ಇದು ಹಿಂದೂಸ್ಥಾನ, ಭಾರತ ಹಿಂದೂಗಳದ್ದು
Posted On January 2, 2018

ಲಖನೌ: ಭಾರತ ಹಿಂದೂಸ್ಥಾನವಾಗಿದ್ದು, ಈ ದೇಶ ಹಿಂದೂಗಳದ್ದು ಹಾಗೂ ಇಡೀ ದೇಶ ಹಿಂದುಗಳಿಗೆ ಸಂಬಂಧಿಸಿದೆ ಎಂದು ಉತ್ತರಪ್ರದೇಶ ಬಿಜೆಪಿ ನಾಯಕ ಹಾಗೂ ಶಾಸಕ ವಿಕ್ರಂ ಸೈನಿ ಹೇಳಿದ್ದಾರೆ.
ಭಾರತವನ್ನು ನಾವು ಹಿಂದೂಸ್ಥಾನ ಎಂದು ಕರೆಯುತ್ತಾರೆ. ಹಿಂದೂಸ್ಥಾನ ಎಂದರೆ ಹಿಂದೂಗಳಿಗೆ ಸಂಬಂಧಿಸಿದ ರಾಷ್ಟ್ರ ಎಂದಾಗುತ್ತದೆ ಎಂದು ಮುಜಫರ್ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಭಾರತ ಮೊದಲು ಹಿಂದೂಗಳದ್ದಾಗಿದ್ದು, ಎಲ್ಲ ಮುಸ್ಲಿಂ ಅರಸರು ಭಾರತಕ್ಕೆ ಬಂದು ನೆಲೆಸಿದ್ದಾರೆ. ಒಂದು ವೇಳೆ ಅವರೆಲ್ಲರೂ ದೇಶ ಬಿಟ್ಟು ಹೋದರೆ ಭಾರತ ನಮಗೆ ಸಂಬಂಧಪಡುತ್ತದೆ ಹಾಗೂ ನಮ್ಮದಾಗುತ್ತದೆ. ಏಕೆಂದರೆ ನಾನು ಕಟ್ಟರ್ ಹಿಂದುತ್ವವಾದಿ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಅನಾದಿ ಕಾಲದಿಂದಲೂ ಹಿಂದೂಗಳೇ ನೆಲೆಸಿದ್ದಾರೆ. ಏಕೆ ಇದು ಹಿಂದೂ ರಾಷ್ಟ್ರ, ಹಾಗಾಗಿಯೇ ನಮ್ಮ ದೇಶಕ್ಕೆ ಹಿಂದೂಸ್ಥಾನ ಎಂದು ಕರೆಯಲಾಗಿದೆ. ಈ ಅಂಶಗಳಿಂದ ಭಾರತ ಹಿಂದೂಗಳ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.
- Advertisement -
Trending Now
ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್!
April 19, 2025
Leave A Reply