33 ಶತಕೋಟಿ ಡಾಲರ್ ಸಹಾಯ ನೀಡಿದವರಿಗೆ ಪಾಕ್ ಮೋಸ: ಟ್ರಂಪ್ ಆಕ್ರೋಶ
ವಾಷಿಂಗಟನ್: ಅಮೆರಿಕ ಪಾಕಿಸ್ತಾನಕ್ಕೆ ಕೋಟ್ಯಂತರ ಹಣ ನೀಡಿದರೂ ಪಾಕಿಸ್ತಾನದಿಂದ ಯಾವುದೇ ಲಾಭ ಪಡೆದಿಲ್ಲ. ಕೇವಲ ಪಾಕ್ ಸುಳ್ಳುಗಳನ್ನು ಮಾತ್ರ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕ್ ವಿರುದ್ಧ ಟ್ವೀಟ್ ಮಾಡಿರುವ ಟ್ರಂಪ್ ‘ಅಮೆರಿಕ ಸರ್ಕಾರ ಮೂರ್ಖತನದಿಂದ ಕಳೆದ 15 ವರ್ಷದಲ್ಲಿ ಪಾಕಿಸ್ತಾನಕ್ಕೆ ಇದುವರೆಗೆ 33 ಶತಕೋಟಿ ಡಾಲರ್ ಹಣವನ್ನು ನೀಡಿದೆ. ಆದರೆ ಪಾಕಿಸ್ತಾನ ಅಮೆರಿಕಕ್ಕೆ ಸುಳ್ಳು ಹೇಳುವುದು, ಮೋಸವನ್ನು ಬಳುವಳಿಯಾಗಿ ನೀಡಿದೆ. ಪಾಕಿಸ್ತಾನ ಸರ್ಕಾರ ಅಮೆರಿಕರನ್ನು ಮೂರ್ಖರು ಎಂದು ತಿಳಿದುಕೊಂಡಿದೆ. ಪಾಕಿಸ್ತಾನದವರು ಭಯೋತ್ಪಾದಕರಿಗೆ ಸ್ವರ್ಗವನ್ನು ಅಫಘಾನಿಸ್ತಾದ ಮೂಲಕ ಕಲ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2017ರ ಆಗಸ್ಟ್ 12 ರಂದು ಕೂಡ ಪಾಕಿಸ್ತಾನದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ವಾಷಿಂಗಟನ್ ಇನ್ನು ಪಾಕ್ ಮತ್ತು ತಾಲಿಬಾನ್ ನ ಕುಕೃತ್ಯಗಳನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಪಾಕ್ ಮೂಲಭೂತವಾದಿ, ಭಯೋತ್ಪಾದಕರಿಗೆ ತನ್ನ ಬೆಂಬಲ ಮುಂದುವರಿಸಿದೆ ಎಂದು ಆರೋಪಿಸಿದ್ದರು.
ಅಫ್ಘಾನಿಸ್ತಾನದ ಮೇಲಿನ ನಮ್ಮ ಕಾರ್ಯತಂತ್ರವನ್ನು ಬಳಸಿಕೊಂಡು ಪಾಕಿಸ್ತಾನ ಅಮೆರಿಕದಿಂದ ಲಾಭ ಪಡೆದುಕೊಂಡಿದೆ. ಅದರ ಜತೆಗೆ ಭಯೋತ್ಪಾದಕರಿಗೆ ಆಶ್ರಯ ನೀಡಿದೆ. ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೇ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ.
Leave A Reply