ಗೋ ರಕ್ಷರ ನಿರಂತರ ಶ್ರಮ, ಗೋವಾಕ್ಕೆ ಗೋ ಮಾಂಸದ ಕೊರತೆ
ಪಣಜಿ: ಕರ್ನಾಟಕದಲ್ಲಿ ಗೋ ರಕ್ಷಕರು, ಗೋ ಅಭಿಯಾನ ನಡೆಸಿ, ಅಕ್ರಮ ಗೋ ಸಾಗಣೆ ತಡೆಯುತ್ತಿರುವುದರಿಂದ ಗೋವಾದಲ್ಲಿ ಗೋ ಮಾಂಸ ಮಾರಾಟಗಾರರಿಗೆ ಮಾಂಸದ ಕೊರತೆ ಉಂಟಾಗಿದೆ ಎಂದು ಗೋ ಮಾಂಸ ಮಾರಾಟಗಾರರ ಸಂಘ ತಿಳಿಸಿದೆ. ಇದು ಗೋ ರಕ್ಷಣೆ, ಗೋ ರಕ್ಷಣೆ ಅಭಿಯಾನ ನಡೆಸುತ್ತಿರುವ ಎಲ್ಲರಿಗೂ ಸಲ್ಲಲೇಬೇಕಾದ ಗೌರವ.
ಕರ್ನಾಟಕದ ಬೆಳಗಾವಿಯಿಂದ ನಿತ್ಯ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಇದೀಗ ಗೋ ರಕ್ಷಕರ ಭೀತಿಯಿಂದ ಸಾಗಣೆಗೆ ತಡೆಯುಂಟಾಗುತ್ತಿದೆ. ಇದರಿಂದ ಗೋ ಮಾಂಸಕ್ಕೆ ಕೊರತೆ ಉಂಟಾಗಿದೆ ಎಂದು ಗೋ ಮಾಂಸ ಮಾರಾಟಗಾರರ ಸಂಘ ಆರೋಪಿಸಿದೆ. ಸರ್ಕಾರ ಗೋ ರಕ್ಷಕರ ಕುರಿತು ಕೂಡಲೇ ಮಧ್ಯ ಪ್ರವೇಶಿಸಬೇಕು. ಇಲ್ಲವಾದಲ್ಲಿ ಗೋ ಮಾಂಸಕ್ಕೆ ತೀವ್ರ ಸಮಸ್ಯೆಯಾಗಲಿದೆ ಎಂದು ಗೋ ಮಾಂಸ ಮಾರಾಟಗಾರರ ಸಂಘ ತಿಳಿಸಿದೆ.
ಕರ್ನಾಟಕದಿಂದ ಗೋವಾಕ್ಕೆ ಗೋ ಸಾಗಣೆ ವೇಳೆ ಗೋ ರಕ್ಷಕರು ತಡೆಯೊಡ್ಡುತ್ತಿದ್ದಾರೆ. ಈ ಪ್ರಕ್ರಿಯೆ ಕ್ರಿಸ್ ಮಸ್ ನಿಂದ ಹೆಚ್ಚಾಗಿದ್ದು, ಮಾರಾಟಗಾರರು ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಾರೆ ಎಂದು ತಡೆಯೊಡ್ಡುತ್ತಿರುವುದರಿಂದ ಕರ್ನಾಟಕದಿಂದ ಸಾಗಣೆ ಮಾಡುವುದನ್ನೇ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಗೋವಾ ಖುರೇಷಿ ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಮನ್ನಾ ಬಪ್ಪಾರಿ ಹೇಳಿದ್ದಾರೆ.
ಬೆಳಗಾವಿಯಿಂದ ನಿತ್ಯ 25 ಟನ್ ಗೋ ಮಾಂಸ ಸಾಗಣೆ..!
ಗೋವಾಕ್ಕೆ ಕರ್ನಾಟಕದ ಬೆಳಗಾವಿಯಿಂದ ನಿತ್ಯ 25 ಟನ್ ಗೋ ಮಾಂಸ ಸಾಗಣೆಯಾಗುತ್ತದೆ. ಗೋವಾದಲ್ಲಿ ಗೋವುಗಳ ಉತ್ಪಾದನೆ ಇಲ್ಲ. ಇದರಿಂದ ಗೋವಾದಲ್ಲಿ ಮಾಂಸದ ಕೊರತೆ ಉಂಟಾಗಿದೆ ಎ ಖುರೇಷಿ ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಮನ್ನಾ ಬಪ್ಪಾರಿ.
ಕರ್ನಾಟಕದಲ್ಲಿರುವ ಗೋ ರಕ್ಷಣಾ ತಂಡಗಳು, ಗೋ ರಕ್ಷಕ ಅಭಿಯಾನಗಳು ಗೋವಾಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂದು ದೂರುತ್ತಿವೆ. ನಾವು ಕರ್ನಾಟಕದಿಂದ ಅಕ್ರಮವಾಗಿ ಗೋವುಗಳನ್ನು ತರುವುದಿಲ್ಲ. ಕಾನೂನಾತ್ಮಕವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಕಸಾಯಿಖಾನೆಗಳಿಂದ ತರುತ್ತೇವೆ. ಆದರೆ ಗಡಿಯಲ್ಲಿ ನಮ್ಮ ವಾಹನಗಳನ್ನು ತಡೆದು, ಅಕ್ರಮವಾಗಿ ಗೋ ಮಾಂಸ ಸಾಗಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ ಎನ್ನುತ್ತಾರೆ ಬಪ್ಪಾರಿ.
ನಾವು ಕಾನೂನಾತ್ಮಕವಾಗಿ ನಡೆಸುತ್ತಿರುವ ಕಸಾಯಿ ಖಾನೆಗಳಿಂದಲೇ ಮಾಂಸವನ್ನು ಸಾಗಿಸುತ್ತೇವೆ. ಯಾವುದಾರರೂ ಸಂಘಟನೆಗಳಿಗೆ ವಿರೋಧವಿದ್ದರೇ, ಮಾರಾಟ ಮಾಡುವ ಕಸಾಯಿ ಖಾನೆಗಳ ಎದುರು ಹೋಗಿ ಪ್ರತಿಭಟನೆ ನಡೆಸಲಿ, ತಡೆಯಲಿ. ಅದನ್ನು ಬಿಟ್ಟು ಸಾಗಣೆ ಮಾಡುವ ವಾಹನಗಳನ್ನು ತಡೆದರೇ ಲಕ್ಷಾಂತರ ರೂಪಾಯಿ ಹಾನಿಯಾಗುತ್ತದೆ ಎಂದು ಗೋವಾ ಗೋ ಮಾಂಸ ಮಾರಾಟಗಾರರು ಹೇಳಿದ್ದಾರೆ.
ಅನುಮತಿಯಿಲ್ಲದೇ ಗೋ ಮಾಂಸ ಸಾಗಣೆ
ಗೋವಾ ಮತ್ತು ಕರ್ನಾಟಕ ಗಡಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಅನುಮತಿಯಿಲ್ಲದೇ ಗೋ ಮಾಂಸ ಸಾಗಣೆ ಮಾಡಲಾಗುತ್ತಿದೆ. ಆದ್ದರಿಂದ ಗೋ ರಕ್ಷಕ ಪಡೆಗಳು ಗೋವುಗಳ ಸಂರಕ್ಷಣೆ ಮುಂದಾಗಿವೆ. ಗಡಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಸಾಯಿಖಾನೆಗಳು ಮತ್ತು ಸಾಗಣೆ ಸಮಯದಲ್ಲಿ ಪೊಲೀಸರ ಜತೆ ಪರೀಕ್ಷಿಸಲು ಮುಂದಾಗಿದ್ದೇವೆ ಎನ್ನುತ್ತಾರೆ ಗೋ ರಕ್ಷಕ ಅಭಿಯಾನದ ಮುಖಂಡ ಹನುಮಂತ ಪರಬ್.
Leave A Reply