ಸಂಸತ್ ನಲ್ಲಿ ತ್ರಿವಳಿ ತಲಾಖ್ ಬಗ್ಗೆ ಚರ್ಚೆ ನಡೆಯಬೇಕಾದರೆ, ಪ್ರತಿಪಕ್ಷದ ಅಧಿನಾಯಕಿ ಗೋವೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು
ಪಣಜಿ: ದೇಶದ ಮುಸ್ಲಿಂ ಮಹಿಳಾ ರಕ್ಷಣೆಯ ವಿಷಯದಲ್ಲಿ ಮಹತ್ತರವಾದ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯಿತು. ಇದಕ್ಕೆ ಹಲವು ವಿರೋಧ, ಪ್ರತಿರೋಧಗಳು ಬಂದವು. ಆದರೆ ದೇಶದಲ್ಲೇ ಅತ್ಯಂತ ಬಲಿಷ್ಠ ಮತ್ತು ಅಧಿಕಾರಯುತ, ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಾತ್ರ ತ್ರಿವಳಿ ತಲಾಖ್ ನಿಷೇಧ ಮಸೂದೆ ಬಗ್ಗೆ ಚರ್ಚೆ ನಡೆಯುವ ವೇಳೆ ಸಂಸತ್ತಿನಲ್ಲಿರಲ್ಲಿಲ್ಲ.
ಮಹಿಳೆಯರ ರಕ್ಷಣೆ ಪರ ಧ್ವನಿ ಎತ್ತಬೇಕಾದ, ಮಸೂದೆ ಬಗ್ಗೆ ಚರ್ಚೆ ನಡೆಸಿ ಮಾತನಾಡಬೇಕಾದ, ಸೂಕ್ತ ಸಲಹೆ, ಸೂಚನೆ ನೀಡಬೇಕಾದ ಸೋನಿಯಾ ಗಾಂಧಿಯವರು ಮಾತ್ರ ಲೋಕಸಭೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಅವರು ಎಲ್ಲಿಗೆ ಹೋಗಿದ್ದಾರೆ, ಎಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದನ್ನು ನಟ, ನಿರ್ಮಾಪಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಟ್ವೀಟ್ ನಲ್ಲಿ ಬಹಿರಂಗವಾಗಿದೆ.
ದೇಶದಲ್ಲೇ ಪ್ರಮುಖವಾದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವುದು ಗೊತ್ತಿದ್ದರೂ, ದೇಶದ ಮಹಿಳೆಯರ ಪರ ಧ್ವನಿ ಎತ್ತಬೇಕಾದ ದೇಶದಲ್ಲೇ ಅತ್ಯಂತ ಬಲಿಷ್ಠ ನಾಯಕಿ ಎನಿಸಿಕೊಂಡಿರುವ ಸೋನಿಯಾ ಗಾಂಧಿ ಗೋವಾದಲ್ಲಿ ಸೈಕಲ್ ಹೊಡೆಯುತ್ತ ವಿಶ್ರಾಂತಿ ಪಡೆಯುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಪ್ರಶ್ನೆಗಳ ಸುರಿಮಳೆಯನ್ನು ಕೇಳಲಾಗಿದೆ.
Leave A Reply