ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿವಿ ಸಂಶೋಧನಾ ವಿದ್ಯಾರ್ಥಿ ಇದೀಗ ಭಯೋತ್ಪಾದಕ
ಶ್ರೀನಗರ: ಕೇಂದ್ರ ಸರ್ಕಾರದ ನಿರಂತರ ಶ್ರಮ, ಸೈನ್ಯದ ಕಠಿಣ ನಿಯಮಗಳಿಂದ ಮೂಲವಾಹಿನಿಯತ್ತ ಕಾಶ್ಮೀರದ ಯುವಕರು ಬರುತ್ತಿರುವ ವೇಳೆಯೇ ಆಘಾತಕಾರಿ ಸುದ್ದಿಯೊಂದು ಬಂದಿದೆ. ಸಂಶೋಧನಾ ವಿದ್ಯಾರ್ಥಿಯೊಬ್ಬ ಉಗ್ರ ಸಂಘಟನೆಗೆ ಸೇರಿರುವ ಮಾಹಿತಿ ಹೊರ ಬಿದ್ದಿದೆ.
ಅಲಿಘರ್ ಮುಸ್ಲಿಂ ವಿಶ್ವಾವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಇದೀಗ ಭಯೋತ್ಪಾದಕರ ದಾಳಕೆ ಸಿಲುಕಿ, ದೇಶದ್ರೋಹಿಯಾಗಿ ಮಾರ್ಪಟ್ಟಿದ್ದಾನೆ. ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಮುಸ್ಲಿಂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಮನ್ನಾನ್ ಬಷೀರ್ ವನಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದಿನ್ ನ ಜತೆ ಕೈ ಜೋಡಿಸಿದ್ದಾನೆ.
26 ವರ್ಷದ ವನಿ ಉತ್ತರ ಕಾಶ್ಮೀರದ ಲೋಲಾಬ್ ಕಣಿವೆಯಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ. ನಂತರ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಚಿತ್ರದಲ್ಲಿ ವನಿ ಕೈಯಲ್ಲಿ ಎಕೆ 47 ಗನ್ ಹಿಡಿದುಕೊಂಡಿರುವುದು, ಆತ ಭಯೋತ್ಪಾದಕ ಜತೆ ಕೈ ಜೋಡಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭೂವಿಜ್ಞಾನದ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದ. 2016ರಲ್ಲಿ ಭೋಪಾಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪಡೆದಿದ್ದು, ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು ಸಾಮಾಜಿಕ ಸೇವೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ. ಆದರೆ ಇದೀಗ ಭಯೋತ್ಪಾದಕರ ಮಾತಿಗೆ ಮರಳಾಗಿ ಉಗ್ರರೊಂದಿಗೆ ಕೈ ಜೋಡಿಸಿದ್ದಾನೆ.
ಉತ್ತರ ಪ್ರದೇಶದ ಮುಸ್ಲಿಂ ವಿವಿಯಿಂದ ಹೊರಬಂದವನೆ ಕೆಲ ದಿನಗಳ ವರೆಗೆ ದೆಹಲಿಯಲ್ಲಿದ್ದ, ನಂತರ ಕಾಶ್ಮೀರದ ಕುಪ್ವಾರದಲ್ಲಿರುವ ಲೋಲಾಬ್ ಕಣಿವೆಯಲ್ಲಿರುವ ಕುಟುಂಬದವರೊಂದಿಗೆ ಇದ್ದವನು ಇದಕ್ಕಿದಂತೆ ಮಾಯವಾಗಿದ್ದಾನೆ. ಇದರಿಂದ ಭೀತರಾದ ಕುಟುಂಬಸ್ಥರು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಕೆಲ ದಿನಗಳಲ್ಲೇ ವನಿ ಕೈಯಲ್ಲಿ ಗನ್ ಹಿಡಿದು, ಅಲ್ಲಾ ಒಬ್ಬನೇ ಎಂಬಂತೆ ಬೆರಳು ತೋರಿಸಿರುವ ಚಿತ್ರ ಬಿಡುಗಡೆಯಾಗಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಅಲ್ಲದೇ ದೇಶದ ವಿರುದ್ಧ ಮತ್ತೊಬ್ಬ ಭಯೋತ್ಪಾದಕನ ಸೃಷ್ಟಿಯಾಗಿರುವ ಭೀತಿ ಎದುರಾಗಿದೆ.
Leave A Reply