ಮತ್ತೊಮ್ಮೆ ಪಾಕಿಸ್ತಾನದ ನಿಜ ಬಣ್ಣ ಬಯಲು, ಉರ್ದು ಪತ್ರಿಕೆ ಕ್ಯಾಲೆಂಡರ್ ನಲ್ಲಿ ಸಯೀದ್ ಫೋಟೋ
ಇಸ್ಲಾಮಾಬಾದ್: ಪಾಕಿಸ್ತಾನವನ್ನು ನಾವು ಎಷ್ಟೇ ವಿಶ್ವಾಸಕ್ಕೆ ತೆಗೆದುಕೊಂಡರು, ಅರೆ ಪಾಕಿಸ್ತಾನವೂ ಉಗ್ರರ ವಿರುದ್ಧ, ಭಯೋತ್ಪಾದನೆ ವಿರುದ್ಧ ಇದೆ ಎಂದು ಹಲವು ಕಾರಣಗಳಿಂದ ಭಾವಿಸಿದರೂ, ಆ ರಾಷ್ಟ್ರ ಮಾತ್ರ ತಾನು ಉಗ್ರರ ಪರ ನಿಲುವು ಹೊಂದಿದ್ದೇನೆ ಎಂಬುದನ್ನು ಜಗಜ್ಜಾಹೀರು ಮಾಡದೆ ಬಿಡುವುದಿಲ್ಲ.
ಹೌದು, ಈ ಮಾತು ಈಗ ಮತ್ತೊಮ್ಮೆ ಸಾಬೀತಾಗಿದೆ. ಇಷ್ಟು ದಿನ ಪಾಕಿಸ್ತಾನ ಸರ್ಕಾರ ಭಯೋತ್ಪಾದಕರಿಗೆ ಬೆಂಬಲ, ಪೋಷಣೆ ನೀಡಿದರೆ, ಈಗ ಪಾಕಿಸ್ತಾನಿ ಮಾಧ್ಯಮಗಳು ಸಹ ಉಗ್ರರ ಪರ ನಿಲುವು ಹೊಂದಿರುವುದು ಸಾಬೀತಾಗಿದೆ.
ಪಾಕಿಸ್ತಾನದ ಉರ್ದು ಪತ್ರಿಕೆ “ಖಬ್ರೇನ್” ಎಂಬ ಉರ್ದು ಪತ್ರಿಕೆ 2018ರ ಸಾಲಿನ ಕ್ಯಾಲೆಂಡರ್ ಪ್ರಕಟಿಸಿದ್ದು, ಕ್ಯಾಲೆಂಡರ್ ಗಾಗಿ ಮುಂಬೈ ದಾಳಿಯ ರೂವಾರಿ, ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಫೋಟೋ ಬಳಸುವ ಮೂಲಕ, ತಾನು ಭಯೋತ್ಪಾದಕರ ಪರ ಎಂಬುದನ್ನು ಪತ್ರಿಕೆ ಸಾರಿಕೊಂಡಿದೆ.
ಹೀಗೆ, ಜಾಗತಿಕ ಉಗ್ರನೊಬ್ಬನ ಫೋಟೋವನ್ನು ಪತ್ರಿಕೆಯ ಕ್ಯಾಲೆಂಡರ್ ಕವರ್ ಫೋಟೋ ಬಳಿಸಿದರೂ ಪಾಕಿಸ್ತಾನ ಮಾತ್ರ ಪತ್ರಿಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಇತ್ತೀಚೆಗಷ್ಟೇ, ಹಫೀಜ್ ಸಯೀದ್ ಸೇರಿ ಪಾಕಿಸ್ತಾನದ 72 ಉಗ್ರ ಸಂಘಟನೆಗಳಿಗೆ ಯಾರೂ ದೇಣಿಗೆ ನೀಡುವಂತಿಲ್ಲ ಎಂದು ಪಾಕಿಸ್ತಾನ ಆದೇಶಿಸಿದರೂ, ಪರೋಕ್ಷವಾಗಿ ಇಂಥ ಸಡಿಲಿಕೆ, ಉಗ್ರರಿಗೆ ಬೆಂಬಲ ನೀಡುವ ಮೂಲಕ ತಾನು ಎಂದಿಗೂ ಉಗ್ರರ ಪರವೇ ಎಂಬುದನ್ನು ಸ್ಪಷ್ಟಪಡಿಸಿದೆ.
Leave A Reply