್ಲಿ ಜಾಧವ್ ಅವರನ್ನು ಬಂಧಿಸಿ ಇಟ್ಟಿದೆ. ಆದರೆ ಭಾರತೀಯ ಮಾಧ್ಯಮಗಳೇಕೆ ಜಾಧವ್ ಅವರ ಬಗ್ಗೆ ಮಾತ್ರ ಆಸಕ್ತಿ ಹೊಂದಿವೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಅಲ್ಲ ಸುಖಾಸುಮ್ಮನೆ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿದ್ದಲ್ಲದೆ ಗಲ್ಲು ಶಿಕ್ಷೆ ವಿಧಿಸಿರುವ ಪಾಕಿಸ್ತಾನದ ಉದ್ಧಟತನಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯವೇ ಮಂಗಳಾರತಿ ಮಾಡಿದ್ದರೂ, ಇಡೀ ದೇಶವೇ ಜಾಧವ್ ಪರ ನಿಂತಿದ್ದರೂ, ಅವರನ್ನು ಉಗ್ರರೊಂದಿಗೆ ಸಮೀಕರಿಸುತ್ತಾರಲ್ಲ, ಇಂಥ ಮನಸ್ಥಿತಿಗಳಿಗೆ ಧಿಕ್ಕಾರವಿರಲಿ.
Leave A Reply