• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹೆತ್ತವಳ ಕರುಳಿನ ನೋವು ಕೋಮು ಪ್ರಚೋದನೆಯೇ ಸಿದ್ದರಾಮಯ್ಯನವರೇ?

ತೇಜಸ್ವಿ ಪ್ರತಾಪ್, ಮೈಸೂರು Posted On January 9, 2018


  • Share On Facebook
  • Tweet It

ವಾಗ್ಮಿ, ಸಂಸ್ಕೃತಿಯ ರಕ್ಷಣೆಯೊಂದಿಗೆ ಅಭಿವೃದ್ಧಿಯ ಸ್ಪಷ್ಟ ಕಲ್ಪನೆಯನ್ನು ಯುವಕರಲ್ಲಿ ಬಿತ್ತುತ್ತಾ, ಕಾರ್ಯರೂಪಕ್ಕೆ ತರುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದಲ್ಲಿ ಕೋಮು ದ್ವೇಷದಿಂದ ನಡೆಯುತ್ತಿರುವ ಹತ್ಯೆಗಳನ್ನು ನಿಯಂತ್ರಿಸಲು ವಿಫಲವಾದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ  ನಡೆಸಿದ, #ಹಡೆದವ್ವನ_ಶಾಪ ಪತ್ರ ಚಳವಳಿ ಕೋಮು ಭಾವನೆ ಕೆರಳಿಸುತ್ತದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಪೂರ್ವಾಗ್ರಹ ಪೀಡಿತ ಮಾತು ಇದು.

ಚಕ್ರವರ್ತಿಯವರ ಚಳವಳಿಗೆ ಸಾಲು ಸಾಲು ಪತ್ರಗಳು ಬಂದವು. ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಯುವಕರ ತಾಯಂದಿರು ತಮ್ಮ ಮನದ ದುಗುಡ, ಆತಂಕ ಮತ್ತು ಯಾರನ್ನು ನೆಮ್ಮದಿಯಿಂದ ಜೀವನ ನಡೆಸುವಂತ ವಾತಾವರಣ ನಿರ್ಮಿಸದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಮಾಜ ಸೇವೆ ಎಂದು ಮುಂದೆ ಬರುವ ತರುಣರ ಅಮ್ಮಂದಿರು ಹೀಗೆ ಸಾಲು ಸಾಲು ಹೆಣ ಬೀಳುತ್ತಿದ್ದರೆ ಸುಮ್ಮನಿದ್ದಾರೆಯೇ?. ತಮ್ಮ ಮನದಾಳವನ್ನು ಹೀಗಾದರೂ ನಮ್ಮನ್ನು ಆಳುವವನ ಆಂತರ್ಯವನ್ನು ತಟ್ಟಲಿ ಎಂದು ಭರ್ಜರಿ ಪತ್ರಗಳನ್ನು ಬರೆದಿದ್ದಾರೆ. ಆದರೆ ಆ ಪತ್ರಗಳಲ್ಲಿ ಹಡೆದವ್ವ ಏನು ಬರೆದಿದ್ದಾಳೆ, ಅವಳ ಆತಂಕ ಏನು ಇದೆ ಎಂಬುದನ್ನು  ಓದುವ ಔದಾರ್ಯವನ್ನಾದರೂ ಮಾನ್ಯ ಸಿದ್ದರಾಮಯ್ಯನವರು ತೋರದೆ ಕೋಮು ಭಾವನೆ ಕೆರಳಿಸುವ ಬರವಣಿಗೆ ಎನ್ನುತ್ತೀರಲ್ಲ ನಿಮಗೆಂತ ದುರ್ವಿದಿ ಬಂತು.

ರಾಜ್ಯದಲ್ಲಿ ಸಮಾಜ ಸೇವೆಗೆ ತುಡಿಯುವಂತ ಒಂದು ಯುವ ಸಮುದಾಯವನ್ನು ಜಾತಿ, ಧರ್ಮ, ಮತ, ಪಂಥಗಳಾಚೆ ಸಿದ್ಧಪಡಿಸಿದ ಚಕ್ರವರ್ತಿ ಅವರು ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ಹೇಳುವ ಮುನ್ನ ತಮ್ಮ ಆತ್ಮಕ್ಕೆ ವಂಚನೆ ಮಾಡಿಕೊಂಡಿದ್ದಾರೆ ಎಂದೆ ಅರ್ಥ.

ಚಕ್ರವರ್ತಿ ಸೂಲಿಬೆಲೆ ಪಾಳು ಬಿದ್ದ ಕಲ್ಯಾಣಿಗಳ ಸ್ವಚ್ಛತೆಗೆ, ಬೀದಿಯಲ್ಲಿ ಬಿದ್ದಿರುವ ದೇವರ ಫೋಟೋಗಳ ರಕ್ಷಣೆ, ಸ್ವಚ್ಛ ಭಾರತಕ್ಕೆ ಪ್ರೇರಣೆ, ದೇವಾಲಯಗಳ ಸ್ವಚ್ಛತೆ ಸೇರಿ ಹಲವು ಮಹತ್ತರ ಕಾರ್ಯಗಳಿಗೆ ಯುವಕರನ್ನು ಒಗ್ಗೂಡಿಸಿ, ಪ್ರೇರಣೆ ನೀಡುತ್ತಿದ್ದಾರೆ. ಅವರು ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದರೆ ಅವರ ಬಗ್ಗೆ ನಿಮಗೆ ಇರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಮಾತ್ರ. ಬರೀ ಹಿಂದೂತ್ವದ ಬಗ್ಗೆ ಮಾತಾಡುವ ಬಿಜೆಪಿ ನಾಯಕರ ವಿರುದ್ಧವೂ ಅವರು ಮಾತನಾಡಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ಹೊರ ಬನ್ನಿ.

ಸಿದ್ದರಾಮಯ್ಯನವರೇ ನಿಮಗೆ ಗೊತ್ತಿರಲಿ.. ಚಕ್ರವರ್ತಿ ಸೂಲಿಬೆಲೆ ಇದುವರೆಗೆ ಒಮ್ಮೆಯೂ ದುಷ್ಟ, ದುರುಳ, ಹಿಂದೂ ವಿರೋಧಿ ಸಿದ್ದರಾಮಯ್ಯ ಎಂದು ಹೇಳಿಲ್ಲ. ಅವರು ಹೇಳಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು. ರಾಜ್ಯದಲ್ಲಿ ಹಿಂದೂ ಮುಸ್ಲಿಮರು ಸೇರಿ ಯಾರಿಗೂ ರಕ್ಷಣೆ ಇಲ್ಲ ಎಂಬುದು. ಅದನ್ನು ಅರಿಯದ ಕೇವಲ ಪ್ರಬಲ ರಾಷ್ಟ್ರೀಯವಾದಿ ಎನ್ನುವ ಕಾರಣಕ್ಕೆ ಚಕ್ರವರ್ತಿಯವರ ವಿರುದ್ಧ ಮಾತಾಡುತ್ತೀರಿ ಎಂದರೇ ನಿಮ್ಮ ಹೆಸರಿನಲ್ಲಿರುವ ಸಿದ್ಧ ಮತ್ತು ರಾಮ ಇಬ್ಬರನ್ನು ವಂಚಿಸಿದಂತೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, 6 ಕೋಟಿ ಜನರ ಪ್ರತಿನಿಧಿಯಾಗಿ ಮಾತನಾಡಬೇಕಾದ ನೀವು ಸದಾ ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುವ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಗಲಭೆಗಳಿಗೆ ಪ್ರೇರಣೆ ನೀಡುವ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದೀರಿ. ಅದಕ್ಕೆ ಅಲ್ಲವೇ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಪಾತಾಳಕ್ಕಿಳಿದಿದ್ದು. ಪತ್ರ ಬರೆದಿರುವ ತಾಯಿಯಂದಿರ ನೋವು, ಆತಂಕವನ್ನು ಕೇಳಿಸಿಕೊಳ್ಳದೇ, ದುಗುಡವನ್ನು, ಆಗ್ರಹವನ್ನು ಅರ್ಥೈಸಿಕೊಳ್ಳದೇ ಚಳವಳಿ ಆರಂಭಿಸಿರುವ ಚಕ್ರವರ್ತಿಯವರು ಕೋಮುಗಲಭೆಗೆ ಪ್ರಚೋದನೆ ನೀಡುತ್ತಾರೆ ಎಂಬುದು ಸಿದ್ದರಾಮಯ್ಯನವರು ತಮ್ಮ ಆತ್ಮಕ್ಕೆ ಮಾಡಿಕೊಂಡಿರುವ ಮೋಸ.

ಅತ್ತ ದೀಪಕ್, ಇತ್ತ ಬಷೀರ್ ಎಂದು ಪ್ರತ್ಯೇಕಿಸಿ ಎಂದು ಸೂಲಿಬೆಲೆ ಅವರು ಮಾತನಾಡಿಲ್ಲ. ಎಲ್ಲ ತಾಯಂದಿರ ಪತ್ರದಲ್ಲಿ ದೀಪಕ್, ಬಷೀರ್ ಇಬ್ಬರ ಕೊಲೆಗಳನ್ನು ಖಂಡಿಸಿದ್ದಾರೆ. ಎಲ್ಲ ತಾಯಂದಿರು ಕೊಲೆಗಳನ್ನು ಖಂಡಿಸಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸಲಿ ಎಂದು ಆಗ್ರಹಿಸಿದ್ದಾರೆ. ಅದನ್ನು ಓದಿಕೊಳ್ಳದೇ..ತಾಯಂದಿರ ಆಗ್ರಹವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದೆ ಮಾತನಾಡುವ ನಿಮ್ಮ ದಾರ್ಷ್ಟ್ಯ ಮನಸ್ಥಿತಿಗೆ ನಮ್ಮ ಧಿಕ್ಕಾರವಿದೆ. ಡಿಕೆ ರವಿ, ಗಣಪತಿ, ಮಲ್ಲಿಕಾರ್ಜುನ ಬಂಡೆ ಸೇರಿ ಹಲವ ಕಣ್ಣೀರ ಶಾಪ ನಿಮ್ಮೆಲ್ಲರಿಗೂ ತಟ್ಟದೆ ಬಿಡುತ್ತದೆಯೇ… ಅದು ಕೋಮು ಭಾವನೆ ಕೆರಳಿಸುತ್ತದೆ ಎಂದರೆ ನೀವು ಭಾವನಾ ಶೂನ್ಯರು ಎಂಬುದು ಸಾಬೀತಾಯಿತು ಬಿಡಿ.

ಸೂಲಿಬೆಲೆ ಅವರು ಗಾಂಧಿ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಆಗಮಿಸಿದಾಗ ಅವರನ್ನೇಕೆ ಕರಿಸಿದ್ದೀರಿ ಎಂದು ಸಣ್ಣತನ ಮೆರೆದವರು ನೀವು. ಗೊತ್ತಿರಲಿ ಚಕ್ರವರ್ತಿ ಅವರ ರಾಷ್ಟ್ರವಾದದ ಚಿಂತನೆಗಳು ಹಲವು ಯುವಕರಿಗೆ ಮಾದರಿಯಾಗಿ ನಿಂತಿವೆ. ಸಿನೆಮಾ, ಸಾಮಾಜಿಕ ಜಾಲತಾಣ, ಯೂಟೂಬ್ ನಲ್ಲಿ ದಿನಗಳೆಯುತ್ತಿದ್ದ ಯುವಕರಿಗೆ ರಾಷ್ಟ್ರೀಯ ವಾದದ ಚಿಂತನೆ ಹಚ್ಚಿದವರು ಸೂಲಿಬೆಲೆ.

ಸಿದ್ದರಾಮಯ್ಯ ರಾಜ್ಯದಲ್ಲಿ ಮುಸ್ಲಿಂ ಧರ್ಮವೇ ವಿರೋಧಿಸುವ ಟಿಪ್ಪು ಜಯಂತಿ ಆಚರಿಸಿ ಸಮಾಜದಲ್ಲಿ ಬೆಂಕಿ ಹಚ್ಚಿದ್ದೀರಿ, ಬಸವಣ್ಣ ಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯ ಮಾಡಿದಕ್ಕೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಲಿಂಗಾಯತ, ವೀರಶೈವ ಎಂದು ಭೇದದ ಬೀಜ ಹುಟ್ಟಿಸಿ, ಜಗಳ ಹಚ್ಚಿಸಿದ್ದೀರಿ. ಇಂತಹ ಮನೆ ಮುರುಕ ಕೆಲಸಗಳನ್ನು ಮಾಡಿ, ಗಲಭೆಗೆ ಪರೋಕ್ಷವಾಗಿ ಕಾರಣರಾದವರು ಸಿದ್ದರಾಮಯ್ಯನವರೇ ನೀವು ಮತ್ತು ನಿಮ್ಮ ಸರ್ಕಾರ ಎಂಬ ಅರಿವಿರಲಿ.

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
ತೇಜಸ್ವಿ ಪ್ರತಾಪ್, ಮೈಸೂರು March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
ತೇಜಸ್ವಿ ಪ್ರತಾಪ್, ಮೈಸೂರು March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search