ಕಾರ್ಗಿಲ್ ಯುದ್ಧದ ಹುತಾತ್ಮನ ಯೋಧನ ಪತ್ನಿಯನ್ನೇ ಹೀಗೆ ನಡೆಸಿಕೊಳ್ಳುವುದು ಸರೀನಾ?
ಚಂಡೀಗಡ: 1999ರ ಕಾರ್ಗಿಲ್ ಯುದ್ಧದ ವಿಜಯ ಎಂದರೆ ಪ್ರತಿ ಭಾರತೀಯನೂ ಹೆಮ್ಮೆಪಡುತ್ತಾನೆ. ಹೀಗೆ ಹೆಮ್ಮಪಡುವ ಹಿಂದೆ ಹಲವು ಯೋಧರು ಹುತಾತ್ಮರಾಗಿದ್ದಾರೆ ಎಂಬುದನ್ನು ನಾವು ಪ್ರತಿಕ್ಷಣ ನೆನಪಿಲ್ಲಡಬೇಕು ಹಾಗೂ ಅವರಿಗೆ ಋಣಿಯಾಗಿರಬೇಕು.
ಆದರೆ ಹೀಗೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧನ ಪತ್ನಿ ಬಳಿ ಆಧಾರ್ ಕಾರ್ಡ್ ಇಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಹರಿಯಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ ಎಂದರೆ ನಂಬಲೇಬೇಕು ಹಾಗೂ ಇದನ್ನು ಎಲ್ಲರೂ ಖಂಡಿಸಲೇಬೇಕು.
ಹೌದು, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಬಿಟ್ಟ ಯೋಧ ವಿ.ಎನ್.ಥಾಪರ್ ಅವರ ಪತ್ನಿ ಸೋನಿಪತ್ ನ ಆಸ್ಪತ್ರೆಗೆ ತೆರಳಿದ್ದು, ಸಿಬ್ಬಂದಿ ಕುಟುಂಬಸ್ಥರಿಗೆ ಮಹಿಳೆಯ ಆಧಾರ್ ಕಾರ್ಡ್ ಕೇಳಿದ್ದಾರೆ. ಆಗ ಅವರ ಆಧಾರ್ ಕಾರ್ಡ್ ಇಲ್ಲ ಎಂದು ಹೇಳಿದ್ದು, ಇದೊಂದೇ ಕಾರಣಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ಯೋಧನ ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ವಿ.ಎನ್.ಥಾಪರ್ ತಂದೆ ವಿಜಯಂತ್ ಥಾಪರ್, “ಆಸ್ಪತ್ರೆಯಲ್ಲಿ ಹೀಗೆ ವರ್ತಿಸಿದ್ದು ನನಗೆ ಅಚ್ಚರಿ ಹಾಗೂ ಅಸಹ್ಯ ಹುಟಿಸಿದೆ. ನಾವು ಮಾನವ ಜೀವನದಿಂದ ದೂರ ಉಳಿದಿದ್ದೇವೋ ಏನೋ ಎನಿಸುತ್ತಿದೆ. ಇದು ಸೈನಿಕರ ನೈತಿಕತೆಯನ್ನೇ ಘಾಸಿಗೊಳಿಸುವಂತಹ ಘಟನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ತ ಘಟನೆ ಕುರಿತು ಸುದ್ದಿ ಹಾಗೂ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಪ್ರಕರಣವನ್ನು ತನಿಖೆಗೆ ವಹಿಸಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ಇಲಾಖೆ ತನಿಖೆ ನಡೆಸುತ್ತದೆ. ಇಂಥ ಪ್ರಕರಣ ತಡೆಯಲೆಂದೇ ಕೇಂದ್ರ ಸರ್ಕಾರ ಕ್ಲಿನಿಕಲ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಟ್ ಜಾರಿಗೆ ಸೂಚಿಸಿದೆ. ಆದರೂ ಪ್ರಕರಣ ನಡೆದಿರುವುದು ಸರಿಯಲ್ಲ. ತನಿಖೆ ನಡೆಸಲಾಗುವುದು” ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೇ ತಿಳಿಸಿದ್ದಾರೆ.
Leave A Reply