ಮೇವಾನಿ, ಖಲೀದನ ಬಣ್ಣ ಬಯಲು ಮಾಡಿದ ಕೋರೇಗಾಂವ್ ಗ್ರಾಪಂ ಸದಸ್ಯೆ
ಪುಣೆ: ಭೀಮಾ ಕೋರೇಗಾಂವ್ 200ನೇ ವಿಜಯೋತ್ಸವದ ವೇಳೆ ಮೇಲ್ವರ್ಗದವರು ದಲಿತರ ಮೆರವಣಿಗೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ, ಮಹಾರಾಷ್ಟ್ರಾದ್ಯಂತ ಗಲಭೆ ಸೃಷ್ಟಿಸಿದ್ದವರಿಗೆ ಕೋರೇಗಾಂವ್ ಗ್ರಾಮ ಪಂಚಾಯಿತಿ ಸದಸ್ಯೆ ತಕ್ಕ ಉತ್ತರ ನೀಡಿದ್ದಾರೆ.
ಕೋರೇಗಾಂವ್ ನಲ್ಲಿ ಮೇಲ್ವರ್ಗದವರು, ಕೆಳವರ್ಗದವರು, ಮುಸ್ಲಿಮರು ಎಂಬ ಭೇದ ಭಾವವಿಲ್ಲದೇ ಜೀವನ ನಡೆಸುತ್ತಿದ್ದೇವೆ ಎಂದು ಪುಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಮ್ಮ ಗ್ರಾಮದಲ್ಲಿ ಯಾವುದೇ ಗಲಭೆಗೆ ನಾವು ಅವಕಾಶ ನೀಡಿಲ್ಲ. ನಮ್ಮ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ಜನರು ಯಾವುದೇ ಗಲಭೆಗೆ ಪ್ರಚೋಧನೆ ನೀಡುವುದಿಲ್ಲ ಮತ್ತು ಅಂತಹ ದುಷ್ಕೃತ್ಯಗಳಲ್ಲಿ ಭಾಗವಹಿಸುವುದಿಲ್ಲ. ನಾವೇ ಗಲಭೆ ಸೃಷ್ಟಿಸಿ, ನಮ್ಮವರಿಗೆ ತೊಂದರೆ ಕೊಡುವಷ್ಟು ಮೂರ್ಖರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ನಮ್ಮ ಮನೆಗಳಿಗೆ, ಮನೆಗಳಿಗೆ ಬೆಂಕಿ ಇಟ್ಟಿಲ್ಲ, ನಮ್ಮ ತಾಯಿಯಂದಿರು ಮತ್ತು ಸಹೋದರಿಯರ ಮಧ್ಯೆ ಅಟ್ರಾಸಿಟಿ ಪ್ರಕರಣ ದಾಖಲಿಸಿ, ಭೇದ ಹುಟ್ಟುವಂತೆ ಮಾಡಲಾಗುತ್ತಿದೆ. ನಮ್ಮಲಿ ಜಾತಿ, ಧರ್ಮಗಳ ಹಂಗಿಲ್ಲದೇ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ಜನವರಿ 1 ರಂದು ನಡೆದ ಭೀಮಾ ಕೋರೇಗಾಂವ್ ವಿಜಯೋತ್ಸವದ ವೇಳೆ ದಲಿತ ನಾಯಕನಂತೆ ಬಿಂಬಿಸಿಕೊಂಡಿರುವ ಜಿಗ್ನೇಶ್ ಮೇವಾನಿ ಮತ್ತು ಕಮ್ಯುನಿಸ್ಟ್ ಬೆಂಬಲಿಗ, ಭಾರತ ತೇರೆ ತುಕ್ಡೆ ಹೋಂಗೆ ಎನ್ನುವ ಉಮರ್ ಖಲೀದ್ ಪ್ರಚೋಧನಕಾರಿ ಭಾಷಣವನ್ನು ಮಾಡುವ ಮೂಲಕ ಗಲಭೆಗೆ ಪ್ರೇರಣೆ ನೀಡಿದ್ದರು. ಮತ್ತು ಮೇಲ್ವರ್ಗದವರು ದಲಿತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಎಂದು ಅವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
Leave A Reply