ಅಷ್ಟಕ್ಕೂ ಅಸ್ಸಾಂ ಪೊಲೀಸರೇಕೆ ಮಮತಾ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಗೊತ್ತೇ?
ಗುವಾಹಟಿ: ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸುವ ಹಾಗೂ ಯಾವಾಗಲೂ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರಿಗೆ ಈಗ ಸಂಕಷ್ಟ ಎದುರಾಗಿದೆ.
ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ ಸಿ) ಪ್ರಕ್ರಿಯೆ ಬಗ್ಗೆ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಸ್ಸಾಂ ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ನಾಲಿಗೆ ಹರಿಬಿಟ್ಟ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ಪೌರ ನೋಂದಣಿ ಪ್ರಕ್ರಿಯನ್ನು ಕೇವಲ ಬೆಂಗಾಲಿ ಭಾಷಿಕರನ್ನು ಅಸ್ಸಾಂನಿಂದ ಹೊರದೂಡಲು ಬಿಜೆಪಿ ಬಳಸುತ್ತಿದೆ. ಒಂದು ವೇಳೆ ಹೀಗೆ ಮಾಡುವುದಾದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ದೀದಿ ಹೇಳಿಕೆ ನೀಡಿದ್ದರು. ಇದು ವಿವಾದ ಸೃಷ್ಟಿಸಿದ್ದಲ್ಲದೆ ಎನ್ಆರ್ ಸಿ ಪ್ರಕ್ರಿಯೆಯನ್ನೇ ಪ್ರಶ್ನಿಸಿದಂತಾಗಿತ್ತು.
ಈ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಎನ್ಆರ್ ಸಿ ಪ್ರಕ್ರಿಯೆಯನ್ನು ಅಸ್ಸಾಂ ಜನ ಬೆಂಬಲಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಸಹ ಬೆಂಬಲ ನೀಡಿವೆ. ಆದರೆ ಮಮತಾ ಬ್ಯಾನರ್ಜಿಯವರು ಮಾತ್ರ ಪ್ರಕ್ರಿಯೆ ವಿರೋಧಿಸುವ ಜತೆಗೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಅಸ್ಸಾಂ ಸಚಿವ ಚಂದ್ರಮೋಹನ್ ಪಟೌರಿ ಟೀಕಿಸಿದ್ದರು.
ಅಲ್ಲದೆ ಮಮತಾ ಬ್ಯಾನರ್ಜಿ ಅವರ ಹೇಳಿಕೆ ವಿರುದ್ಧ ಗುವಾಹಟಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
Leave A Reply