ಮದರಸಾದಲ್ಲಿ ಲೈಂಗಿಕ ಕಿರುಕುಳ, 51 ಯುವತಿಯರ ರಕ್ಷಣೆ

ಲಖನೌ: ಮದರಸಾದಲ್ಲಿ ಲೈಂಗಿಕ ಕಿರುಕುಳ ಒಳಗಾಗಿದ್ದ 51 ಯುವತಿಯರನ್ನು ಲಖನೌ ಪೊಲೀಸರು ರಕ್ಷಿಸಿದ್ದಾರೆ. ಲಖನೌನ ಶಹಾದಾತ್ ಗಂಜ್ ಪ್ರದೇಶದ ಮದರಸಾದ ವ್ಯವಸ್ಥಾಪಕನನ್ನು ಬಂಧಿಸಲಾಗಿದ್ದು, ಯುವತಿಯರನ್ನು ರಕ್ಷಿಸಲಾಗಿದೆ. ಯುವತಿಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಪಾಠದ ವೇಳೆ ವ್ಯವಸ್ಥಾಪಕ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ನೃತ್ಯ ಮಾಡುವಂತೆ ಪೀಡಿಸುತ್ತಿದ್ದ ಎಂದು ಯುವತಿಯರು ಆರೋಪಿಸಿದ್ದಾರೆ.
125 ಯುವತಿಯರು ಓದುತ್ತಿರುವ ಮದರಸಾದಲ್ಲಿ ಕೆಲವು ಯುವತಿಯರು ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರು ನೀಡಿದ್ದಾರೆ. ಪೊಲೀಸ್ ದಾಳಿ ವೇಳೆ 51 ಯುವತಿಯರು ಸಂಕಷ್ಟದಲ್ಲಿ ಸಿಲುಕಿದ್ದರು. ಎಲ್ಲರನ್ನು ರಕ್ಷಿಸಲಾಗಿದೆ. ಇನ್ನು ಆರೋಪಿ ಕಾನೂನು ಪಾಲಿಸುವಂತೆ ನೀಡಿದ ಆದೇಶ ಪತ್ರವನ್ನೇ ಹರಿದು ಹಾಕಿದ್ದಾನೆ ಎಂದು ವರದಿಗಳು ತಿಳಿಸಿವೆ. ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಲಖನೌ ಎಸ್ ಎಸ್ ಪಿ ದೀಪಕ್ ಕುಮಾರ ‘ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಪ್ರಕರಣದ ದಾಖಲಿಸಿಕೊಂಡಿದ್ದು, ನಮ್ಮ ಪೊಲೀಸರ ತಂಡವನ್ನು ಕಳುಹಿಸಿದ್ದೇವೆ. 51 ಯುವತಿಯರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿತ್ತು. ಆರೋಪಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವುದು ಮತ್ತು ಹೊಡೆತ ನೀಡುತ್ತಿದ್ದ ಎಂದ ತಿಳಿಸಿದ್ದಾರೆ.
ಯುವತಿ ಕುಟುಂಬಸ್ಥರು ‘ನಮ್ಮ ಮಕ್ಕಳಿಗೆ ಮದರಸಾದಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಅಲ್ಲದೇ ನೃತ್ಯ ಮಾಡಲು ಒತ್ತಾಯ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Leave A Reply