ಮೇವಾನಿಗೆ ದೇಶವಿರೋಧಿ ಅರುಧಂತಿ ರಾಯ್, ಉಮರ್ ಖಲೀದ್ ಸಾಥ್, ಬಯಲಾಯ್ತು ಅಸಲಿಯತ್ತು
ಭಾರತ ಎಂದೂ ಕಾಶ್ಮೀರದ ಭಾಗವಲ್ಲ, ಅದು ಸ್ವಾತಂತ್ರ್ಯ ನಾಡು: ಅರುಂಧತಿ ರಾಯ್
ಕಾಶ್ಮೀರ ಅಜಾದ್ ಆಗಲೇಬೇಕು. ಅಫ್ಜಲಗುರುವನ್ನು ಗಲ್ಲಿಗೇರಿಸಿದವರ ವಿರುದ್ಧ ನಾವು ಸೇಡು ತೀರಿಸಿಕೊಳ್ಳುತ್ತೇವೆ: ಉಮರ್ ಖಲೀದ್
ಈ ಇಬ್ಬರು ಮತಿಗೇಡಿಗಳು ಸೇರಿ ಹೀಗೆ ದೇಶದ ವಿರುದ್ಧ ಮಾತನಾಡುವವರು ದೇಶದಲ್ಲಿ ಹಲವರು. ಇವರು ಎಂದಿಗೂ ದೇಶಕ್ಕೆ ನಿಷ್ಠವಾಗಿರದೇ, ಬುದ್ಧಿಜೀವಿಗಳ ಸೋಗಿನಲ್ಲಿ ದೇಶದ ವಿರುದ್ಧ, ದೇಶದ ಸೌರ್ವಭೌಮತ್ವದ ವಿರುದ್ಧ ಕಿಡಿಕಾರುತ್ತಾರೆ. ದೇಶದ ನ್ಯಾಯಾಂಗ ವ್ಯವಸ್ಥೆಗೆ ಸವಾಲು ಎಸೆಯುವ ಮಾತನಾಡುತ್ತಾರೆ. ದೇಶದ ಇತಿಹಾಸವನ್ನು, ದೇಶಕ್ಕೆ ಪ್ರಾಣ ನೀಡಿದವರನ್ನು ಮರೆಯುತ್ತಾರೆ. ಬಾಂಬ್ ದಾಳಿ ನಡೆಸಿ ನೂರಾರು ಜನರ ರಕ್ತ ಹೀರಿದವರನ್ನು ಬೆಂಬಲಿಸಿ, ರಕ್ತಪಿಪಾಸುಗಳ ಬೆನ್ನಿಗೆ ನಿಲ್ಲುತ್ತಾರೆ. ಇವರು ಹೇಳುವುದು ಒಂದು ತಿನ್ನುವುದು ಇನ್ನೊಂದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ದೇಶನಿಷ್ಠರಿರುವ ಭಾರತದಲ್ಲಿ ಸ್ವಘೋಷಿತ ಬುದ್ಧಿ ಜೀವಿಗಳ ಆಟ ನಡೆಯುವುದಿಲ್ಲ ಎಂದು ಗೊತ್ತಾದೊಡನೇ, ದೇಶದಲ್ಲಿರುವ ಮುಗ್ದರಿಗೆ ಬಲೆ ಬೀಸುವ ಇವರು ಆಡಳಿತಾಂಗದ ವಿರುದ್ಧ ಮುಗ್ದರನ್ನು ಎತ್ತಿ ಕಟ್ಟುತ್ತಾರೆ. ಅವರ ಸಾಲಿಗೆ ಇದೀಗ ದಲಿತ ಚಳವಳಿಯ ನಾಯಕ, ಗುಜರಾತ್ ಶಾಸಕರಾಗಿ ಆಯ್ಕೆಯಾಗಿರುವ ಜಿಗ್ನೇಶ್ ಮೇವಾನಿ ಸೇರಿದ್ದಾರೆ ಎಂಬುದು ದುರಂತ.
ಜಿಗ್ನೇಶ್ ಮೇವಾನಿ
ಈ ಹೆಸರು ಕೇಳಿದೊಡನೇ ದೇಶದ ದಲಿತ ಚಳವಳಿಗೆ ಒಂದು ಹೊಸ ಮುಖ ದೊರೆಯಿತು ಎಂಬ ಸಮಾಧಾನ ಎಷ್ಟೋ ದಲಿತರಿಗೆ ಮೂಡಿತ್ತು. ಜಿಗ್ನೇಶ್ ಮೇವಾನಿ ದಲಿತರಿಗೆ ಹೊಸ ಆಶಾಕಿರವಾಗುವ ಭರವಸೆ ಮೂಡಿತ್ತು. ಆದರೆ ಯಾವಾಗ ಜಿಗ್ನೇಶ್ ಮೇವಾನಿ ಅಂಬೇಡ್ಕರ್ ನ್ನೇ ರಾಜಕೀಯವಾಗಿ ಮುಗಿಸಿದ, ಸಂವಿಧಾನದ ಮೂಲ ಆಶಯಗಳನ್ನು ಬದಲಿಸಿದ ಕಾಂಗ್ರೆಸ್ ಬೆನ್ನಿಗೆ ನಿಂತರೋ ಆಗ ಆತನ ಮೇಲಿದ್ದ ಭರವಸೆ ಕುಂದಿತು. ಇನ್ನು ಜಿಗ್ನೇಶ್ ಮೇವಾನಿ ಚುನಾವಣೆಗೆ ಸ್ಪರ್ಧಿಸಿದಾಗ ಸದಾ ಭಾರತದ ಏಕತೆಗೆ ಬಗ್ಗೆ ಪ್ರಶ್ನಿಸುವ ಮತಿಗೇಡಿ ಅರುಂಧತಿ ರಾಯ್ ಮೂರು ಲಕ್ಷ ರೂಪಾಯಿ ಸಹಾಯ ನೀಡಿದ್ದಳೋ ಆವಾಗಲೇ ಜಿಗ್ನೇಶ್ ಮೇವಾನಿಯ ಅಸಲಿಯತ್ತು ಬಯಲಾಯಿತು. ಸದಾ ದೇಶದ ವಿರುದ್ಧ ಮಾತನಾಡುವ ರಾಯ್ ಅಂತವಳಿಂದ ಸಹಾಯಧನ ಪಡೆದ ಜಿಗ್ನೇಶ್ ಮೇವಾನಿಯಿಂದ ಇನ್ನೆಂಥ ಹೋರಾಟ ನಿರೀಕ್ಷಿಸಲು ಸಾಧ್ಯ..
ಅರುಂಧತಿ ರಾಯ್ ಳಿಂದ ಚುನಾವಣೆಗೆ ಸಹಾಯಧನ ಪಡೆದ ಜಿಗ್ನೇಶ್ ಮೇವಾನಿ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಉಮರ್ ಖಲೀದ್ ನಂತವನ ಜತೆ ವೇದಿಕೆ ಹಂಚಿಕೊಂಡಿದ್ದು, ಎಲ್ಲವೂ ಒಂದಕ್ಕೊಂದು ತಾಳೆಯಾಗುವುದರಲ್ಲಿ ಅನುಮಾನವೇ ಇಲ್ಲ.
ದೇಶದ ಐಕ್ಯತೆ ವಿರುದ್ಧ ಮಾತನಾಡುವ ಅರುಂಧತಿ ರಾಯ್ ಳಿಂದ ಹಣ ಪಡೆದು, ನೂರಾರು ಜನರ ಮಾರಣ ಹೋಮಕ್ಕೆ ಕಾರಣವಾದ ಉಗ್ರರ ಬೆಂಬಲಕ್ಕೆ ನಿಲ್ಲುವ ಉಮರ್ ಖಲೀದ್ ಜತೆ ವೇದಿಕೆ ಹಂಚಿಕೊಂಡು ಜಿಗ್ನೇಶ್ ಮೇವಾನಿ ಮಾಡಿದ್ದೇನು?.. ಬೆಂಕಿ ಬೆಂಕಿ ಹಚ್ಚು ಕೆಲಸ.
ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಉಮರ್ ಖಲೀದ್ ಭಾಗವಹಿಸುವ ಅವಶ್ಯವೇನಿತ್ತು..? ಆತ ದಲಿತನೇ? ದಲಿತ ಪರ ಹೋರಾಟಗಾರರನೇ? ಈ ಎಲ್ಲ ಪ್ರಶ್ನೆಗಳಿ ಆತನ ಜತೆ ವೇದಿಕೆ ಹಂಚಿಕೊಂಡ ಜಿಗ್ನೇಶ್ ಮೇವಾನಿ ಉತ್ತರಿಸಬೇಕು. ಉಮರ್ ಖಲೀದ್ ನಂತ ರಾಷ್ಟ್ರ ವಿರೋಧಿಯೊಂದಿಗೆ ಕಾರ್ಯಕ್ರಮಕ್ಕೆ ಹೋಗಿ, ಮಹಾರಾಷ್ಟ್ರದಲ್ಲಿ ಬೆಂಕಿ ಹಚ್ಚಿಲು ಪರೋಕ್ಷ ಕಾರಣರಾಗಿದ್ದು ಉಮರ್ ಖಲೀದ್ ಮತ್ತು ಜಿಗ್ನೇಶ್ ಮೇವಾನಿ ಎಂದರೆ ತಪ್ಪಾಗಲಾರದು.
ನೂರಾರು ವರ್ಷದಿಂದ ನಡೆಯುತ್ತಿರುವ ಭೀಮಾ ಕೋರೆಗಾಂವ್ ಉತ್ಸವ ಪ್ರತಿ ವರ್ಷ ಶಾಂತಿಯುತವಾಗಿ ನಡೆಯುತ್ತದೆ. ಆದರೆ ಈ ಬಾರಿ ಮಾತ್ರ ಮೇವಾನಿ, ಉಮರ್ ಖಳಿದ್ ರಂತವರ ಉದ್ರೇಕಕಾರಿ ಭಾಷಣಗಳು ಜನರಲ್ಲಿ ಪ್ರಚೋಧನೆ ನೀಡಿ, ಇಂದು ಇಡೀ ಮಹಾರಾಷ್ಟ್ರ ಬೆಂಕಿಗೆ ಬೀಳುವಂತಾಗಿದೆ. ಇದೇ ಅಲ್ಲವೇ ದುರಂತ. ಯಾವ ನಾಯಕ ದಲಿತರ ಹೆಸರಲ್ಲಿ ಅಧಿಕಾರಕ್ಕೇರಿದನೋ ಆತ ದೇಶದ್ರೋಹಿಗಳೊಂದಿಗೆ ಕೈ ಜೋಡಿಸಿ ಬೆಂಕಿ ಹಚ್ಚಲು ಪರೋಕ್ಷ ಪ್ರೇರಣೆ ನೀಡುತ್ತಿರುವುದು ದಲಿತ ಹೋರಾಟಕ್ಕೆ ನೀಡಿದ ದೊಡ್ಡ ಪೆಟ್ಟಲ್ಲದೇ ಮತ್ತೇನು..?
Leave A Reply