ಕುಲಪತಿ ಭೈರಪ್ಪನವರಿಗೆ “ಪ್ರಿಯ”ರಾದವರಿಗೆ 50 ಸಾವಿರ ಸಂಬಳ ಸಿಗುತ್ತದೆ!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಅಕ್ರಮ ,ಅವ್ಯವಹಾರ, ಭ್ರಷ್ಟಾಚಾರಗಳೆಲ್ಲ ಮಾಧ್ಯಮಗಳಲ್ಲಿ ಬರಬಹುದು ಎನ್ನುವ ದೂರದೃಷ್ಟಿ ಕುಲಪತಿ ಭೈರಪ್ಪನವರಿಗೆ ಇತ್ತು. ಒಂದು ವೇಳೆ ಹಾಗೆ ಆದರೆ ತನ್ನ ನೈಜಮುಖ ಬಯಲಿಗೆ ಬರುತ್ತದೆ ಎಂದು ಮೊದಲೇ ಊಹಿಸಿದ್ದ ಭೈರಪ್ಪನವರು ವಿವಿಯಲ್ಲಿ ಪಿಆರ್ ಒ ಎನ್ನುವ ಹುದ್ದೆ ಸೃಷ್ಟಿಸಿ ಅದಕ್ಕೆ ತಮಗೆ “ಪ್ರಿಯ”ವಾಗಿರುವ ಯುವತಿಯನ್ನು ಕೆಲಸಕ್ಕೆ ತೆಗೆದುಕೊಂಡರು. ಆ ಹುದ್ದೆಯಲ್ಲಿರುವವರ ಮುಖ್ಯ ಕೆಲಸ ಎಂದರೆ ಎಲ್ಲಿಂದಲಾದರೂ ಬೈರಪ್ಪನವರ ವಿರುದ್ಧ ವಿರೋಧ ಕಂಡು ಬಂದರೆ ಅಂತವರನ್ನು ಸಂತೃಪ್ತಿಪಡಿಸಿ ಅದಕ್ಕೆ ತೇಪೆ ಹಚ್ಚುವುದು. ಯಾರನ್ಯಾರನ್ನೋ ಆ ಹುದ್ದೆಯಲ್ಲಿ ಕೂರಿಸಿದರೆ ಅವರು ಕೆಲಸ ಸರಿ ಮಾಡದಿದ್ದರೆ ಎಂದುಕೊಂಡ ಭೈರಪ್ಪನವರು ಅದಕ್ಕಾಗಿ ಮಾಧ್ಯಮಗಳಲ್ಲಿ ಪಳಗಿದವರನ್ನೇ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
ಭೈರಪ್ಪನವರ ಅಕ್ರಮಗಳು ಬಯಲಿಗೆ ಬರದಂತೆ ತಡೆಯುವ ಮಹಾನ್ ಜವಾಬ್ದಾರಿ ಹೊಂದಿರುವ ಆ ಪಿಆರ್ ಒ ತಿಂಗಳಿಗೆ ಪಡೆದುಕೊಳ್ಳುವ ಸಂಬಳ ಎಷ್ಟೆಂದು ಗೊತ್ತಾದರೆ ನಿಮಗೆ ಶಾಕ್ ಆಗಬಹುದು. ಬರೋಬ್ಬರಿ 50 ಸಾವಿರ. ಅಷ್ಟು ಸಂಬಳ ನೀಡುವ ಅವಶ್ಯಕತೆ ಏನು ಎನ್ನುವುದು ನಿಮಗೆ ಅನಿಸಬಹುದು. ಏಕೆಂದರೆ ಅನೇಕ ಉಪನ್ಯಾಸಕರಿಗೆ ಅಷ್ಟು ಸಂಬಳ ಇಲ್ಲ. ಉಪನ್ಯಾಸಕರಾಗಿ ಹೊಸದಾಗಿ ನೇಮಕರಾಗುವವರಿಗೆ ಅಥವಾ ಅತಿಥಿ ಉಪನ್ಯಾಸಕರಿಗೆ ಅದಕ್ಕಿಂತ ಎಷ್ಟೋ ಕಡಿಮೆ ಸಂಬಳ ಇರುವಾಗ ಪಿಆರ್ ಒಗೆ ಐವತ್ತು ಸಾವಿರ ಎಂದರೆ ಅರ್ಥ ಇದೆಯಾ? ಹಾಗಾದರೆ ತಮಗೆ ಪ್ರಿಯವಾಗುವ ಯಾರಿಗೆ ಬೇಕಾದರೂ ಭೈರಪ್ಪನವರು ತಮಗೆ ಇಷ್ಟ ಬಂದಂತೆ ಸಂಬಳ ಕೊಡುತ್ತಾರೆ ಎಂದರೆ ಅವರು ಭೈರಪ್ಪನವರಿಗಾಗಿ ತನು, ಮನದಿಂದ ಅದೇಂತಹ ಸೇವೆ ಸಲ್ಲಿಸುತ್ತಿರಬೇಡಾ.
ಇನ್ನು ಗಾರ್ಡನ್ ನೋಡಿಕೊಳ್ಳುತ್ತಿರುವವರಿಗೆ ನಲ್ವತ್ತು ಸಾವಿರ ಸಂಬಳ. ಯಾವುದೇ ಹುದ್ದೆಗೆ ತಲೆಬುಡ ಇಲ್ಲ. ಒಟ್ಟು ಸಂಬಳ, ಬಾಯಿಗೆ ಬಂದ ಸಂಬಳ. ಇದಕ್ಕೆ ವಿವಿ ಸಿಂಡಿಕೇಟ್ ಸದಸ್ಯರ ಅನುಮತಿ. ಹಾಗಾದರೆ ಇದನ್ನು ಕೇಳುವವರು ಯಾರು? ನಮ್ಮ ತೆರಿಗೆಯ ಹಣ ಈ ರೀತಿ ಪೋಲು ಮಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಬಗ್ಗೆ ಕರ್ನಾಟಕದ ರಾಜ್ಯಪಾಲರು ಏನು ಕ್ರಮ ತೆಗೆದುಕೊಳ್ಳದೇ ಇರುವುದು ಆಶ್ಚರ್ಯ ತಂದಿದೆ. ಒಂದೊ ಅವರಿಗೆ ಇಲ್ಲಿನ ಯಾವ ವಿಷಯ ಕೂಡ ಹೋಗದಂತೆ ತಡೆಯುವ ಕೆಲಸವನ್ನು ಇಲ್ಲಿ ಎಲ್ಲರೂ ಸೇರಿ ಮಾಡುತ್ತಿದ್ದಾರೆ ಅಥವಾ ರಾಜ್ಯಪಾಲರು ಕೂಡ ಇದರಲ್ಲಿ ಶಾಮೀಲಾಗಿದ್ದಾರಾ? ತಕ್ಷಣ ಜನಸಾಮಾನ್ಯರ ಪೋಲಾಗುತ್ತಿರುವ ತೆರಿಗೆಯ ಹಣದ ಬಗ್ಗೆ ರಾಜ್ಯಪಾಲರು ಗಮನ ಹರಿಸದಿದ್ದರೆ ಅವರಿಗೆ ಲಿಖಿತ ಮನವಿ ಕೊಟ್ಟು ಈ ಬಗ್ಗೆ ಒತ್ತಾಯಿಸುವ ಕೆಲಸ ಸಜ್ಜನರು ಮಾಡಬೇಕಿದೆ.
Leave A Reply