ಭಾರತ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ತತ್ವದಡಿಯಲ್ಲಿ ಜಾಗತಿಕ ನಾಯಕನಾಗುತ್ತಿದೆ ಎಂದು ಹೇಳಿದವರಾರು ಗೊತ್ತೆ?
ದೆಹಲಿ: ದೇಶದ ಜನರ ಟೀಕೆ, ರಾಹುಲ್ ಗಾಂಧಿಯವರ ಬೇಕಾಬಿಟ್ಟಿ ಹೇಳಿಕೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ದೊರೆತಿದೆ.
ವರ್ಲ್ಡ್ ಎಕನಾಮಿಕ್ ಫೋರಂನ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲೌಸ್ ಶ್ಚ್ವಾಬ್ ಅವರೇ ಈ ಮಾತನ್ನು ಹೇಳಿದ್ದು, ಪ್ರಧಾನಿ ಮೋದಿ ಅವರು ಜಾರಿಗೆ ತಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಯೋಜನೆಯಿಂದ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫೋರಂನ ವೆಬ್ ಸೈಟ್ ನಲ್ಲಿ ಉಲ್ಲೇಖಿಸಿರುವ ಅವರು, ಭಾರತ ಇತ್ತೀಚೆಗೆ ಭಾರಿ ಪ್ರಮಾಣದ ಸುಧಾರಣೆ ಹೊಂದುತ್ತಿದೆ. ಹಲವು ಯೋಜನೆಗಳು ದೇಶದ ಗತಿ ಬದಲಿಸುತ್ತವೆ. ಅವುಗಳಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಯೋಜನೆ ಸಹ ಒಂದು ಎಂದು ತಿಳಿಸಿದ್ದಾರೆ.
ಈ ಯೋಜನೆಗಳಿಂದ ಭಾರತ ಸಮೃದ್ಧವಾಗಿ ಅಭಿವೃದ್ಧಿ ಹೊಂದುವ ಜತೆಗೆ ಯಾವುದೇ ಗಂಡಾಂತರ ಹಾಗೂ ಕಠಿಣ ಪರಿಸ್ಥಿತಿಯನ್ನು ಸಹ ಎದುರಿಸುವ ಛಾತಿ ಹೊಂದುತ್ತದೆ ಎಂದು ಶ್ಲಾಘಿಸಿದ್ದಾರೆ.
ಜನವರಿ 23-26ರವರೆಗೆ ಸ್ವಿಡ್ಜರ್ ಲೆಂಡ್ ನಲ್ಲಿ ನಡೆಯುವ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ ಬರೋಬ್ಬರಿ 2 ದಶಕಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪಾಲ್ಗೊಳ್ಳುವ ದೃಷ್ಟಿಯಿಂದ ಫೋರಂ ಅಧ್ಯಕ್ಷರ ಮಾತು ಭಾರತಕ್ಕೆ ಬಲ ಬಂದಂತಿದೆ.
Leave A Reply