ಕೇರಳ ಸಿಎಂ ದ್ವೇಷ ರಾಜಕೀಯ: ಭಾಗವತ್ ರಾಷ್ಟ್ರಧ್ವಜ ಹಾರಿಸಿದ ಶಾಲೆ ವಿರುದ್ಧ ಕ್ರಮಕ್ಕೆ ಆದೇಶ
ತಿರುವನಂತಪುರ: ಕೇರಳದಲ್ಲಿ ಆರ್ ಎಸ್ ಎಸ್ ಮುಖಂಡರು ಮತ್ತು ಬೆಂಬಲಿಗರ ವಿರುದ್ಧ ಸಿಪಿಐ(ಎಂ) ಸರ್ಕಾರ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶ ನೀಡಿದ ಪಲ್ಲಕಾಡದಲ್ಲಿರುವ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.
ಪಲ್ಲಕ್ಕಾಡ್ ಶಾಲೆ ಮುಖ್ಯೋಪಾಧ್ಯಯ ಮತ್ತು ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಇನ್ನು ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಲ್ಲಿ ದೂರು ದಾಖಲಿಸಿ, ತನಿಖೆ ನಡೆಸಲೂ ಕೂಡ ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ಧನಸಹಾಯದಲ್ಲಿ ನಡೆಯುತ್ತಿರುವ ಶಾಲೆ, ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು. ಸ್ವಾರಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿದ ಕುರಿತ ರಾಜಕೀಯ ಹಸ್ತಕ್ಷೇಪವಲ್ಲ ಎಂದು ವಿಜಯನ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಮತ್ತು ಪೊಲೀಸರು ಈ ಕುರಿತು ಸ್ಪಷ್ಟನೆ ನೀಡಿದ್ದು, ಶಾಲೆಯ ಮುಖ್ಯಸ್ಥರು ಅಥವಾ ಜನಪ್ರತಿನಿಧಿಗಳು ಮಾತ್ರ ಧ್ವಜಾರೋಹಣ ಮಾಡಬೇಕು. ಆದರೆ ಶಾಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಬಲಿಗರದ್ದಾಗಿದ್ದು, ಸರಸಂಘಚಾಲಕ ಮೋಹನ್ ಭಾಗವತ್ ರನ್ನು ವಿಶೇಷ ಅತಿಥಿಯಾಗಿ, ಆಹ್ವಾನಿಸಿ, ಧ್ವಜಾರೋಹಣ ಮಾಡಲಾಗಿತ್ತು.
ಕೇರಳ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಆರ್ ಎಸ್ ಎಸ್ ಮುಖ್ಯಸ್ಥರು ಪಲಕ್ಕಾಡದಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದರು. ಆರ್ ಎಸ್ ಎಸ್ ರಾಜಕೀಯ ಪಕ್ಷವಲ್ಲ. ಭಾಗವತ್ ರಾಜಕೀಯ ಮುಖಂಡರು ಅಲ್ಲ ಎಂದು ಕೇರಳ ಬಿಜೆಪಿ ಕಾರ್ಯದರ್ಶಿ ಎಮ್ .ಟಿ. ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕುಮಾನೆಮ್ ರಾಜಶೇಖರನ್ ಪ್ರತಿಕ್ರಿಯಿಸಿದ್ದು, ಶಾಲೆಯಲ್ಲಿ ಧ್ವಜಾರೋಹಣ ನಿಯಮದಂತೆ ನಡೆದಿದೆ. ಅಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ. ಅದೇ ರೀತಿ ರಾಜ್ಯದ ನಾನಾ ಕಡೆ ಧ್ವಜಾರೋಹಣ ಮಾಡಲಾಗಿದೆ. ಆದರೆ ಕೇವಲ ಆರ್ ಎಸ್ ಎಸ್ ವಿರುದ್ಧ ಮಾತ್ರ ಏಕೆ ಸಿಪಿಐ (ಎಂ) ಕ್ರಮ. ವಿಜಯನ್ ರಾಜಕೀಯ ದುರುದ್ದೇಶಪೂರ್ವಕವಾಗಿ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
Leave A Reply