ಅರಿಯಲಿಲ್ಲ ಮುಸ್ಲಿಂ ಮಹಿಳೆಯರ ಸಂಕಟ, ಕಾಂಗ್ರೆಸ್ಸೇ ಅವರಿಗೆ ಕಂಟಕ
ದೆಹಲಿ: ಮುಸ್ಲಿಂ ಮಹಿಳೆಯರನ್ನು ಮದುವೆಯಾಗಿ ಬೇಕಾಬಿಟ್ಟಿಯಾಗಿ ತಲಾಖ್ ನೀಡಿ ಬೀದಿಗೆ ತಳ್ಳುತ್ತಿದ್ದ ಕೊಳಕು ಪದ್ಧತಿಯನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿ, ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ತೀವ್ರ ವಾಗಿ ವಿರೋಧಿಸಿ ಮಸೂದೆ ಅಂಗೀಕಾರಕ್ಕೆ ಅಡ್ಡಗಾಲು ಹಾಕಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ತನ್ನ ಮುಸ್ಲಿಂ ಮಹಿಳಾ ವಿರೋಧಿ ನೀತಿಯನ್ನು ಮುಂದುವರಿಸಿದೆ.
ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ವಿರೋಧಿಸಿ ಇಬ್ಬಂದಿತನ ತೋರಿದೆ. ಅಲ್ಲದೇ ಚರ್ಚೆ ವೇಳೆ ಗದ್ದಲ, ಕೋಲಾಹಲ ಸೃಷ್ಟಿಸಿ ವಿನಾಕಾರಣ ಮಸೂದೆಗೆ ವಿರೋಧ ವ್ಯಕ್ತಪಡಿಸಿದೆ.
ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಬಗ್ಗೆ ಚರ್ಚೆಗಳು ನಡೆಯುವಾಗಲೇ ಹಲವು ಮುಸ್ಲಿಂ ಮಹಿಳೆಯರಿಗೆ ದೇಶ, ವಿದೇಶದಿಂದಲೂ ತಲಾಖ್ ನೀಡಿ, ಸಂಕಷ್ಟಕ್ಕೆ ದೂಡುತ್ತಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಕಾಂಗ್ರೆಸ್ ವಿರೋಧಕ್ಕಾಗಿ ವಿರೋಧಿಸುತ್ತಾ ಚಳಿಗಾಲದ ಅಧಿವೇಶನವನ್ನು ಗದಲದ ಮಧ್ಯೆ ಕೊನೆಗೊಳಿಸಿದ್ದು, ತಲಾಖ್ ನಿಷೇಧ ಮಸೂದೆ ಜಾರಿಗೆ ಮತ್ತಷ್ಟು ದಿನ ಮುಂದೆ ಹೋಗುವಂತ ಸ್ಥಿತಿ ನಿರ್ಮಿಸಿದೆ.
ಮಸೂದೆಯಲ್ಲಿನ ಕೆಲವು ನಿಯಮಗಳನ್ನು ಬದಲಾಯಿಸಬೇಕು, ತಲಾಖ್ ಪದ್ಧತಿಯನ್ನು ಕ್ರಿಮಿನಲ್ ಎಂಬ ನಿಯಮವನ್ನು ಬದಲಾಯಿಸಬೇಕು, ಮಸೂದೆ ಕುರಿತು ಪರಿಶೀಲನೆ ನಡೆಸಲು ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದರು. ಇದೇ ನೆಪವನ್ನು ಇಟ್ಟುಕೊಂಡು ಗದ್ದಲ, ಕೋಲಾಹಲ ಸೃಷ್ಟಿಸಿದ್ದರಿಂದ ಚಳಿಗಾಲದ ಅಧಿವೇಶವನ ಮುಕ್ತಾಯವಾಗಿದ್ದು, ತ್ರಿವಳಿ ತಲಾಖ್ ನಿಷೇಧ ಮಸೂದೆ ಅಂಗೀಕಾರ ಮತ್ತೆ ಮುಂದೆ ಸಾಗಿದೆ.
ಕಾಂಗ್ರೆಸ್ ಗೆ ಮುಸ್ಲಿಂ ಮಹಿಳೆಯರ ಛೀಮಾರಿ
ಇನ್ನು ಕಾಂಗ್ರೆಸ್ ಸಂಸತ್ ನಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ಮುಸ್ಲಿಂ ಮಹಿಳೆಯರು ಛೀಮಾರಿ ಹಾಕಿದ್ದಾರೆ. ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯಕ್ಕೆ ಬೆಲೆ ನೀಡುತ್ತಿಲ್ಲ. ಅವರನ್ನು ಸಂಕಷ್ಟಕ್ಕೆ ದೂಡುತ್ತಿದೆ. ತ್ರಿವಳಿ ತಲಾಖ್ ಮಸೂದೆ ಜಾರಿಯಾಗದಿದ್ದರೇ ನಿತ್ಯ ನೂರಾರು ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುವಂತಾಗುತ್ತದೆ. ಅದಕ್ಕೆ ನೇರ ಹೊಣೆ ಕಾಂಗ್ರೆಸ್ ಎಂದು ಮುಸ್ಲಿಂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ವಿರುದ್ಧ ದೆಹಲಿಯ ಸಂಸತ್ ಎದುರು ಪ್ರತಿಭಟನೆ ನಡೆಸಿದ್ದಾರೆ.
Leave A Reply