• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಅನಂತಕುಮಾರ ಹೆಗಡೆ ಅವರನ್ನು ಟೀಕಿಸಿದವರೇ ಅವರ ಮನದ ಮಾತು ಕೇಳಿ..!

ಅನಂತಕುಮಾರ ಹೆಗಡೆ, ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವರು Posted On January 7, 2018
0


0
Shares
  • Share On Facebook
  • Tweet It

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಮತ್ತು ಜಾತ್ಯಾತೀತತೆಯ ಹೇಳಿಕೆಗೆ ಬುದ್ಧಿಜೀವಿಗಳು, ಕಾಂಗ್ರೆಸ್ಸಿಗರು ಅಬ್ಬರಿಸಿ, ಬೊಬ್ಬಿರಿದು, ಅವರ ಬಾಯಿಯಿಂದ ‘ಕ್ಷಮೆ ಕೇಳುವುದರಲ್ಲಿ ತಪ್ಪಿಲ್ಲ’ ಎಂದು ಹೇಳಿಸಿ, ಜಯದ ನಗೆ ಬೀರಿದ್ದರು. ಆದರೆ ಅವರೆಲ್ಲರ ಪ್ರಶ್ನೆಗಳಿಗೆ ಅನಂತಕುಮಾರ ಹೆಗಡೆ ಅಷ್ಟೇ ಸಮಚಿತ್ತವಾದ ಲೇಖನ ಬರೆದು… ತಮ್ಮ ಮಾತಿನಲ್ಲಿರುವ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾರೆ.. ಹೆಗಡೆ ಅವರು ಬರೆದ ಲೇಖನ ತುಳುನಾಡು ಓದುಗರಿಗಾಗಿ…

ರಾಜಕೀಯ ಕ್ಷೇತ್ರ ಬಚ್ಚಲು ಮನೆ ಇದ್ದ ಹಾಗೆ… ಸದಾ ಪಾಚಿ ಕಟ್ಟುತ್ತಲೆ ಸ್ವಚ್ಛಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವೊಮ್ಮೆ ಸ್ವಚ್ಛಗೊಳಿಸುವ ಭರದಲ್ಲಿ ಜಾರುವ ​ಸಂದರ್ಭ ಉಂಟಾಗುತ್ತದೆ. ಕಳೆದ ಒಂದು ವಾರದ ವಿದ್ಯಮಾನ ಇದನ್ನು ಇನ್ನಷ್ಟು ಪುಷ್ಟಿಗೊಳಿಸಿದೆ.

ಕಳೆದ ವಾರದಿಂದ Google ನಲ್ಲಿ ಸಂವಿಧಾನ, ಜಾತ್ಯತೀತತೆ ಮತ್ತು ಅದಕ್ಕೆ ಸಂಬಂದಿಸಿದ ವಿಷಯದ ಬಗ್ಗೆ, ದೇಶದಾದ್ಯಂತ ನಮ್ಮ ಜನ ಜಾಲಾಡಿದ ಬಗೆ ಮಾತ್ರ ಅವಿಸ್ಮರಣೀಯ! ಎಂದು ಕಾಣದ ಧಾವಂತ, ಅಸಂಖ್ಯಾತ Digital Footprints ದಾಖಲಿಸಲು ಈ ಸಂದರ್ಭ ಸಾಕ್ಷಿಯಾಯಿತು. ನನ್ನ ಹೇಳಿಕೆಯ ಹಿನ್ನಲೆಯಲ್ಲಿ, ಸಂವಿಧಾನ ಮತ್ತು ಜಾತ್ಯತೀತತೆ ಬಗ್ಗೆ ತಿಳಿದುಕೊಳ್ಳಲು ದೇಶದ ಹಲವಾರು ಮಂದಿ ಪ್ರಯತ್ನಿಸಿದ್ದು ನನ್ನನ್ನು ಬಹುತೇಕ ಚಿಕಿತಗೊಳಿಸಿತು. ಎಂದಿನಂತೆ ಸಂಸತ್ತಿನ ವಾಚನಾಲಯದ ಮೇಜಿನ ಮೇಲೆ Magazines ಬದಲಿಗೆ Making of Constitution ಹಾಗು ಸಂವಿಧಾನದ ಬಗ್ಗೆ ಇರುವ ಇತರ ಹಲವಾರು ಪುಸ್ತಕಗಳು ಹೆಚ್ಚಾಗಿ ಕಾಣಿಸಿಕೊಂಡವು. ನನ್ನ ಹೇಳಿಕೆ ಈ ಅಷ್ಟು ಬೆಳೆವಣಿಗೆಗಳನ್ನು ರೂಪಿಸಿದ್ದೆಯಾಗಿದ್ದಲ್ಲಿ ಇದಕ್ಕಿಂತ ಬೇರಾವ ಸಂತಸವಿದೇ!!

ಇನ್ನು….. ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶ ಕಂಡ ಪರಮೋಚ್ಚ ರಾಷ್ಟ್ರ ಋಷಿ…. ಹಾಗು ನನ್ನ ಪಾಲಿಗೆ ಅವರು ಪ್ರಾತಃ ಸ್ಮರಣೀಯ ಮತ್ತು ಅತ್ಯುನ್ನತ ಆದರಣೀಯ ಸ್ಪೂರ್ತಿಯ ಚೇತನ! ಈ ಮಹಾನ್ ಚೇತನವನ್ನು ಅಂದಿನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎನ್ನುವುದು ಇಂದಿನ ತಲೆಮಾರಿನ ಹಲವರಿಗೆ ತಿಳಿಯದಾಗಿದೆ. ಬಾಬಾಸಾಹೇಬ್ ರನ್ನು, ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತ್ರತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು. ಚುನಾವಣೆಯಲ್ಲಿ ಅವರನ್ನು ಮೋಸದಿಂದ ಸೋಲಿಸಿ, ಅವರ ರಾಜಕಾರಣದ ಅವಕಾಶಗಳನ್ನು ಕಿತ್ತುಕೊಂಡರು. ಆ ದಿನಗಳಲ್ಲಿ ದಲಿತ ಸಂಘಟನೆ ಅಥವಾ ದೇಶದ ನಿಜವಾದ ಬೌದ್ಧಿಕ ಶಕ್ತಿಗಳು ಸಹ, ಎಚ್ಚತುಗೊಳ್ಳದೆ ಮತ್ತು ಬಲಿಷ್ಠವಾಗಿರದೆ, ಅಂಬೇಡ್ಕರ್ ರ ನೆರವಿಗೆ ಕೂಡ ಧಾವಿಸಲಿಲ್ಲ. ಅವರ ರಾಜಕಾರಣವನ್ನು ಅಂದಿನ ನೆಹರು ಕೂಟ ಹಾಗು ಕಮ್ಯುನಿಸ್ಟ್ ಸೋಗಲಾಡಿಗಳು ಜಂಟಿಯಾಗಿ ನಿರ್ನಾಮ ಮಾಡಿದವು. ಮುಂದೆ ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್ ರವರನ್ನು ಹದ್ದುಬಸ್ತಿನಲ್ಲಿಡಲು, ಇತಿಹಾಸದ ಕಪಾಟಿನಿಂದ ಅಂಬೇಡ್ಕರ್ ರವರನ್ನು ಹೊರತಂದು ದೇಶದ ಜನತೆಗೆ ಅವರ ಪರಂಪರೆಯ ವಾರಸುದಾರರು ತಾವೆಂದು ಬಿಂಬಿಸಿದರು. ಈ ಮೋಸದ ಪರಂಪರೆ ಹಲವು ತಲೆಮಾರುಗಳನ್ನು ದಾರಿ ತಪ್ಪಿಸಿ ಇಂದಿಗೂ ಅದನ್ನು ಚಾಲ್ತಿಯಲ್ಲೇ ಇಟ್ಟಿರುವ ಕಾಂಗ್ರೆಸ್ ನವರ ಸೋಗಲಾಡಿತನ ಮಾತ್ರ ಇತ್ತೀಚಿನ ದಿನಗಳಲ್ಲಿ ಬಟಾಬಯಲಾಗುತ್ತಿದೆ. ಡಾ। ಅಂಬೇಡ್ಕರ್ ರವರನ್ನು ಸಂಪೂರ್ಣವಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಇಂದಿನ ಮೂರು ಕಾಸಿನ ಚಿಲ್ಲರೆ ನಾಯಕರುಗಳಿಗೆ ತಮ್ಮ ನೆಲ ಕುಸಿಯುತಿರುವ ಅನುಭವವಾಗಿದ್ದರಿಂದಲೇ ಕಳೆದ ೩-೪ ದಿನಗಳ ಆರ್ಭಟ-ಚೀರಾಟ-ನರ್ತನ ನಡೆದದ್ದು!

ಡಾ। ಅಂಬೇಡ್ಕರ್ ಸಂವಿಧಾನದಲ್ಲಿ “ಸಮಾಜವಾದ ಮತ್ತು ಜಾತ್ಯತೀತತೆ” ಎಂದು ವರ್ಣಿಸದಿರುವ ಬಗ್ಗೆ ಎದ್ದ ಆಕ್ಷೇಪಕ್ಕೆ ಉತ್ತರಿಸಿದ್ದು ಹೀಗೆ……

” ಸಾಮಾಜಿಕ ವ್ಯವಸ್ಥೆ ಒಂದು ನಿರ್ದಿಷ್ಟ ರೂಪವನ್ನು ತೆಗೆದುಕೊಳ್ಳಬೇಕೆಂದು ನೀವು ಸಂವಿಧಾನದಲ್ಲಿ ಹೇಳಿದರೆ, ನನ್ನ ಪ್ರಕಾರ, ಜನರು ಬದುಕಲು ಬಯಸುವ ಸಾಮಾಜಿಕ ವ್ಯವಸ್ಥೆ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ ಪ್ರಜೆಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ಇಂದು, ಸಮಾಜದ ಬಹುಪಾಲು ಜನರು ಸಮಾಜವಾದ ವ್ಯವಸ್ಥೆಯನ್ನು, ಬಂಡವಾಳಶಾಹಿ ವ್ಯವಸ್ಥೆಗಿಂತಲೂ ಉತ್ತಮವೆಂದು ಪ್ರಸ್ತುತ ಸಮಯದಲ್ಲಿ ಪರಿಗಣಿಸಿರುವುದು ಸರಿಯಷ್ಟೆ. ಆದರೆ ಮುಂದಿನ ದಿನಗಳಲ್ಲಿ ಸಮಾಜವಾದಿ ವ್ಯವಸ್ಥೆಗಿಂತ ಉತ್ತಮವಾದ ಸಾಮಾಜಿಕ ರೂಪದ ಇತರ ವ್ಯವಸ್ಥೆಗಳನ್ನು ಜನರು ಯೋಚಿಸುವಂತೆ ಮಾಡುವುದು ಸಾಧ್ಯವಿದೆ. ಹಾಗಾಗಿ ಒಂದು ನಿರ್ದಿಷ್ಟ ರೂಪದಲ್ಲಿ ಜನರು ಬದುಕಲು ಸಂವಿಧಾನವನ್ನು ಏಕೆ ಕಟ್ಟಿಹಾಕಬೇಕು ಮತ್ತು ಅದನ್ನು ಸ್ವತಃ ಅಂದಿನ ಜನರೇ ಅಂದಿನ ಕಾಲಮಾನಕ್ಕೆ ನಿರ್ಧರಿಸಲು ಆ ಜನರಿಗೆ ಏಕೆ ಬಿಡಬಾರದು? ಈ ದೃಷ್ಟಿಕೋನದಲ್ಲಿ ನಾವು ಈ ತಿದ್ದುಪಡಿ ಪ್ರಸ್ತಾಪವನ್ನು ವಿರೋಧಿಸುತ್ತಿದ್ದೇವೆ. ”

ತಿದ್ದುಪಡಿಯು “ಸಂಪೂರ್ಣವಾಗಿ ನಿರುಪದ್ರವ” ಮತ್ತು “ಅನಗತ್ಯ” ಎಂಬುದು ಅವರ ಎರಡನೆಯ ಆಕ್ಷೇಪಣೆ. ಏಕೆಂದರೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದಿಷ್ಟ ತತ್ವಗಳ ಮೂಲಕ ನಮ್ಮ ಸಂವಿಧಾನದಲ್ಲಿ ಸಮಾಜವಾದಿ ತತ್ತ್ವಗಳನ್ನು ಈಗಾಗಲೇ ಒಳಪಡಿಸಲಾಗಿದೆ. ನಿರ್ಧಿಷ್ಟ ತತ್ವಗಳನ್ನು ಉಲ್ಲೇಖಿಸುತ್ತಾ, ಅವರು “ಗಮನ ಸೆಳೆಯುವ ಈ ನಿರ್ದಿಷ್ಟ ತತ್ವಗಳು ಅವರ ದಿಕ್ಕಿನಲ್ಲಿ ಮತ್ತು ಅವರ ವಿಷಯದಲ್ಲಿ ಸಮಾಜವಾದವಾಗದಿದ್ದಲ್ಲಿ, ಇನ್ನು ಹೆಚ್ಚಿನ ಸಮಾಜವಾದವು ಏನೆಂಬುದನ್ನು ನಾನು ಅರಿಯೆ” ಎಂದು ಷಾ ಅವರಿಗೆ ತಿಳಿಸಿದರು. ಷಾ ಅವರ ತಿದ್ದುಪಡಿಯು ಜಾರಿಯಾಗುವಲ್ಲಿ ಅಂದು ವಿಫಲವಾಯಿತು ಮತ್ತು 42ನೇ ತಿದ್ದುಪಡಿ ತನಕ ಈ ಪೀಠಿಕೆ ಪ್ರಸ್ತಾವವು ಬದಲಾಗದೆ ಉಳಿಯಿತು.

ಸ್ವತಃ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಮುಂದಿನ ಪೀಳಿಗೆಯ ಆಶೋತ್ತರಗಳಿಗೆ, ದೇಶ ತನ್ನ ವ್ಯವಸ್ಥೆಯನ್ನು ಬದಲಿಸಿಕೊಳ್ಳಲು ಮುಂಬರುವ ಪೀಳಿಗೆಯವರಿಗೇ ಅವಕಾಶ ಒದಗಿಸಿ ತಾವು ಎಷ್ಟು ಪ್ರಜಾಪ್ರಭುತ್ವವಾದಿ ಎಂದು ನಿರೂಪಿಸಿದ್ದಾರೆ. ಇವರಿಗಿಂತ ಹೆಚ್ಚಿನ ಪ್ರಜಾಪ್ರಭುತ್ವವನ್ನು ಅರಗಿಸಿಕೊಂಡ ಇನ್ನೊಬ್ಬ ಮೇಧಾವಿಯನ್ನು ಈ ಜಗತ್ತು ಇಂದಿಗೂ ಕಂಡಿಲ್ಲ ಹಾಗು ಇನ್ನೂ ಸಹ ಕಾಯುತ್ತಲಿದೆ !

ಇಂತಹ ಮಹಾನ್ ಆರಾಧ್ಯ ಪುರುಷನನ್ನು ಕೇವಲ ಅಲಂಕಾರಿಕವಾಗಿ ತಮ್ಮ vote-bank ರಾಜಕೀಯಕ್ಕೆ ಬಳಸಿಕೊಳ್ಳುವ, ಮತಿಗೆಟ್ಟ ರಾಜಕಾರಣಿಗಳಿಗೆ ಹಾಗು ಬುದ್ಧಿಜೀವಿಯೆನಿಸಿಕೊಳ್ಳುವ ಸೋಗಲಾಡಿ ಗಂಜಿಗಿರಾಕಿಗಳಿಗೆ, ಮುಂದಿನ ದಿನಗಳಲ್ಲಿ ನನ್ನ ನಿಲುವನ್ನೇ ಇದೆ ಸಮಾಜ ಗಟ್ಟಿಯಾಗಿ ಪ್ರತಿಧ್ವನಿಗೊಳಿಸುವುದು ಪ್ರತಿಶತ ಸತ್ಯ. ಕೇವಲ ನನ್ನಂಥವನ ಒಂದು ಭಾಷಣದಲ್ಲಿ ಆಡಿದ ನನ್ನ ಆಲೋಚನೆಯನ್ನು ಜೀರ್ಣಿಸಿಕೊಳ್ಳಲಾಗದ ಈ ವಿಕೃತ ಮಂದಿಗೆ, ಇಂದಿನ ಯುವಜನತೆ ಮತ್ತು ಮುಂದಿನ ತಲೆಮಾರಿನ ಆಲೋಚನೆಗಳನ್ನೂ ಕಟ್ಟಿಹಾಕಲು ಎಂದಿಗೂ ಸಾಧ್ಯವಿಲ್ಲ. ಈ ಸಮಾಜ ಎಚ್ಚತ್ತುಗೊಂಡಿದೆ. ನಾಯಕರೆನಿಸಿಕೊಂಡವರು, ಈ ಕಾಲಮಾನದ ಕರೆಗೆ ಓಗೊಟ್ಟು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡದಿದ್ದಲ್ಲಿ ಅಂಥವರೆಲ್ಲರೂ ಇತಿಹಾಸದ ಕಸದ ಬುಟ್ಟಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಷಯ ಪ್ರಸ್ತಾಪ, ಪ್ರಸಕ್ತ ಕಾಲಮಾನದಲ್ಲಿ ಒಂದು ದಿಕ್ಸೂಚಿಯೆಂದು ತಿಳಿದು, ಪ್ರಸ್ತುತ (ಡೋಂಗಿ)ಜಾತ್ಯಾತೀತ(?) ರೆಂದು ಕರೆಸಿಕೊಳ್ಳುವವರಿಗೆ ಖಂಡಿತ ಕಾದಿದೆ ವಿಶೇಷ ನಿರಾಶ್ರಿತ ಶಿಬಿರಗಳು!!

ಮಾಧ್ಯಮದಲ್ಲಿ ನನ್ನನ್ನು ಯಾರು ಬೆಂಬಲಿಸಲಿಲ್ಲವೆಂದು ಬಿಂಬಿಸಿದರು ಸಹ ನನಗೆ ಮಾತ್ರ ಈ ವಿದ್ಯಮಾನದ ನಂತರ ಎಂದು ಒಬ್ಬಂಟಿಯೆನಿಸಲೇ ಇಲ್ಲ. ನಮ್ಮ ಜನರ ಪ್ರತಿಕ್ರಿಯೆ ಎಷ್ಟು ಉತ್ತಮವಾಗಿತ್ತು ಎಂದರೆ ನನ್ನನ್ನು ಇಂದಿನ ವಿದ್ಯಮಾನಗಳು ಇನ್ನಷ್ಟು ಹುರುಪು ಗೊಳಿಸಿ, ಶಕ್ತಿ ನೀಡಿ ಹೆಚ್ಚಿನ ವಿಶ್ವಾಸ ಮೂಡಿಸಿದೆ.

ಯಾವುದೋ ಅವಿವೇಕಿ, ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮವಿಲ್ಲವೆಂದಿದ್ದಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ ಈ ಸಮಾಜದ ವಿವಿಧ ಸ್ತರದ ನಾಯಕರೆಲ್ಲ ನಾಚಿಕೆಗೆಟ್ಟು ವಿಜೃಂಭಿಸಿದರು. ಆದರೆ ವಿಚಾರ ಪ್ರಚೋದನೆ ಮಾಡಿದ ನನಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ್ಯವಿಲ್ಲ. ನನ್ನ ನಾಲಿಗೆ ಕತ್ತರಿಸಿ ತಂದು ಕೊಡುವವರಿಗೆ ಬಹುಮಾನ ನೀಡುತ್ತೇವೆಯೆನ್ನುವವರ ಬಗ್ಗೆ ಇದೆ ನಮ್ಮ ರಾಜಕೀಯ ನಾಯಕರಾಗಲಿ, ಸಮಾಜದ ಬುದ್ಧಿಜೀವಿಯೆನಿಸಿಕೊಂಡವರಾಗಲಿ ಅಥವಾ ಮಾಧ್ಯಮದ ಮಂದಿಯಾಗಲಿ ಧ್ವನಿ ಎತ್ತದಿದ್ದದು ಪ್ರಸಕ್ತ ವಿದ್ಯಮಾನದ ಕಟು ವಾಸ್ತವವು ಹೌದು. ಆದರೆ ವಾಸ್ತವ ನೆಲಗಟ್ಟಿನಲ್ಲಿ ಜನ ಮಾನಸದಲ್ಲಿ ರೂಪಗೊಂಡ ಅಭಿಪ್ರಾಯ ಮಾತ್ರ ವ್ಯತಿರಿಕ್ತವಾಗಿತ್ತು. ನನಗಂತೂ ಹಲವು ನೇರ ಪ್ರತಿಕ್ರಿಯೆಗಳು ಬಂದವು. ನನ್ನ ನಿಲುವಿಗೆ ಹಲವರು ಬೆಂಬಲಿಸಿ ತಮ್ಮ ಅನಿಸಿಕೆಗಳನ್ನೂ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರೂ ನನ್ನ ವಿಚಾರವನ್ನು ಶ್ಲಾಘಿಸಿ ವಿಚಾರದ ಬಗ್ಗೆ ಧೀರ್ಘವಾಗಿ ಚರ್ಚಿಸಿ ಮತ್ತು ಇಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಅವರೆಲ್ಲರ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಅವರೆಲ್ಲರಿಗೂ ನನ್ನ ಅನಂತ ವಂದನೆಗಳು.

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
ಅನಂತಕುಮಾರ ಹೆಗಡೆ, ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವರು July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
ಅನಂತಕುಮಾರ ಹೆಗಡೆ, ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವರು July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search