ಹೈಸ್ಪೀಡ್ 3 ಜಿ ನೆಟವರ್ಕ್ ಇಂಟರ್ನೆಟ್ ಅನೈತಿಕ: ಇರಾನ್ ಸರ್ಕಾರಕ್ಕೆ ಮೌಲ್ವಿಯ ಫತ್ವಾ
ಇರಾನ್: ಹೈಸ್ಪೀಡ್ 3 ಜಿ ನೆಟ್ ವರ್ಕ್ ಇಂಟರ್ನೆಟ್ ಶರಿಯಾ ನೀತಿಗಳನ್ನು ಉಲ್ಲಂಘಿಸುತ್ತಿದ್ದು, ನೈತಿಕತೆಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಇರಾನ್ ನಲ್ಲಿ ಕಟ್ಟರ್ ಮುಸ್ಲಿಂ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ. ಸರ್ಕಾರ ಜನರಿಗೆ ಹೈಸ್ಪೀಡ್ ಇಂಟರ್ನೆಟ್ ಒದಗಿಸಲು ನಿರ್ಧರಿಸುವುದಕ್ಕೆ ಕಟ್ಟರ್ ಮುಸ್ಲಿಂ ಮೌಲ್ವಿ ವಿರೋಧಿಸಿದ್ದಾರೆ.
ಮೌಲ್ವಿ ಅಯ್ಯತೋಲಾಹ ನಾಸೀರ್ ಮಕರೆಮ್ ಶಿರಾಜಿ ಈ ಫತ್ವಾ ಹೊರಡಿಸಿದ್ದು, 3 ಜಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಅನೈತಿಕವಾಗಿದ್ದು ಮತ್ತು ಶರಿಯಾ ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ. ಇರಾನ್ ತಂತ್ರಜ್ಞಾನ ಸಚಿವಾಲಯವನ್ನು ಪ್ರಶ್ನಿಸಿದ್ದು, ಇಂಟರ್ನೆಟ್ ತಂತ್ರಜ್ಞಾನ ನಕಾರಾತ್ಮಕ ಗುಣಗಳನ್ನು ಹೊಂದಿದೆ. ಅಲ್ಲದೇ ಇಂಟರ್ನೆಟ್ ಬಳಕೆದಾರರ ಮೇಲಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಮೌಲ್ವಿ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.
ಪಾಶ್ಚಿಮಾತ್ಯ ತಂತ್ರಜ್ಞಾನ ಚರಂಡಿ ನೀರಿದಂತೆ. ಅದನ್ನು ಸ್ವಚ್ಛಗೊಳಿಸುವುದು ಕಷ್ಟ ಎಂದು ಮೌಲ್ವಿ ತೆಹ್ರೆನ್ ಟೈಮ್ಸ್ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಮೌಲ್ವಿ ಮಕೀರೆಮ್ ಶಿರಾಜಿ ಸದಾ ತಂತ್ರಜ್ಞಾನವನ್ನು ವಿರೋಧಿಸುತ್ತಲೇ ಬಂದಿದ್ದು, ಹಲವು ವೆಬ್ ಸೈಟ್ ಗಳ ವಿರುದ್ಧ ದೂರು ನೀಡಿದ್ದರು. ಅಲ್ಲದೇ ಇದೇ ಸ್ಥಿತಿ ಮುಂದುವರಿದರೇ ಕಠಿಣ ಸ್ಥಿತಿ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅಂತರ್ಜಾಲ ಕುರಿತು ಅಭಿಯಾನವೇ ಆರಂಭಿಸಿದ್ದು, ‘ನಮ್ಮ ದೇಶದ ಯುವಕರಿಗೆ ವಿಶ್ವವನ್ನು ಅರಿಯಲು ಇರುವ ಬಾಗಿಲನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಪೀಳಿಗೆಗೆ ಪ್ರಸ್ತುತ ಮೊಬೈಲ್ ಅವಶ್ಯಕ. ಇಂದಲ್ಲ ನಾಳೆ ಇದು ಜಾರಿಯಾಗಲಿದೆ, ಜಾರಿ ಆಗಲೇಬೇಕು ಎಂದು ಹೇಳಿದ್ದಾರೆ.
Leave A Reply