ಮಹಿಳಾ ರಕ್ಷಕರಿಲ್ಲದೇ ಪ್ರಥಮ ಬಾರಿಗೆ 32 ಮಹಿಳೆಯರ ಹಜ್ ಯಾತ್ರೆ ಆರಂಭ
ದೆಹಲಿ: ಇತಿಹಾಸದಲ್ಲೇ ಪ್ರಥಮ ಬಾರಿಗೆ 32 ಮಹಿಳೆಯರು ರಕ್ಷಕರು ಮತ್ತು ಸಂಬಂಧಿಗಳಿಲ್ಲದೇ ಹಜ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಉತ್ತರ ಪ್ರದೇಶದ ಲಖನೌದ 12, ಕಾನ್ಪುರದ 12 ಮತ್ತು ಅಮೇಥಿ ಮತ್ತು ಗೊಂಡಾ ಜಿಲ್ಲೆಯ ಒಟ್ಟು 32 ಮುಸ್ಲಿಂ ಮಹಿಳೆಯರು ಮಹಿಳಾ ರಕ್ಷಕರಿಲ್ಲದೇ ಹಜ್ ಪ್ರಯಾಣ ಆರಂಭಿಸಿದ್ದಾರೆ.
ಇತ್ತೀಚೆಗೆ ಅಲ್ಪಸಂಖ್ಯಾತ ಸಚಿವಾಲಯ 45 ವಯಸ್ಸು ಮೀರಿದ ಮಹಿಳೆಯರು ಹಜ್ ಯಾತ್ರೆ ಪ್ರಯಾಣಿಸುವ ವೇಳೆ ಮಹಿಳೆಯರ ರಕ್ಷಕರಿಲ್ಲದೇ ಪ್ರಯಾಣಿಸುವ ಅವಕಾಶ ನೀಡಲಾಗಿದೆ.
2017 ಡಿಸೆಂಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಟ್ಟ ಮನ್ ಕಿ ಬಾತ್ ನಲ್ಲಿ ‘ ಸರ್ಕಾರ ಮುಸ್ಲಿಂ ಮಹಿಳೆಯರು ಹಜ್ ಯಾತ್ರೆ ವೇಳೆ ರಕ್ಷಕರಿಬೇಕು ಎಂಬ ನಿಯಮವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಈ ನಿರ್ಧಾರ ಕೈಗೊಂಡ ನಂತರ ಮುಸ್ಲಿಂ ಮಹಿಳೆಯರು ಏಕಾಂಗಿಯಾಗಿ ಹಜ್ ಯಾತ್ರೆಗೆ ಪ್ರಯಾಣಿಸಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಸುಮಾರು 1300 ಮುಸ್ಲಿಂ ಮಹಿಳೆಯರು ಏಕಾಂಗಿಯಾಗಿ ಹಜ್ ಯಾತ್ರೆ ಮಾಡಲು ದೇಶದ ನಾನಾ ಭಾಗಗಳಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ಮೋದಿ ಹೇಳಿದ್ದರು.
Leave A Reply