ದೀಪಕ್ ಕುಟುಂಬಕ್ಕೆ ನೆರವಿನ ಮಹಾಪುರ : ಸರ್ಕಾರದ ಹಂಗಿಲ್ಲ ಎಂದು ಸಾಬೀತುಪಡಿಸಿದ ಸ್ವಾಭಿಮಾನಿ ಹಿಂದೂಗಳು
ಮಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂಗಳ ಸರಣಿ ಹತ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತುತ್ತಿಲ್ಲ. ಕಾಟಾಚಾರಕ್ಕೆ ತನಿಖೆ ನಡೆಸಿ, ಕೆಲವೊಮ್ಮೆ ತನಿಖೆ ಆರಂಭವಾಗುವ ಮುನ್ನವೇ ಗೃಹ ಸಚಿವರು, ಮುಖ್ಯಮಂತ್ರಿಗಳೇ ಷರಾ ಬರೆದು ಬಿಟ್ಟಿದ್ದಾರೆ. ಇನ್ನು ಹತ್ಯೆಯಾದವರ ಕುಟುಂಬದವರು ನಿತ್ಯ ಕಣ್ಣೀರಲ್ಲಿ ಕೈ ತೊಳೆದುಕೊಳ್ಳುತ್ತಿದ್ದರೂ ಸರ್ಕಾರ ಕಾಟಾಚಾರಕ್ಕೆ ಕೆಲ ಲಕ್ಷ ನೀಡಿ, ಕೈ ತೊಳೆದುಕೊಂಡು, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಆದರೆ ಹಿಂದೂ ಸಮಾಜದ ಯಾವುದೇ ವ್ಯಕ್ತಿ ಸಂಕಷ್ಟದಲ್ಲಿದ್ದರೂ ಸ್ಪಂದಿಸುವ ಹೃದಯ ವೈಶಾಲ್ಯವುಳ್ಳ ಹಿಂದುಗಳಿದ್ದಾರೆ ಎಂಬುದು ಮತ್ತೆ ಸಾಬೀತಾಗಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಜಿಹಾದಿಗಳ ದಾಳಿಗೆ ಬಲಿಯಾಗಿರುವ ದೀಪಕ್ ರಾವ್ ಕುಟುಂಬದ ಬೆನ್ನೆಲುಬಾಗಿ ಹಿಂದೂ ಸಮಾಜ ನಿಂತಿದೆ. ತಾಯಿ, ವಿಕಲಚೇತನ ಸಹೋದರ ಸೇರಿ ಮೂವರ ಆ ಚಿಕ್ಕ ಕುಟುಂಬಕ್ಕೆ ಆಶ್ರಯವಾಗಿದ್ದ ದೀಪಕ್ ರಾವ್ ಇಂದು ಜಿಹಾದಿಗಳ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ದೀಪಕ್ ಹತ್ಯೆಯಾಗಿದ್ದರಿಂದ ಅವರ ಕುಟುಂಬ ಅಕ್ಷರಶಃ ನಲುಗಿ ಹೋಗಿದೆ. ದೀಪಕ್ ತಾಯಿ ಮತ್ತು ಸಹೋದರ ನಿತ್ಯ ಕಣ್ಣೀರಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ ಅವರ ನೋವಿಗೆ ಇಡೀ ಹಿಂದೂ ಸಮಾಜ ಸ್ಪಂದಿಸಿದೆ, ಹಿಂದುಗಳ ಕುಟುಂಬ ಸಂಕಷ್ಟದಲ್ಲಿರುವುದನ್ನು ನೋಡಿ ಸಾವಿರಾರು ಹಿಂದೂಗಳು ಸಹಾಯ ಹಸ್ತಚಾಚಿದ್ದಾರೆ.
ಅದರ ಫಲವಾಗಿ ಇದೀಗ ದೀಪಕ್ ರಾವ್ ಅವರ ತಾಯಿಯ ಬ್ಯಾಂಕ್ ಖಾತೆಗೆ 17 ಲಕ್ಷ ರೂಪಾಯಿ ಜಮೆ ಆಗಿದ್ದು, ಈ ಸಂಖ್ಯೆ ಇನ್ನು ಮುಂದುವರಿಯುತ್ತಿದೆ. ರಾಜ್ಯ, ದೇಶ್ಯಾದ್ಯಂತ ಇರುವ ಲಕ್ಷಾಂತರ ಹಿಂದೂಗಳು ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಹಿಂದೂ ಸಮಾಜ ಸರ್ಕಾರದ ದುಡ್ಡಿಗೆ ಕೈಯೊಡ್ಡುವುದಿಲ್ಲ. ಸತ್ತವರಿಗೆ ನ್ಯಾಯ ಕೊಡಿಸಿ, ನಮ್ಮವರನ್ನು ನಾವು ಸಲಹಿಕೊಳ್ಳುತ್ತೇವೆ. ಕೇವಲ ರಕ್ಷಣೆ ನೀಡಿ, ದುಷ್ಟ ಮತಾಂಧರ ಕ್ರೌರ್ಯ ನಿಯಂತ್ರಿಸಿ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.
ದೀಪಕ್ ರಾವ್ ಅವರ ಕುಟುಂಬದ ಸಂಕಷ್ಟದ ಸ್ಥಿತಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲ ಹಿಂದೂಗಳಿಗೆ ತಲುಪಿತ್ತು. ಅವರ ಕಣ್ಣೀರು ನೋಡಿ, ಸಾಗರೋಪಾದಿಯಲ್ಲಿ ಹಿಂದೂಗಳು ಸಹಾಯಕ್ಕೆ ಮುಂದಾಗಿದ್ದು, ಹಿಂದೂಗಳಿಗೆ ಮತ್ತಷ್ಟು ಸ್ಥೈರ್ಯ ಬಂದಿದೆ. ಇದೇ ಹಿಂದೂಗಳ ತಾಕತ್ತು ಎಂಬ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳುಹಿಸಿದ್ದಾರೆ.
Leave A Reply