‘ಕೈ’ಕೊಟ್ಟ ಹಾರ್ದಿಕ್ ಕುತಂತ್ರ: ಅಧಿಕಾರ ಸ್ವೀಕರಿಸಿದ ನಿತೀನ್ ಪಟೇಲ್
ಗಾಂಧಿನಗರ: ಗುಜರಾತ್ ಚುನಾವಣೆ ಸೋಲಿನಿಂದ ಮತ್ತು ಬಿಜೆಪಿಯ ಭರ್ಜರಿ ಗೆಲುವಿನಿಂದ ಕಂಗೆಟ್ಟಿರುವ ಪಟೇಲ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸರ್ಕಾರವನ್ನೆ ಉರುಳಿಸುವ ಕುತಂತ್ರ ವಿಫಲವಾಗಿದೆ. ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಗೆ 10 ಶಾಸಕರೊಂದಿಗೆ ಬನ್ನಿ ಕಾಂಗ್ರೆಸ್ ನೊಂದಿಗೆ ಸೇರಿ ಸರ್ಕಾರ ರಚಿಸೋಣ ಎಂದು ಆಮಿಷ ಒಡ್ಡಿ ಸರ್ಕಾರ ಬಿಜೆಪಿ ಸರ್ಕಾರ ಉರುಳಿಸಲು ಹಾರ್ದಿಕ್ ಪಟೇಲ್ ಹುನ್ನಾರ ನಡೆಸಿದ್ದರು.
ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರು ಹಾರ್ದಿಕ್ ಪಟೇಲ್ ಆಮಿಷಕ್ಕೆ ಬಲಿಯಾಗದೇ, ಗುಜರಾತ್ ಜನರು ನೀಡಿರುವ ಜನಾದೇಶವನ್ನು ಬೆಂಬಲಿಸಿ, ಸರ್ಕಾರದಲ್ಲಿ ಸಕ್ರಿಯವಾಗಿದ್ದು, ಮಂತ್ರಿ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಈ ಮೂಲಕ ನಾನು ಜಾತಿ ರಾಜಕಾರಣವನ್ನು ಮಾಡುವುದಿಲ್ಲ. ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡುತ್ತೇನೆ ಎಂದು ಪಟೇಲ್ ಸಮುದಾಯವನ್ನು ಎತ್ತಿ ಕಟ್ಟಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಹಾರ್ದಿಕ್ ಪಟೇಲ್ ಗೆ ತಕ್ಕ ಉತ್ತರ ನೀಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಹಾರ್ದಿಕ್ ಪಟೇಲ್ ಕಂಗಾಲಾಗಿದ್ದು, ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಅದಕ್ಕಾಗಿಯೇ ಇದೀಗ ಸರ್ಕಾರವನ್ನು ಉರುಳಿಸಲಯ ಯತ್ನಿಸಿದ್ದರು. ಅಲ್ಲದೇ ನಿತೀನ್ ಪಟೇಲ್ ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಕೆಲ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಒತ್ತಡ ಹೇರುವ ತಂತ್ರವನ್ನು ಹಾರ್ದಿಕ್ ಉಪಯೋಗಿಸಿದ್ದರು. ಆದರೆ ಇದ್ಯಾವುದಕ್ಕೂ ಸ್ಪಂದಿಸದ ನಿತೀನ್ ಪಟೇಲ್ ಬಿಜೆಪಿ ಹೈಕಮಾಂಡ್ ಹೇಳಿದಂತೆ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ.
Leave A Reply