ದೇಶದ ರಕ್ಷಣೆಗಾಗಿ ಜೀವ ನೀಡುವ ಸಿಖ್ ರನ್ನೇ ಐಸಿಸ್ ಬೇಹುಗಾರರೆಂದು ಬಿರುಕು ಹುಟ್ಟಿಸಲು ವಿಫಲ ಯತ್ನ ನಡೆಸುವವನ ಕತೆ ಕೇಳಿ..
‘ಭಾರತದ ಸೈನ್ಯದಲ್ಲಿರುವ ಸಿಖ್ ರೇ ಐಸಿಸ್ ಉಗ್ರ ಸಂಘಟನೆ ಪರ ಬೇಹುಗಾರಿಕೆ ನಡೆಸುತ್ತಾರೆ. ಖಲಿಸ್ತಾನ ಪ್ರತ್ಯೇಕ ರಾಷ್ಟ್ರವಾಗಬೇಕು. ಲಕ್ಷಾಂತರ ಸಿಖ್ ರು ಅವರ ಸ್ವಂತ ರಾಷ್ಟ್ರಕ್ಕಾಗಿ ಹೋರಾಟ ಮಾಡಲು ಸಜ್ಜಾಗಿದ್ದಾರೆ. ಭಾರತದೊಂದಿಗೆ ಅಷ್ಟೇ ವಿಶ್ವದೊಂದಿಗೆ ಕೂಡ ಅವರು ಹೋರಾಟ ನಡೆಸಲಿದ್ದಾರೆ. ಇದು ಸಿಖ್ ರ ನರಮೇದ ನಡೆಸಿದ ಹಿಂದೂ ಮತ್ತು ಬ್ರಾಹ್ಮಿಣರ ಆಡಳಿತದ ವಿರುದ್ಧ. ಭಾರತ ಆ ನರಮೇದಕ್ಕೆ ತಕ್ಕ ಬೆಲೆ ತೆರಬೇಕಾಗಿದೆ’…
ಇದು ಸೋವಿಯತ್ ತ್ತು ಅಪ್ಘನ್ ಯುದ್ಧದಲ್ಲಿ ಪಾಕ್ ವಕ್ತಾರ, ಪ್ರಸ್ತುತ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ವಿಶ್ಲೇಷಕ, ರಕ್ಷಣಾ ತಜ್ಞ ಜೈದ್ ಹಮೀದ್ ತನ್ನ ಟ್ವೀಟರ್ ನಲ್ಲಿ ಬರೆದುಕೊಂಡಿರುವ ವಿಷಯ. ಹೀಗೆ ಅಖಂಡ ಭಾರತದವನ್ನು ಹೇಗೆ ಬ್ರಿಟಿಷರು ಒಡೆದು ಆಳಿದರೋ ಅವರ ಹಾಗೆಯೇ ಟ್ವೀಟರ್ ನಲ್ಲಿ ಜೈದ್ ಹಮೀದ್ ಎಂಬಾತ ಬರೆದುಕೊಂಡು, ಭಾರತದಲ್ಲಿ ಬಿರುಕು ಮೂಡಿಸುವ ವಿಷಯ ವ್ಯಕ್ತಪಡಿಸಿದ್ದಾರೆ.
ನೂರಾರು ವರ್ಷಗಳಿಂದ ಶ್ರದ್ಧೆ, ಭಕ್ತಿ, ಶಕ್ತಿಯಿಂದ ದೇಶದ ಏಕತೆಗೆ ದುಡಿಯುತ್ತಿರುವ ಸಿಖ್ ರ ಮೇಲೆ ಅನುಮಾನ ಹುಟ್ಟಿಸುವ ಈತನ ಟ್ವೀಟರ್ ಹಿಂದಿನ ಉದ್ದೇಶ ಮಾತ್ರ ಸ್ಪಷ್ಟ. ಭಾರತದಲ್ಲಿ ಆಂತರಿಕ ಗಲಭೆ ಸೃಷ್ಟಿಸಿ, ಜನರ ಒಗ್ಗಟ್ಟು ಮುರಿಯಬೇಕು ಎಂಬ ದುರುದ್ದೇಶ ಈತನದ್ದು.
ಭಾರತದ ಸ್ವಾತಂತ್ರ್ಯ, ಏಕತೆ ತಮ್ಮ ರಕ್ತ ಬಸಿದು ಸೇವೆ ನೀಡುತ್ತಿರುವ ಸಿಖ್ ರ ಮೇಲೆ ಭಾರತ ಅನುಮಾನ ಪಡಬೇಕು ಎಂಬ ದೂರಾಲೋಚನೆಯ ಟ್ವೀಟ್ ಜೈದ್ ಹಮೀದ್ ಮಾಡಿದ್ದಾರೆ. ಪದೇ ಪದೆ ಇಂದಿರಾ ಗಾಂಧಿ ಆಡಳಿತದಲ್ಲಿ ನಡೆದ ಸಿಖ್ ರ ನರಮೇಧಕ್ಕೆ ಪ್ರತಿಕಾರ ತೀರಿಸಿಕೊಳ್ಳಲಿದ್ದಾರೆ ಎಂದು ಹಳೆ ನೆನಪುಗಳನ್ನು ಕೆರಳಿಸಿ, ದೇಶದ ಆಂತರಿಕ ಭದ್ರತೆಗೆ ಹೊಡೆತ ನೀಡುವ ಪಾಪಿಸ್ತಾನದ ಜೈದ್ ಹಮೀದ್ ಉದ್ದೇಶ ಸ್ಪಷ್ಟವಾಗಿದೆ. ಇದುವರೆಗೆ ದೇಶಕ್ಕೆ ಕಂಟಕವಾಗಿರುವ ಮುಸ್ಲಿಂ ಮೂಲಭೂತವಾದಿಗಳನ್ನು ಉಲ್ಲೇಖಿಸದೆ, ಕೇವಲ ಖಲಿಸ್ತಾನದ ನೆಪವಿಟ್ಟುಕೊಂಡು ಜೈದ್ ಹಮೀದ್ ತನ್ನ ರಾಷ್ಟ್ರ ಪಾಕಿಸ್ತಾನ ಹಿತ ಕಾಯಲು ಭಾರತದಲ್ಲಿರುವ ಧರ್ಮಗಳ ಮಧ್ಯೆ, ರಾಜ್ಯಗಳ ಮಧ್ಯೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದಾನೆ.
ಭಾರತದ ಸೈನ್ಯದಲ್ಲೇ ಅತ್ಯಂತ ಬಲಿಷ್ಠ ಸೈನಿಕರ ತಂಡವನ್ನು ಹೊಂದಿರುವ ಮತ್ತು ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಸಿಖ್ ರೆಜಿಮೆಂಟ್ ನ ಸೇವೆ ಅಪಾರ. ಇಡೀ ವಿಶ್ವದಲ್ಲೇ ಅತ್ಯಂತ ಬಲಿಷ್ಠವಾಗಿರುವ ಸಿಖ್ ರೆಜಿಮೆಂಟ್ ಭಾರತದ ರಕ್ಷಣಾ ವ್ಯವಸ್ಥೆಗೆ ಒಂದು ಬಲ ನೀಡುತ್ತಿದೆ. ಸಿಖ್ ಸೈನಿಕರ ಮಧ್ಯೆ ವಿಷ ಬೀಜ ಬಿತ್ತಲು, ಒಡಕು ಮೂಡಿಸಲು ಜೈದ್ ಹಮೀದ್ ಇತರಹ ಟ್ವೀಟ್ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಸಿಖ್ ಸೈನ್ಯವನ್ನು ಅನುಮಾನಿಸಿ, ಸಿಖ್ ರನ್ನು ಪ್ರಚೋದಿಸಿ ಪಾಕಿಸ್ತಾನ ಲಾಭ ಪಡೆಯಲು ಹವಣಿಸುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ.
Leave A Reply