ಆ ಮುಸ್ಲಿಂ ರಾಷ್ಟ್ರದ ನಡೆಯನ್ನು ಮತ್ತೊಂದು ಮುಸ್ಲಿಂ ರಾಷ್ಟ್ರ ಖಂಡಿಸಿದ್ದು ಏಕೆ ಗೊತ್ತಾ?
ದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಿ ಉದ್ಧಟತನ ಮೆರೆದಿರುವ ಪಾಕಿಸ್ತಾನದ ನಡೆಯನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವಾದ ಅಫ್ಘಾನಿಸ್ತಾನವೇ ಖಂಡಿಸಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಹೋದ ಅವರ ತಾಯಿ ಹಾಗೂ ಹೆಂಡತಿಯನ್ನು ಅವಮಾನಿಸಿದ ಪಾಕಿಸ್ತಾನದ ನಡೆಯನ್ನು ಅಫ್ಘಾನಿಸ್ತಾನ ಖಂಡಿಸಿದೆ.
ಎಂದಿಗೂ ಮನುಷ್ಯರನ್ನು ಮನುಷ್ಯರಂತೆಯೇ ನಡೆಸಿಕೊಳ್ಳಬೇಕು. ಯಾವುದೋ ದ್ವೇಷ, ಯಾವುದೋ ರಾಜಕೀಯ ಸಿಟ್ಟಿಗೆ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಭಾರತದಲ್ಲಿರುವ ಅಫ್ಘಾನಿಸ್ತಾನ ರಾಯಭಾರಿ ಶೈದಾ ಮೊಹಮ್ಮದ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಮನವಿ ಮಾಡಿದ ಬಳಿಕ ಜಾಧವ್ ಅವರನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದ ಪಾಕಿಸ್ತಾನ ಮೊದಲು ಮಾನವೀಯತೆಯ ಆಧಾರದ ಮೇಲೆ ಒಪ್ಪಿಕೊಂಡಿದ್ದಾಗಿ ತಿಳಿಸಿತ್ತು. ಆದರೆ ಜಾಧವ್ ಅವರ ತಾಯಿ ಹಾಗೂ ಪತ್ನಿ ಪಾಕಿಸ್ತಾನಕ್ಕೆ ತೆರಳುತ್ತಲೇ ಉದ್ಧಟತನ ಮೆರೆದಿತ್ತು.
ಜಾಧವ್ ಅವರನ್ನು ಭೇಟಿ ಮಾಡುವ ವೇಳೆ ಅವರ ತಾಯಿ ಹಾಗೂ ಪತ್ನಿಗೆ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಜಾಧವ್ ಅವರ ಪತ್ನಿಯ ಮಂಗಳಸೂತ್ರ ತೆಗೆಸಿ, ಬಿಂದಿ ತೆಗೆಸಿ ಅವಮಾನ ಮಾಡಿತ್ತು. ಇದನ್ನು ಭಾರತ ಉಗ್ರವಾಗಿ ಖಂಡಿಸಿತ್ತು.
Leave A Reply