ಜಾಧವ್ ಪತ್ನಿ ಶೂ ಪಡೆದ ಪಾಕ್ ಗೆ ಚಪ್ಪಲಿ ಪಾರ್ಸೆಲ್ ಕಳುಹಿಸಿ ಅವಮಾನ
ದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಗಿರುವ ಕುಲಭೂಷಣ್ ಜಾಧವ್ ಅವರ ಭೇಟಿ ವೇಳೆ ತಾಯಿ ಮತ್ತು ಪತ್ನಿಯನ್ನು ಅವಮಾನ ಮಾಡಿದ ಪಾಕ್ ಗೆ ಬಿಜೆಪಿ ಮುಖಂಡರೊಬ್ಬರು ಚಪ್ಪಲಿ ಕಳುಹಿಸಿ, ಸೇಡು ತೀರಿಸಿಕೊಂಡಿದ್ದಾರೆ.
ಪಾಕಿಸ್ತಾನಕ್ಕೆ ಭೇಟಿ ನೀಡುವ ವೇಳೆ ಕುಲಭೂಷಣ್ ಜಾಧವ್ ಅವರ ತಾಯಿ ಮತ್ತು ಪತ್ನಿಯ ಮಾಂಗಲ್ಯ, ಕುಂಕುಮ ಅಳಿಸಿ, ಬಟ್ಟೆ ಬದಲಾಯಿಸಿ ಮಾತನಾಡಲು ಅವಕಾಶ ನೀಡಿದ್ದರು. ಅಲ್ಲದೇ ಮಾತನಾಡಿ ಹೊರ ಬಂದ ನಂತರ ಜಾಧವ್ ಪತ್ನಿಯ ಶೂಗಳನ್ನು ಬಿಚ್ಚಿಕೊಂಡು ಅವಮಾನ ಮಾಡಿದ್ದರು. ಸಿಟ್ಟಿಗೆ ಸೇಡು ತೀರಿಸಿಕೊಂಡಿರುವ ದೆಹಲಿಯ ಬಿಜೆಪಿ ಮುಖಂಡ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಆನ್ ಲೈನ್ ಮೂಲಕ ಚಪ್ಪಲಿ ಖರೀದಿಸಿ, ಪಾಕ್ ಹೈ ಕಮಿಷನರ್ ಕಚೇರಿಗೆ ಪಾರ್ಸೆಲ್ ಕಳುಹಿಸಿದ್ದಾರೆ.
ಪಾಕಿಸ್ತಾನದವರಿಗೆ ನಮ್ಮ ದೇಶದ ಮಹಿಳೆಯರ ಚಪ್ಪಲಿ ಬೇಕಲ್ಲವೇ, ಅದಕ್ಕಾಗಿ ಈ ಚಪ್ಪಲಿಗಳನ್ನು ಕಳುಹಿಸುತ್ತಿದ್ದೇನ. ಅವರು ಮಾಡಿದ ಅವಮಾನಕ್ಕೆ ಪ್ರತಿಕ್ರಿಯೆ ಇದು ಎಂದು ಬಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ‘ತೆಗೆದುಕೊಳ್ಳಿ ನಿಮಗೆ ಭಾರತದ ಚಪ್ಪಲಿ ಬೇಕಲ್ಲವೇ ಎಂದು ಪ್ರಶ್ನಿಸಿದ್ದು, ದೇಶವಾಸಿಗಳು ಆನ್ ಲೈನ್ ಮೂಲಕ ಪಾಕಿಸ್ತಾನಕ್ಕೆ ಚಪ್ಪಲಿಗಳನ್ನು ಕಳುಹಿಸುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಚಪ್ಪಲಿ ಕಳುಹಿಸುವುದು ಒಂದು ಆಂದೋಲನವಾಗಲಿ. ಪಾಕಿಸ್ತಾನ ಮಾಡಿರುವ ಅವಮಾನಕ್ಕೆ ಇದೇ ಸರಿಯಾದ ಉತ್ತರ ಎಂದು ಹೇಳಿದ್ದು, ರಾಷ್ಟ್ರೀಯವಾದಿಗಳು ಪಾಕಿಸ್ತಾನಕ್ಕೆ ಚಪ್ಪಲಿ ಕಳುಹಿಸಬೇಕು ಎಂಬ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.
Leave A Reply