ಗಡಿಯಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಹೆಣೆದ ಆ ತಂತ್ರ ಯಾವುದು ಗೊತ್ತಾ?
ಶ್ರೀನಗರ: ಇತ್ತೀಚೆಗೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಕುತಂತ್ರ ಬುದ್ಧಿ ಬಿಡದೆ ಅಪ್ರಚೋದಿತ ದಾಳಿ ಮಾಡುತ್ತಿದ್ದು, ಅದಕ್ಕೆ ಪಾಠ ಕಲಿಸಲು ಭಾರತ ಮುಂದಾಗಿದೆ.
ಪಾಕಿಸ್ತಾನದ ದಾಳಿ ತಡೆಯಲು ಜಮ್ಮು-ಕಾಶ್ಮೀರದ ಗಡಿ ರೇಖೆ ಬಳಿ ಸುಮಾರು 14 ಸಾವಿರ ಬಂಕರ್ ಗಳನ್ನು ತಯಾರಿಸಲು ಭಾರತ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ 415.73 ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ.
ಈ 14 ಸಾವಿರ ಬಂಕರ್ ಗಳಲ್ಲಿ ರಾಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ 7,298 ಮತ್ತು ಸಾಂಬಾ, ಕುಥುವಾ ಹಾಗೂ ಜಮ್ಮುವಿನಲ್ಲಿ 7,162 ಯುದ್ಧ ಬಂಕರ್ ಗಳನ್ನು ನಿರ್ಮಿಸಲಾಗುತ್ತದೆ. ಇವುಗಳಲ್ಲಿ 13,029 ವೈಯಕ್ತಿಕ ಹಾಗೂ 1,431 ಸಮುದಾಯಿಕ ಬಂಕರ್ ಗಳು ಸೇರಿವೆ ಎಂದು ತಿಳಿದುಬಂದಿದೆ.
ಯಾವಾಗಲೂ ಭಾರತವನ್ನು ಸುಖಾಸುಮ್ಮನೆ ಕೆಣಕಿ ಮುಖಭಂಗ ಅನುಭವಿಸುವ ಪಾಕಿಸ್ತಾನ ಇತ್ತೀಚೆಗೆ ಚೀನಾದ ಸಹಾಯದಿಂದ ಪಂಜಾಬ್ ಮತ್ತು ರಾಜಸ್ಥಾನ ಗಡಿಯಲ್ಲಿ ಬಂಕರ್ ಗಳನ್ನು ನಿರ್ಮಿಸುತ್ತಿರುವ ಬೆನ್ನಲ್ಲೇ ಭಾರತವವೂ ಬಂಕರ್ ನಿರ್ಮಾಣಕ್ಕೆ ಮುಂದಾಗಿರುವುದು ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತ ಪಾಕಿಸ್ತಾನದೊಂದಿಗೆ 3,321 ಕಿಲೋಮೀಟರ್ ಗಡಿ ಹಂಚಿಕೊಂಡಿದೆ.
Leave A Reply