ಬಜರಂಗ ದಳ ಕಾರ್ಯಕರ್ತರಿಗೆ ಸ್ವಯಂ ರಕ್ಷಣೆಗಾಗಿ ತರಬೇತಿ
ಕೋಲ್ಕತಾ: ಸ್ವಯಂ ರಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ನ ಯುವ ಘಟಕವಾದ ಬಜರಂಗದಳದ 150 ಯುವಕರಿಗೆ ಸ್ವಯಂ ರಕ್ಷಣೆಗಾಗಿ ಒಂದು ದಿನದ ತರಬೇತಿ ನೀಡಲಾಗಿದೆ.
ದಕ್ಷಿಣ ಬಂಗಾಳದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಹಿಂದೂ ಕಾರ್ಯಕರ್ತರು ಯಾವುದೇ ಅಪಾಯ ಎದುರಾದರೆ ರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಲಾಗಿದೆ ಎಂದು ಸಂಘಟನೆಯ ಸಹಾಯಕ ಕಾರ್ಯದರ್ಶಿ ಕುಶಾಲ್ ಕುಂಡು ತಿಳಿಸಿದ್ದಾರೆ.
ತರಬೇತಿ ಶಿಬಿರದಲ್ಲಿ ಸುಮಾರು 156 ಯುವ ಕಾರ್ಯಕರ್ತರು ಪಾಲ್ಗೊಂಡಿದ್ದು, ಇಕ್ಕಟ್ಟಿನ ಪ್ರದೇಶದಲ್ಲಿ ಚಲಿಸುವುದು, ಕೆಸರಿನಲ್ಲಿ ಓಡುವುದು, ಕಟ್ಟಿಗೆ ಮೇಲೆ ನಡೆಯುವುದು, ಕಟ್ಟಿಗೆ ಕಂಬ ಹತ್ತುವುದು, ಚಕ್ರದೊಳಗಿನಿಂದ ನುಸುಳುವುದು ಸೇರಿ ಹಲವು ತರಬೇತಿ ನೀಡಲಾಗಿದೆ.
ಅಲ್ಲದೆ, ಎ.22 ಕ್ಯಾಲಿಬರ್ ಬೋಲ್ಟ್ ಆ್ಯಕ್ಷನ್ ಬಂದೂಕು ಬಳಕೆ, ಗಾಳಿಯಲ್ಲಿ ಗುಂಡು ಹಾರಿಸುವ ತರಬೇತಿ ಸಹ ನೀಡಿದ್ದು, ಸ್ವಯಂ ರಕ್ಷಣೆಗೆ ಹಲವು ಪಟ್ಟು ಕಲಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಸಂಘಟನೆ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಶಿಬಿರ ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬಂಗಾಳದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Leave A Reply