ಆ ಮುಸ್ಲಿಂ ಯುವಕನ ಮಿಸ್ಡ್ ಕಾಲ್ ಹಿಂದೂ ಯುವತಿಯ ಬದುಕಿಗೆ ಕಂಟಕವಾಯಿತಲ್ಲ!
ದೆಹಲಿ: ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಪದೇಪದೆ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಇಷ್ಟು ದಿನ ಅತ್ಯಾಚಾರದ ರಾಜಧಾನಿ ಎಂದು ಖ್ಯಾತಿಯಾಗಿದ್ದ ದೆಹಲಿಯಲ್ಲೂ ಲವ್ ಜಿಹಾದ್ ಎನ್ನಲಾದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಹೌದು, ಮುಸ್ಲಿಂ ಯುವಕನನ್ನು ಪ್ರೀತಿಸಿದ ಯುವತಿಯೊಬ್ಬಳಿಗೆ ಆತ ಮುಸ್ಲಿಂ ಎಂದು ತುಂಬ ದಿನಗಳ ಬಳಿಕ ಗೊತ್ತಾಗಿದೆ. ಅಲ್ಲದೆ ಆಕೆಯನ್ನು ಅತ್ಯಾಚಾರ ಎಸಗಿದ್ದಾನೆ. ಯುವತಿಯ ಕೈ ಮೇಲಿದ್ದ “ಓಂ” ಹಚ್ಚೆಯನ್ನು ಆ್ಯಸಿಡ್ ಹಾಕಿ ಸುಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಹೊರವಲಯದ ಮಂಗೋಲ್ಪುರಿಯಲ್ಲಿ ವಾಸವಿರುವ ಯುವತಿ ಇತ್ತೀಚೆಗಷ್ಟೇ ಪದವಿ ಮುಗಿಸಿದ್ದಾಳೆ. ಯುವತಿಗೆ ಒಂದು ದಿನ ಮಿಸ್ಡ್ ಕಾಲ್ ಒಂದು ಬಂದಿದ್ದು, ವಾಪಸ್ ಕರೆ ಮಾಡಿದರೆ ರಾಂಗ್ ನಂಬರ್ ಎಂದಿದ್ದಾನೆ. ಬಳಿಕ ಆ ಮುಸ್ಲಿಂ ಯುವಕ ಯುವತಿಗೆ ಕರೆ, ಮೆಸೇಜ್ ಮಾಡಿದ್ದು ಸ್ನೇಹ ಬೆಳೆದಿದೆ.
ಮೊದಲಿಗೆ ಸೋನು ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡ ಮುಸ್ಲಿಂ ಯುವಕ ಯುವತಿಗೆ ಆತ್ಮೀಯನಾಗಿದ್ದಾನೆ. ದಿನಾಲೂ ಮಾತುಕತೆ ನಡೆದಿದ್ದು, ಪರಿಚಯ, ಸ್ನೇಹ ಪ್ರೀತಿಗೆ ತಿರುಗಿದೆ. ಆದರೆ ಆ ಯುವಕನ ಪ್ರೀತಿ ನಕಲಿ ಎಂದು ಗೊತ್ತಾಗಿದ್ದು, ಆತ ಮುಸ್ಲಿಂ ಎಂದು ತಿಳಿದಬಳಿಕವೇ.
ಯುವತಿಯನ್ನು ಅತ್ಯಚಾರ ಮಾಡಲಾಗಿದ್ದು, ಕೈಯ ಮೇಲಿದ್ದ ಓಂ ಅನ್ನು ಆ್ಯಸಿಡ್ ಸುರಿದು ಸುಟ್ಟಿದ್ದಾರೆ. ಪ್ರಸ್ತುತ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆ ಒಂದು ಮಿಸ್ಡ್ ಕಾಲ್ ನನ್ನ ಮಗಳ ಜೀವನವನ್ನೇ ಹಾಳು ಮಾಡಿತು ಎಂದು ಯುವತಿಯ ತಂದೆ ಆಕ್ರಂದನ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೇರಳ, ಮುಂಬೈ, ಕರ್ನಾಟಕ ಸೇರಿ ಹಲವೆಡೆ ಲವ್ ಜಿಹಾದ್ ಪ್ರಕರಣ ಸುದ್ದಿಯಾಗುತ್ತಿದ್ದು, ಹಿಂದೂ ಯುವತಿಯರು ಎಚ್ಚರದಿಂದಿರಬೇಕು.
Leave A Reply