ಗಣರಾಜ್ಯೋತ್ಸವದಂದು ಕೇರಳದಲ್ಲಿ ಭಾಗವತ್ ರಿಂದ ರಾಷ್ಟ್ರಧ್ವಜಾರೋಹಣ
ದೆಹಲಿ: ಆಗಸ್ಟ್ 15ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಕೇರಳದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದಕ್ಕೆ ಕೊಳಕು ರಾಜಕಾರಣ ಮಾಡಿ, ಜಿಲ್ಲಾಡಳಿತದಿಂದ ಅಡ್ಡಿಪಡಿಸಿ, ಸಿಪಿಐ(ಎಂ) ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಶಾಲೆ ವಿರುದ್ಧ ಕ್ರಮ ಕೈಗೊಳ್ಳಲು ಇತ್ತೀಚೆಗೆ ಸಿಎಂ ಪಿಣರಾಯಿ ವಿಜಯನ್ ಆದೇಶ ಹೊರಡಿಸುವ ಮೂಲಕ ದ್ವೇಷ ಸಾಧಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಂದು ಕೇರಳದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕೇರಳದ ಪಾಲಕ್ಕಾಡಿನ ವ್ಯಾಸವಿದ್ಯಾಪೀಠದಲ್ಲಿ ಬೆಳಗ್ಗೆ 9 ಗಂಟೆಗೆ ಭಾಗವತ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಜನವರಿ 26ರಿಂದ ಪಾಲಕ್ಕಾಡಿನ ಶಾಲೆಯ ಸಮೀಪದಲ್ಲೇ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರು ದಿನಗಳ ಕಾರ್ಯಗಾರದಲ್ಲಿ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯವಾದಿ ಸಂಘಟನೆಯಾಗಿದ್ದು, ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ಮಾಡುವುದು ನಮ್ಮ ಸಂಸ್ಕೃತಿಯ ಭಾಗ. ಆದರೆ ಕಳೆದ ವರ್ಷ ಆಗಸ್ಟ್ 15ರಂದು ಭಾಗವತ್ ಅವರಿಗೆ ರಾಷ್ಟ್ರ ಧ್ವಜಾರೋಹಣ ಮಾಡಲು ಸಿಪಿಐ(ಎಂ) ಕುಮ್ಮಕ್ಕಿನಿಂದ ಜಿಲ್ಲಾಡಳಿತ ಅಡ್ಡಿಪಡಿಸಿದ್ದು, ದುರದೃಷ್ಟಕರು ಎಂದು ಸಂಘಟಕರು ತಿಳಿಸಿದ್ದಾರೆ.
Leave A Reply