ಕಾಂಗ್ರೆಸ್ಸಿಗರೇ ಇಲ್ಲಿ ಕೇಳಿ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆ ತಂದಾಗ ಜಿಡಿಪಿ ಶೇ 1.1 ಕುಸಿದಿತ್ತು
ದೆಹಲಿ: ಡಾ.ಮನಮೋಹನ್ ಸಿಂಗ್ 1991-92ರಲ್ಲಿ ಕೆಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಾಗ ದೇಶದ ರಾಷ್ಟ್ರೀಯ ಒಟ್ಟು ಉತ್ಪನ್ನ (ಜಿಡಿಪಿ) ಶೇ.1.1 ಕ್ಕೆ ಇಳಿದಿತ್ತು. ಯಾವುದೇ ಒಂದು ಆರ್ಥಿಕ ಸುಧಾರಣೆ ದೂರದೃಷ್ಟಿಯನ್ನಿಟ್ಟುಕೊಂಡು ಜಾರಿಗೆ ತರಲಾಗುತ್ತದೆ. ಅದರಂತೆ ನೋಟ್ಯಂತರ ಮತ್ತು ಜಿಎಸ್ ಟಿ ಜಾರಿಯಿಂದಲೂ ಕೆಲ ಹೊತ್ತು ಜಿಡಿಪಿ ಮೇಲೆ ಪರಿಣಾಮ ಬೀರಿದ್ದರು, ಭವಿಷ್ಯದಲ್ಲಿ ಉತ್ತಮ ಸ್ಥಿತಿ ಕಾಣಲಿದೆ ಎಂದು ಕೇಂದ್ರ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ವಿರುದ್ಧ ಪ್ರತಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದಕ್ಕೆ ರಾಜೀವ್ ಕುಮಾರ್ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ. ನಾಲ್ಕು ವರ್ಷದಲ್ಲಿ ನೋಟ್ಯಂತರ ಮತ್ತು ಜಿಎಸ್ ಟಿಯಂತ ನೂತನ ನಿಯಮಗಳನ್ನು ಜಾರಿಗೆ ತಂದರೂ ಜಿಡಿಪಿ ಶೇ.6.5 ರಷ್ಟು ಮಾತ್ರ ಇಳಿದಿದೆ. 1991-92ರ ವೇಳೆಗಿಂತ ಪ್ರಸ್ತುತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಜಿಡಿಪಿ ದರ ಕುಸಿದಿದೆ ಎಂದು ತಿಳಿಸಿದ್ದಾರೆ.
ಕೃಷಿ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದರಿಂದ ಕಳೆದ ಆರ್ಥಿಕ ವರ್ಷಕ್ಕಿಂತ ಈ ಬಾರಿ ಜಿಡಿಪಿ ದರ ಶೇ.7.1ಕ್ಕಿಂತ ಕುಸಿದಿದೆ ಎಂದು ಕೇಂದ್ರ ಅಂಕಿ ಮತ್ತು ಸಾಂಖಿಕ್ಯ ಇಲಾಖೆ ತಿಳಿಸಿದೆ.
ನೋಟು ಬ್ಯಾನ್ ಮಾಡಿದ್ದು ಮತ್ತು ಜಿಎಸ್ ಟಿ ಜಾರಿ ಮಾಡಿದ್ದರಿಂದಲೇ ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ನೂತನ ನೀತಿಗಳು ದೇಶಕ್ಕೆ ಎದುರಾದ ದುರಂತ ಎಂದು ಬಿಂಬಿಸಿದ್ದವು. ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಮ್ ‘ಕೇಂದ್ರದ ನೂತನ ಆರ್ಥಿಕ ನೀತಿಗಳಿಂದ ತೀವ್ರ ಸಮಸ್ಯೆಯಾಗುತ್ತಿದೆ. ದೇಶದ ಆರ್ಥಿಕ ಸ್ಥಿತಿ ಹೀನಾಯ ಮಟ್ಟಕ್ಕೆ ತಲುಪಿದೆ ಎಂದು ಆರೋಪಿಸಿದ್ದರು.
ಕೇಂದ್ರದ ನೂತನ ಯೋಜನೆಗಳ ಕುರಿತು ಪ್ರತಿ ಪಕ್ಷಗಳ ವಿನಾಕಾರಣದ ಆರೋಪಕ್ಕೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ ತಕ್ಕ ಉತ್ತರ ನೀಡಿದ್ದಾರೆ.
Leave A Reply