ಪೆನ್ನು, ಪುಸ್ತಕ ಹಿಡಿಯಬೇಕಿದ್ದ ಯುವಕ ಗನ್ನು ಹಿಡಿದು ಸೈನಿಕರ ಗುಂಡಿಗೆ ಬಲಿಯಾದ
ದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಸಿಆರ್ ಫಿಎಫ್ ಕ್ಯಾಂಪ್ ಮೇಲೆ ಉಗ್ರರು ನಡೆಸಿರುವ ದಾಳಿಯಲ್ಲಿ ಐದು ಯೋಧರು ಹುತಾತ್ಮರಾಗಿದ್ದು, ಮೂವರು ಭಯೋತ್ಪಾದಕರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು. ಆ ಇಬ್ಬರು ಭಯೋತ್ಪಾದಕರಲ್ಲಿ ಒಬ್ಬಾತ 10ನೇ ತರಗತಿ ಓದುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಯುವಕರನ್ನು ಭಯೋತ್ಪಾದಕ ಸಂಘಟನೆಗಳು ಸೆಳೆಯುತ್ತಿವೆ ಎಂಬ ಆತಂಕ ಶುರುವಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಯುವಕರು ಭಯೋತ್ಪಾದಕರೊಂದಿಗೆ ಕೈಜೋಡಿಸುತ್ತಿರುವುದು ಕ್ಷೀಣಿಸುತ್ತಿದೆ ಎಂಬ ಸಮಾಧಾನದಲ್ಲಿರುವಾಗಲೇ ಈ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಅಲ್ಲದೇ ಜಮ್ಮು, ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಹೋರಾಡುತ್ತಿರುವ ಸೈನ್ಯಕ್ಕೆ ಹೊಸ ಸವಾಲು ಎದುರಾಗಿದ್ದು, ಭಯೋತ್ಪಾದಕರು ಯುವಕರನ್ನು ಅದರಲ್ಲೂ ಏನೂ ಅರಿಯದ ಮುಗ್ದರನ್ನು ಸೆಳೆದು ಪಾಷವಿ ಕೃತ್ಯಕ್ಕೆ ಬಳಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಸೈನಿಕರ ದಾಳಿಯಲ್ಲಿ ಮೃತಪಟ್ಟಿರುವ ಯುವಕನ ತಂದೆ ಕಾಶ್ಮೀರದವರು ಎಂಬುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮುಸ್ಲಿಂ ಮೂಲಭೂತವಾದಿಗಳು ಕಾಶ್ಮೀರದಲ್ಲಿ ಬಾಲಕರ ತಲೆ ಕೆಡಿಸಿ, ಬಲಿ ನೀಡುತ್ತಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಇ-ಮಹಮ್ಮದ್ ಪಲ್ವಾಮ್ ಪ್ರದೇಶದಲ್ಲಿ ನಡೆದ ದಾಳಿಯ ಹೊಣೆ ಹೊತ್ತಿದೆ. ಕೆಲ ದಿನಗಳ ಹಿಂದೆ ಸೈನಿಕರು ಜೈಷ್ ಇ ಮಹಮ್ಮದ ಸಂಘಟನೆಯ ಕಮಾಂಡರ್ ಮಸೂದ್ ಅಜರ್ ನನ್ನು ಹೊಡೆದುರುಳಿಸಿತ್ತು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಕೇಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರ 2017ರಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದ ಕಣಿವೆ ರಾಜ್ಯದಲ್ಲಿ ತಕ್ಕಮಟ್ಟಿಗೆ ಶಾಂತಿ ನೆಲೆಸಿದೆ. ಅಲ್ಲದೇ ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರುವುದು ಕ್ಷೀಣಿಸಿತ್ತು. ಕೆಲವು ಯುವಕರು ಸೈನ್ಯದ ಮನವಿಗೆ ಸ್ಪಂದಿಸಿ, ಉಗ್ರ ಸಂಘಟನೆಗಳನ್ನು ತೊರೆದು ಮರಳಿ ಸಮಾಜದ ಮುನ್ನಲೆಗೆ ಬಂದಿದ್ದರು. ಆದರೆ ಇದೀಗ 10ನೇ ತರಗತಿಯ ಯುವಕ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿ ಮೃತಪಟ್ಟಿರುವುದು ಉಗ್ರರು ಯುವಕರನ್ನು ಸೆಳೆಯುತ್ತಿದ್ದಾರೆ ಎಂಬುದು ಹೊಸ ಆತಂಕ ಮೂಡಿಸಿದೆ.
Leave A Reply