ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕನಸಿಗೆ ಇಂಬು, ಲಕ್ಷ ಗ್ರಾಪಂಗಳಿಗೆ ಇಂಟರ್ನೆಟ್!
ದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರುತ್ತಲೇ ಸ್ವಚ್ಛ ಭಾರತದ ಜತೆಗೆ ಡಿಜಿಟಲ್ ಇಂಡಿಯಾ ಯೋಜನೆ ಜಾರಿಗೊಳಿಸಿತ್ತು. ಆರಂಭದಲ್ಲಿ ಇದರಿಂದ ಜನರಿಗೆ ಏನು ಪ್ರಯೋಜನ ಎಂಬ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆದರೆ ಆ ಟೀಕೆಗಳಿಗ ಮೌನ ತಾಳುವ ಸಮಯ ಬಂದೊದಗಿದೆ.
ಹೌದು, ಕೇಂದ್ರ ಸರ್ಕಾರ ಭಾರತ್ ನೆಟ್ ಪ್ರೋಗ್ರಾಂ ಯೋಜನೆ ಸಾಫಲ್ಯ ಸಾಧಿಸಿದ್ದು, ಇದುವರೆಗೆ ದೇಶದ ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಲಾಗಿದೆ.
ಈ ಕುರಿತು ಕೇಂದ್ರ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಮಾಹಿತಿ ನೀಡಿದ್ದು, 2017ರ ಡಿಸೆಂಬರ್ 28ವರೆಗೆ ದೇಶಾದ್ಯಂತ 1,01,370 ಗ್ರಾಮ ಪಂಚಾಯಿತಿಗಳಿಗೆ ಜಿಪಿಎಸ್ ಮೂಲಕ ಅಂತರ್ಜಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತವಾಗಿ ಒಂದು ಲಕ್ಷ ಗ್ರಾಪಂಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸಲಾಗಿದ್ದು, ಇದು ಮೊದಲು 70 ಸಾವಿರ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ 2018ರ ಡಿಸೆಂಬರ್ ವೇಳೆಗೆ ಸುಮಾರು 1.5 ಲಕ್ಷ ಗ್ರಾಪಂಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸುವುದರಿಂದ ಕಡತಗಳ ಗಣಕಯಂತ್ರೀಕರಣ, ಸೌಲಭ್ಯಗಳ ಸಮರ್ಪಕ ವಿತರಣೆ ಮಾಹಿತಿ ಸಂಗ್ರಹ, ಪಾರದರ್ಶಕತೆ, ಆಧಾರ್ ಜೋಡಣೆ, ಆನ್ ಲೈನ್ ವ್ಯವಹಾರ ಸೇರಿ ಹಲವು ಉಪಯೋಗಗಳಾಗಲಿದೆ. ಅಲ್ಲದೆ ಇದು ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾಗಿ ಕೆಲಸ ಮಾಡುವುದರಿಂದ ಗ್ರಾಮೀಣ ಜನರೂ ಅಂತರ್ಜಾಲ ಸಾಕ್ಷರರಾಗಲು ಅನುಕೂಲ.
Leave A Reply