ಮುಸ್ಲಿಮರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದ ಓವೈಸಿ ಚಿತ್ರ ಮುಸ್ಲಿಮರೇ ಸುಟ್ಟಿದ್ದಾರೆ, ಓವೈಸಿ ತಪ್ಪೇನು.. ಗೊತ್ತೆ?
ವಾರಣಾಸಿ: ದೇಶಾದ್ಯಂತ ನಿತ್ಯ ಕಣ್ಣೀರ ಕೋಡಿ ಹರಿಸಿ, ಮದುವೆಯಾದ ಮೂರು ದಿನಕ್ಕೆ ಕೈಯಲ್ಲಿ ನಾಲ್ಕು ಮಕ್ಕಳನ್ನು ನೀಡಿ ತಲಾಖ್, ತಲಾಖ್ ಎಂದು ಹೇಳಿ ಮಹಿಳೆಯರನ್ನು ಬೀದಿಗೆ ಬಿಟ್ಟು ಹೋಗುತ್ತಿದ್ದ ಮುಸ್ಲಿಮರ ದುಷ್ಟ ನೀತಿಯಾದ ತಲಾಖ್ ಪದ್ಧತಿ ನಿಷೇಧಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿ, ಅಂಗೀಕಾರ ಪಡೆದಿದೆ. ಆದರೆ ಇಸ್ಲಾಂ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸುವ ಒಂದು ಒಳ್ಳೆಯ ಮಸೂದೆಯನ್ನು ವಿರೋಧಿಸಿದವರಿಗೆ ತಮ್ಮದೇ ಧರ್ಮದ ಜನರು ಹೇಗೆ ಉಗಿಯುತ್ತಾರೆ ಎಂಬುದಕ್ಕೆ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದ್ದುಲ್ ಮುಸ್ಲಿಮಿನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಸಾಕ್ಷಿಯಾಗಿದ್ದಾರೆ.
ಲೋಕಸಭೆಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಸಂಕಷ್ಟ ನೀಗಿಸಲು ತ್ರಿವಳಿ ತಲಾಖ್ ನಿಷೇಧಿಸುವ ಮಹತ್ತರ ಮಸೂದೆಯನ್ನು ಮಂಡಿಸಿ, ಅಂಗೀಕಾರ ಮಾಡಿದೆ. ಆದರೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಸಂಸದ ಓವೈಸಿ ಅವರು ತ್ರಿವಳಿ ತಲಾಖ್ ನಿಷೇಧದ ಮಸೂದೆಯಿಂದ ಮಹಿಳೆರ ಮೂಲಭೂತ ಹಕ್ಕನ್ನು ಕಸಿದುಕೊಂಡತಾಗುತ್ತದೆ ಎಂದು ಸಂಸತ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಓವೈಸಿ ಅವರ ಪ್ರಖರ ಭಾಷಣಕ್ಕೆ ಸದಾ ಬೆಂಬಲ ನೀಡುತ್ತಿದ್ದ ಮುಸ್ಲಿಮರು ಇಂದು ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಓವೈಸಿ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿರೋಧಿಸುವ ಮೂಲಕ ನಾಟಕ ಮಾಡುತ್ತಿದ್ದಾರೆ. ಅವರಿಗೆ ಮುಸ್ಲಿಮ ಮಹಿಳೆಯರ ಸಂಕಷ್ಟಗಳು ಕಾಣುವುದಿಲ್ಲ. ನಿತ್ಯ ಕಣ್ಣೀರಿಡುವ ಮಹಿಳೆಯರನ್ನು ಅವರು ನೋಡಬೇಕು ಎಂದು ವಾರಣಾಸಿಯಲ್ಲಿ ಮುಸ್ಲಿಂ ಮಹಿಳೆಯರ ಗುಂಪೊಂದು ಓವೈಸಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ.
Leave A Reply