ಮದರಸಾಗಳು ಉಗ್ರರ ಉತ್ಪಾದನಾ ಕೇಂದ್ರಗಳು, ಮುಸ್ಲಿಂ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ: ರಿಜ್ವಿ
ದೆಹಲಿ: ಮದರಸಾಗಳು ಶಾಂತಿದೂತ ಅಲ್ಲಾನ ತತ್ವಗಳನ್ನು ಮಕ್ಕಳಲ್ಲಿ ಬಿತ್ತುತ್ತಿದ್ದು, ಇಸ್ಲಾಂ ಧರ್ಮದ ಬೋಧನೆಗಳ ಮೂಲಕ ಜಾಗೃತಿ ಮೂಡಿಸುತ್ತಿವೆ ಎಂದು ಬೊಬ್ಬಿರಿಯುತ್ತಿದ್ದವರು, ಮುಸ್ಲಿಂ ಸಂಘಟನೆಯೊಂದರ ಮುಖ್ಯಸ್ಥನ ಈ ಮಾತುಗಳು ಕೇಳಲೇಬೇಕು. ‘ಮದರಸಾಗಳಲ್ಲಿ ಅಲ್ಲಾನ ತತ್ತ್ವಗಳನ್ನು ಬೋಧಿಸುವುದಷ್ಟೇ ಅಲ್ಲ ಭಯೋತ್ಪಾದನೆಯ ಕೂಪಕ್ಕೆ ತಳ್ಳುವ ಧರ್ಮಾಂಧ ಶಿಕ್ಷಣ ದೊರೆಯುತ್ತಿದೆ. ಅದನ್ನು ತಡೆಗಟ್ಟಿ’ ಎಂದು ಮುಸ್ಲಿಮರ ಪ್ರಮುಖ ಸಂಘಟನೆ ಶಿಯಾ ಮುಸ್ಲಿಂ ವಕ್ಫ್ ಬೋರ್ಡ್ ಅಧ್ಯಕ್ಷ ಹೇಳಿದ್ದಾರೆ.
ಮುಸ್ಲಿಂ ಮಕ್ಕಳಿಗೆ ಧರ್ಮ ಬೋಧನೆ ಮಾಡುತ್ತಿರುವ ಮದರಸಾಗಳು ಭಯೋತ್ಪಾದಕರ ಉತ್ಪಾದನೆ ಕೇಂದ್ರಗಳಾಗಿವೆ. ಅಲ್ಲಿ ಎಂಜಿನಿಯರ್ ಗಳು, ವೈದ್ಯರು ಉತ್ಪಾದನೆಯಾಗುತ್ತಿಲ್ಲ. ಮದರಸಾಗಳು ಮುಸ್ಲಿಂ ಯುವಕರನ್ನು ಮುಖ್ಯವಾಹಿನಿಯ ಶಿಕ್ಷಣದಿಂದ ವಂಚಿಸುತ್ತಿದ್ದು, ಅವರನ್ನು ಕೂಡಲೇ ಮುಖ್ಯವಾಹಿನಿಗೆ ತರಬೇಕು ಎಂದು ಮುಸ್ಲಿಮರ ಪ್ರಮುಖ ಸಂಘಟನೆಯಾದ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಎಷ್ಟು ಮದರಸಾಗಳು ವೈದ್ಯರು, ಎಂಜಿನಿಯರ್, ಐಎಎಸ್ ಹುದ್ದೆ ಪಡೆಯುವ ಶಿಕ್ಷಣ ನೀಡುತ್ತಿವೆ? ಎಂದು ಪ್ರಶ್ನಿಸಿರುವ ರಿಜ್ವಿ ಕೆಲವು ಮದರಸಾಗಳು ಭಯೋತ್ಪಾದಕರನ್ನು ಉತ್ಪಾದಿಸುತ್ತಿವೆ ಎಂಬ ಕಟು ವಾಸ್ತವನ್ನು ಬಿಚ್ಚಿಟ್ಟಿದ್ದಾರೆ.
ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಇಲಾಖೆ ಅಡಿಯಲ್ಲೇ ನಡೆಸಬೇಕು, ಅಲ್ಲದೇ ಮದರಸಾಗಳಲ್ಲೂ ಸಿಬಿಎಸ್ಇ, ಐಸಿಎಸ್ಇ ಅಡಿಯಲ್ಲಿ ಶಿಕ್ಷಣ ನೀಡುವಂತೆ ಮಾಡಬೇಕು ಮತ್ತು ಮುಸ್ಲಿಮಮೇತರ ವಿದ್ಯಾರ್ಥಿಗಳಿಗೂ ಅಲ್ಲಿ ಶಿಕ್ಷಣ ನೀಡುವ ಅವಕಾಶ ನೀಡಬೇಕು ಮತ್ತು ಧಾರ್ಮಿಕ ಶಿಕ್ಷಣವನ್ನು ಐಚ್ಚಿಕ ವಿಷಯವಾಗಿ ಬೋಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಯೋತ್ಪಾದಕ ಸಂಘಟನೆಗಳಿಗೆ ಹಲವು ಮದರಸಾಗಳು ಸಹಕಾರ ನೀಡುತ್ತಿವೆ. ಆದ್ದರಿಂದ ಮದರಸಾಗಳ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ರಜ್ವಿ ಪತ್ರದ ಕುರಿತು ಪ್ರತಿಕ್ರಿಯಿಸಿರುವ ‘ಎಐಎಮ್ಇಐಎಮ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಶಿಯಾ ಬೋರ್ಡ್ ಅಧ್ಯಕ್ಷ ಒಬ್ಬ ಅವಕಾಶವಾದಿ. ರಿಜ್ವಿ ಆರ್ ಎಸ್ ಎಸ್ ಗೆ ತಮ್ಮನ್ನು ಮಾರಿಕೊಂಡಿದ್ದಾರೆ. ಅವರ ಬಳಿ ದಾಖಲೆ ಇದ್ದರೇ ಕೇಂದ್ರ ಗೃಹ ಸಚಿವರಿಗೆ ತಿಳಿಸಲಿ ಎಂದು ಮನವಿ ಮಾಡಿದ್ದಾರೆ.
Leave A Reply