ಅಂದು ಶರತ್ ಮಡಿವಾಳ, ಪರೇಶ್ ಮೇಸ್ತಾ ಇಂದು ದೀಪಕ್ ಇನ್ನೆಷ್ಟು ಬಲಿ ಬೀಳಬೇಕು?
ಮಂಗಳೂರು: ಕರಾವಳಿ ಉಗ್ರರ ತಾಣವಾಗುತ್ತಿದೆ, ಐಸಿಸ್ ನಂತ ಭಯೋತ್ಪಾದಕ ಸಂಘಟನೆಗಳಂತ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ ಎಂಬುದಕ್ಕೆ ಕರಾವಳಿಯಲ್ಲಿ ಪದೇ ಪದೆ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಸಾಲು ಸಾಲು ಹತ್ಯೆಗಳೇ ಸಾಕ್ಷಿಯಾಗಿ ನಿಲ್ಲುತ್ತಿವೆ. ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಇದುವರೆಗೆ 23 ಹಿಂದೂ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೀಗ ಹಿಂದೂಗಳ ಹತ್ಯೆಯ ಸಾಲಿಗೆ ದೀಪಕ್ ಸೂರಿಂಜೆ ಅವರು ಸೇರಿದ್ದಾರೆ. ಮುಸ್ಲಿಂ ಮೂಲಭೂತವಾದಿಗಳ ಕ್ರೌರ್ಯ, ಅಟ್ಟಹಾಸ ಮುಂದುವರಿದಿದೆ. ಇದು ಇನ್ನೇಷ್ಟು ದಿನ ನಡೆಯುತ್ತದೆ ಎಂಬುದಕ್ಕೆ ರಾಜ್ಯವನ್ನು ಆಳುತ್ತಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರವೇ ಉತ್ತರಿಸಬೇಕು.
ಸುರತ್ಕಲ್ ದ ಕಾಟಿಪಾಳ್ಯದಲ್ಲಿ ಹಿಂದೂ ಜಾಗರ ವೇದಿಕೆ ಮತ್ತು ಬಿಜೆಪಿಯಲ್ಲಿ ಸಕ್ರೀಯವಾಗಿದ್ದ 28 ವರ್ಷದ ದೀಪಕ್ ಸೂರಿಂಜೆ ಮತಾಂಧರ ದಾಳಿಗೆ ತುತ್ತಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ದೀಪಕ್ ಮೇಲೆ ದಾಳಿ ಮಾಡಿದ ಎಲ್ಲರೂ ಮುಸ್ಲಿಮರು ಎಂಬುದು. ಮುಸ್ಲಿಂ ಮತಾಂಧರ ಹತ್ಯಾಸರಣಿ ಮುಂದುವರಿದಿದ್ದು ದೀಪಕ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ರಿಜ್ವಾನ್, ಮುಲ್ಕಿ ನೌಶಾದ್, ಪಿಂಕಿ ನವಾಜ್, ನಿರ್ಷಾನ್ ಎಂಬುವವರನ್ನು ಬಂಧಿಸಲಾಗಿದೆ.
ಇನ್ನು ದೀಪಕ್ ಮತ್ತು ಮುಸ್ಲಿಂ ಯುವಕರೊಂದಿಗೆ ಈದ್ ಮಿಲಾದ್ ಸಮಯದಲ್ಲೇ ಬ್ಯಾನರ್ ಕಟ್ಟುವ ಸ್ಥಳದ ವಿಚಾರದಲ್ಲಿ ಗಲಾಟೆ ನಡೆದಿತ್ತು ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ಪರಿಶೀಲನೆ ವೇಳೆ ಲಭ್ಯವಾಗಿದೆ. ಅದೇ ದ್ವೇಷ ಕೊಲೆಗೆ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಇನ್ನು ರಾಜ್ಯದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ಮುಂದುವರಿದಿದ್ದು, ಶರತ್ ಮಡಿವಾಳ, ಪರೇಶ್ ಮೇಸ್ತಾ ಮತ್ತು ದೀಪಕ್ ಸೂರಿಂಜೆ ಸೇರಿ ಇಲ್ಲಿಗೆ 23 ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ನಮಗೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಸರ್ಕಾರ ಕೂಡಲೇ ಕೊಲೆಯ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
Leave A Reply