ನಿತ್ಯ ರಾಷ್ಟ್ರಗೀತೆಗೆ ಇಡೀ ಊರೇ ಎದ್ದು ನಿಲ್ಲುತ್ತದೇ.. ಥೇಟರ್ ನಲ್ಲಿ ಕೆಲ ಸೆಂಕೆಂಡ್ ನಿಲ್ಲದವರು ಓದಲೇಬೇಕು..!
ಚಂಡಿಗಡ್: ಆ ಗ್ರಾಮದಲ್ಲಿ ಬೆಳಗ್ಗೆ 8 ಗಂಟೆಯಾದರೇ ಇಡೀ ಊರು ಕೆಲವು ಕ್ಷಣಗಳ ಮಟ್ಟಿಗೆ ಶಾಂತವಾಗಿರುತ್ತದೆ, ಪ್ರತಿಯೊಬ್ಬರ ಮನದಲ್ಲೂ ರಾಷ್ಟ್ರ ಭಕ್ತಿಯ ಸಂಚನವಾಗುತ್ತದೆ. 500 ಸಾವಿರ ಜನ ಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನಿತ್ಯ ಬೆಳಗ್ಗೆ ಎಂಟು ಗಂಟೆಗೆ ರಾಷ್ಟ್ರಗೀತೆಯ ಅನುರಣನವಾಗುತ್ತದೆ. ರಾಷ್ಟ್ರ ಗೀತೆಗೆ ಗ್ರಾಮದ ಪ್ರತಿಯೊಬ್ಬರು ಎದ್ದು ನಿಂತು ಗೌರವ ಸಲ್ಲಿಸುತ್ತಾರೆ.
ಬನಕಪುರ
ಚಂಡಿಗಡ್ ರಾಜ್ಯದ ಫರಿದಾಬಾದ್ ಜಿಲ್ಲೆಯ ಈ ಗ್ರಾಮದಲ್ಲಿ ನಿತ್ಯ ಬೆಳಗ್ಗೆ 8 ಗಂಟೆಗೆ ರಾಷ್ಟ್ರಗೀತೆಯನ್ನು ಮೈಕನಲ್ಲಿ ಪ್ರಸಾರ ಮಾಡಲಾಗುತ್ತದೆ. ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಂತೆ ಗ್ರಾಮದ ಎಲ್ಲರು ಜಾತಿ, ಮತ, ಧರ್ಮದ ಭೇದ ಮರೆತು ಗೌರವ ಸೂಚಿಸುತ್ತಿದ್ದಾರೆ. ಗ್ರಾಮದ ನಾನಾ ಕಡೆ 20 ಮೈಕ್ ಗಳನ್ನು ಅಳವಡಿಸಿದ್ದು, ಇಡೀ ಗ್ರಾಮಸ್ಥರು ಏಕಕಾಲಕ್ಕೆ ರಾಷ್ಟ್ರಗೀತೆ ಹಾಡಲು ಅವಕಾಶ ಮಾಡಿಕೊಡಲಾಗಿದೆ.
ಗ್ರಾಮ ಸರ್ಪಂಚ್ ಸಚಿನ್ ಮಡೋತಿಯಾ ಈ ಪದ್ಧತಿಯನ್ನು ಜಾರಿಗೆ ತಂದಿದ್ದು, ಉದ್ಘಾಟನೆ ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ತೆಕ್ ಚಂದ ಶರ್ಮಾ, ಫರಿದಾಬಾದ್ ಮ್ಯಾಜಿಟ್ರೆಟ್ ಪ್ರತಾಪ್ ಶಂಕರ್ ಮತ್ತು ಆರ್ ಎಸ್ ಎಸ್ ಹರ್ಯಾಣದ ಮುಖಂಡ ಗಂಗಾ ಶಂಕರ ಹಾಜರಿದ್ದು, ರಾಷ್ಟ್ರಗೀತೆ ಇಡೀ ಗ್ರಾಮಕ್ಕೆ ಅಳವಡಿಸುವ ಮಹತ್ತರ ಯೋಜನೆಗೆ ಚಾಲನೆ ನೀಡಿದರು.
ಸರ್ಪಂಚ್ ಸಚಿನ್ ಮಡೊತಿಯಾ ಮಾತನಾಡಿ, ‘ಗ್ರಾಮದಲ್ಲಿ 2.97 ಲಕ್ಷ ವೆಚ್ಚದಲ್ಲಿ 20 ಮೈಕ್ ಗಳನ್ನು ಅಳವಡಿಸಲಾಗಿದೆ. ನನ್ನ ಮನೆಯಲ್ಲಿ ನಿಯಂತ್ರಣ ಕೋಠಡಿಯಿದ್ದು, ತೆಲಂಗಾಣದ ಜಮಿಕುಂಟಾ ಗ್ರಾಮದಲ್ಲಿ ಇಂತಹ ಯೋಜನೆ ಜಾರಿಯಲ್ಲಿದ್ದೆ. ಅಲ್ಲಿ ನಿತ್ಯ ಗ್ರಾಮದ ಎಲ್ಲರೂ ರಾಷ್ಟ್ರಗೀತೆ ಹೇಳುತ್ತಾರೆ. ಅಲ್ಲಿಂದ ಪ್ರೇರಣೆ ಪಡೆದು ನಮ್ಮ ಗ್ರಾಮದಲ್ಲೂ ಜಾರಿಗೆ ತರಲಾಗಿದೆ ಎಂದು ಹೇಳಿದರು.
ರಾಷ್ಟ್ರದಲ್ಲೇ ಇಡೀ ಗ್ರಾಮದಲ್ಲಿ ನಿತ್ಯ ರಾಷ್ಟ್ರಗೀತೆ ಹಾಡುವ ಪದ್ಧತಿ ಜಾರಿಗೆ ಬಂದಿರುವುದರಲ್ಲಿ ಬಂಕಾಪುರ ಎರಡನೇ ಸ್ಥಾನದಲ್ಲಿದೆ. ಬಂಕಾಪುರ ಗ್ರಾಮದಲ್ಲಿ 22 ಸಿಸಿವಿ ಅಳವಡಿಸಿದ್ದು, ರಕ್ಷಣಾ ವ್ಯವಸ್ಥೆಯನ್ನು ಹದ್ದುಬಸ್ತಿನಲ್ಲಿಡಲು ಹಳ್ಳಿಯೊಂದು ಮುಂದಾಗಿರುವುದು ಶ್ಲಾಘನೆ ವ್ಯಕ್ತವಾಗಿದೆ.
Leave A Reply