ಯೋಗಿ ಕೋಮುವಾದಿಯಾಗಿದ್ದರೆ ಬರೀ ಆಜಾನ್ ಮೈಕ್ ಗಳನ್ನಷ್ಟೇ ತೆರವುಗೊಳಿಸಬಹುದಿತ್ತಲ್ಲವೇ?
ಲಖನೌ: ಉತ್ತರ ಪ್ರದೇಶದಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದ ನೇರ ಹಾಗೂ ದಿಟ್ಟ ಕ್ರಮಗಳಿಗೆ ಮುಂದಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮತ್ತೊಂದು ದಿಟ್ಟ ಹಾಗೂ ಧರ್ಮ, ಪಕ್ಷಾತೀತ ನಿರ್ಧಾರ ಕೈಗೊಂಡಿದ್ದಾರೆ.
ಹೌದು, ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಿರುವ ಲೌಡ್ ಸ್ಪೀಕರ್ ಗಳನ್ನು ತೆರವುಗೊಳಿಸಬೇಕು ಎಂದು ಆದಿತ್ಯನಾಥರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜನವರಿ 20ರೊಳಗೆ ಎಲ್ಲ ಲೌಡ್ ಸ್ಪೀಕರ್ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಅಕ್ರಮ ಕಸಾಯಿಖಾನೆ ತೆರವು ಸೇರಿ ಹಲವು ನಿರ್ಧಾರ ಕೈಗೊಂಡಾಗ ಯೋದಿ ಆದಿತ್ಯನಾಥರು ಕೋಮುವಾದಿ ಎಂದು ಟೀಕಿಸಲಾಗಿತ್ತು. ಆದರೆ ಆದಿತ್ಯನಾಥರು ಪಕ್ಷ ಹಾಗೂ ಧರ್ಮಾತೀತವಾಗಿ ಯಾವುದೇ ಧಾರ್ಮಿಕ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಲೌಡ್ ಸ್ಪೀಕರ್ ಅಳವಡಿಸುವುದನ್ನು ನಿಷೇಧಿಸಿದ್ದಾರೆ ಹಾಗೂ ತೆರವುಗೊಳಿಸಲು ಸೂಚಿಸಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸಿ ಕಿರಿಕಿರಿ ಮಾಡುವುದು ಹಾಗೂ ಲೌಡ್ ಸ್ಪೀಕರ್ ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ 2017ರ ಡಿಸೆಂಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠ ಈ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತ್ತು. ವಕೀಲ ಎಂ.ಎಲ್.ಯಾದವ್ ಅವರು ಲೌಡ್ ಸ್ಪೀಕರ್ ತೆರವುಗೊಳಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈಗ ರಾಜ್ಯ ಸರ್ಕಾರದ ಆದೇಶದಂತೆ ದೇವಾಲಯ, ಮಸೀದಿ, ಗುರುದ್ವಾರ ಹಾಗೂ ಚರ್ಚ್ ಗಳಲ್ಲಿ ಅಳವಡಿಸಿದ ಲೌಡ್ ಸ್ಪೀಕರ್ ತೆರವಾಗಲಿದ್ದು, ಸಾರ್ವಜನಿಕರಿಗೆ ಆಗುವ ಕಿರಿಕಿರಿ ತಪ್ಪಲಿದೆ ಹಾಗೂ ಈ ನಿರ್ಧಾರ ಯೋಗಿ ಆದಿತ್ಯನಾಥರ ದಿಟ್ಟತನ ಪ್ರದರ್ಶಿಸುತ್ತದೆ.
Leave A Reply