ಭಾರತದ ಪ್ರಭಾವಕ್ಕೆ ಮಣಿದ ಚೀನಾ, ಅರುಣಾಚಲಪ್ರದೇಶದಲ್ಲಿ ನಿರ್ಮಿಸುತ್ತಿದ್ದ ರಸ್ತೆ ಕಾಮಗಾರಿ ಸ್ಥಗಿತ
ದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುತ್ತಲೇ ಚೀನಾ ಆರಂಭದಲ್ಲಿ ಉಪಟಳ ಮಾಡಿದರೂ ಈಗ ಪಾಠ ಕಲಿತಂತೆ ಕಾಣುತ್ತಿದೆ.
ಹೌದು, ಪ್ರಧಾನಿ ಮೋದಿ ಅವರು ಚೀನಾಗೆ ಹೊರಟುನಿಲ್ಲುತ್ತಲೇ ಡೋಕ್ಲಾಂನಲ್ಲಿ ನಿಯೋಜಿಸಿದ್ದ ಸೇನೆ ಹಿಂಪಡೆಯಿತು ಚೀನಾ. ಬಳಿಕ ಭಾರತ ಚೀನಾದ ಒಆರ್ ಒಬಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದರೂ ತೆಪ್ಪಗಿತ್ತು. ಪಾಕಿಸ್ತಾನವನ್ನು ಭಾರತ ಭಯೋತ್ಪಾದಕ ರಾಷ್ಟ್ರ ಎಂದು ಬಿಂಬಿಸಿದಾಗಲೂ ಸೊಲ್ಲೆತ್ತಿತು. ಆದರೆ ಭಾರತದ ಆಸೆಗೆ ಅಮೆರಿಕವೇ ಬೆಂಬಲ ನೀಡಿದ ಬಳಿಕ ಚೀನಾ ಮತ್ತೆ ಮಗುಮ್ಮಾಯಿತು.
ಈಗ ಭಾರತಕ್ಕೆ ಮತ್ತೊಂದು ಮುನ್ನಡೆ ಸಿಕ್ಕಿದ್ದು, ಭಾರತದ ಅರುಣಾಚಲ ಪ್ರದೇಶದ ಗಡಿಯಲ್ಲಿ ನಿರ್ಮಿಸುತ್ತಿದ್ದ ಕಾಮಗಾರಿಯನ್ನು ನಿಲ್ಲಿಸಲು ಚೀನಾ ಕೊನೆಗೂ ಒಪ್ಪಿಕೊಂಡಿದೆ.
ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಚೀನಾ ಸೈನ್ಯದ ಮುಖ್ಯಸ್ಥರೊಂದಿಗೆ ನಡೆಸಿದ ಸಭೆ ಫಲಕಾರಿಯಾಗಿದ್ದು, ಭಾರತದ ಪ್ರಭಾವ ಹಾಗೂ ಮನವಿ ಮೇರೆಗೆ ಚೀನಾ ಅರುಣಾಚಲ ಪ್ರದೇಶದ ಭಿಸಿಂಗ್ ಪ್ರದೇಶದಲ್ಲಿ ಚೀನಾ ಕೈಗೊಂಡಿದ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲು ಒಪ್ಪಿಕೊಂಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮಾಹಿತಿ ನೀಡಿದ್ದಾರೆ.
ಡಿ.26ರಂದು ಭಾರತದ ಗಡಿಯಲ್ಲಿ ಸುಮಾರು 2 ಕಿಲೋ ಮೀಟರ್ ದೂರದ ರಸ್ತೆ ಕಾಮಗಾರಿಯನ್ನು ಚೀನಾ ಆರಂಭಿಸಿತ್ತು.
Leave A Reply