ಆರ್ ಎಸ್ ಎಸ್ ಕಚೇರಿ ಮೇಲೆ ಬಾಂಬ್ ದಾಳಿ ಮಾಡಿದ ಆರೋಪಿ ಮತಾಂಧ ಮುಸ್ತಾಖ್ ಬಂಧನ
ದೆಹಲಿ: ಚೆನ್ನೈನಲ್ಲಿ 1993ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ ದಾಳಿ ಮಾಡಿ, 11 ರಾಷ್ಟ್ರ ಭಕ್ತರ ಸಾವಿಗೆ ಕಾರಣವಾಗಿದ್ದ ಆರೋಪಿ ಮತಾಂಧ ಮುಸ್ತಾಖ್ ನನ್ನು ಕೇಂದ್ರ ತನಿಖಾ ತಂಡ (ಸಿಬಿಐ) ಅಧಿಕಾರಿಗಳು ಬಂಧಿಸಿ, ಜೈಲಿಗಟ್ಟಿದ್ದಾರೆ.
ತಮಿಳುನಾಡು ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಉಮ್ಮಾ ದ ಸದಸ್ಯ 56 ವರ್ಷದ ಮುಸ್ತಾಖ್ ಅಹ್ಮದ್ ನನ್ನು ಚೆನ್ನೈನ ಹೊರವಲಯದಲ್ಲಿ ಬಂಧಿಸಲಾಗಿದೆ. ಮತಾಂಧ ಮುಸ್ತಾಖ್ ನ ಬಗ್ಗೆ ಮಾಹಿತಿ ನೀಡಿದ್ದವರಿಗೆ ಸಿಬಿಐ 10 ಲಕ್ಷ ಹಣ ಘೋಷಿಸಿದ್ದರು.
ಚೆನ್ನೈನ ಚೆತ್ ಪುಟ್ ನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಮೇಲೆ 1993 ಆಗಸ್ಟ್ 8ರಂದು ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 11 ಜನರು ಮೃತಪಟ್ಟು, 7 ಜನರಿಗೆ ಗಾಯಗಳಾಗಿದ್ದವು. ಮುಸ್ತಾಖ್ ವಿರುದ್ಧ ಆರ್ ಡಿಎಕ್ಸ್ ಬಾಂಬ್ ಮೂಲಕ ದಾಳಿ ನಡೆಸುವುದು ಮತ್ತು ಇತರರಿಗೆ ಬಾಂಬ್ ಸರಬರಾಜು ಮಾಡುತ್ತಿರುವ ಆರೋಪವು ಇದೆ.
1994 ಜೂನ್ 8 ರಂದು ತನಿಖಾಧಿಕಾರಿಗಳು 18 ಜನರ ವಿರುದ್ಧ ಭಯೋತ್ಪಾದನೆ ಹಾಗೂ ವಿಧ್ವಂಸಕ ಚಟುವಟಿಕೆಗಳ ಕಾಯಿದೆ ಪ್ರಕಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2007 ಜೂನ್ 21 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ 11 ಜನರನ್ನು ಅಪರಾಧಿಗಳೆಂದು ಹಾಗೂ ಸಾಕ್ಷಾಧಾರ ಕೊರತೆ ಹಿನ್ನೆಲೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಅಲ್ ಉಮ್ಮಾ ಸ್ಥಾಪಕ ಎಸ್ .ಎ ಭಾಷಾ ಸೇರಿ ನಾಲ್ವರ ವಿರುದ್ಧದ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಐಎಸ್ ಐ ಏಜೆಂಟ್ ಇಮಾಮ್ ಅಲಿ ಮದುರೈ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದಾಗ ಬೆಂಗಳೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ.
Leave A Reply