ಕಾಶ್ಮೀರದ ಸ್ವಾತಂತ್ರ್ಯ ಭಯಸುವವರೊಮ್ಮೆ ಕೇಳಲೇ ಬೇಕು ಮುಫ್ತಿಯ ಈ ಮಾತುಗಳನ್ನು
ಜಮ್ಮು & ಕಾಶ್ಮೀರ: ಕಣಿವೆ ರಾಜ್ಯದಲ್ಲಿ ಧರ್ಮದ ಹೆಸರಲ್ಲಿ ನಮಗೂ ಸ್ವಾತಂತ್ರ್ಯ ಬೇಕು, ನಾವು ಪಾಕಿಸ್ತಾನಕ್ಕೆ ಸೇರುತ್ತೇವೆ ಎಂದು ಬೊಬ್ಬೆಹೊಡೆಯುವ ಪ್ರತ್ಯೇಕವಾದಿಗಳಿಗೆ, ಧರ್ಮಾಂಧ ಜಿಹಾದಿಗಳ ಆಕರ್ಷಣೆಗೆ ಬಲಿಯಾಗುವ ಯುವಕರಿಗೆ, ಕಾಶ್ಮೀರ ಅಜಾದಿಯಾಗಬೇಕು ಎಂದು ಜೆಎನ್ ಯು ನಲ್ಲಿ ಗೀಳಿಡುವ ಕುನ್ನಿಗಳು ಕಾಶ್ಮೀರದ ಮುಖ್ಯಮಂತ್ರಿ ಮಹೆಬೂಬಾ ಮುಫ್ತಿ ಹೇಳುವ ಈ ಮಾತುಗಳನ್ನು ಕೇಳಲೇಬೇಕು..
ಕಾಶ್ಮೀರಕ್ಕೆ ಬೇಕಾದ್ದು ನೀಡುವುದು ಭಾರತ ಮಾತ್ರ
ಭಾರತದ ಅವಿಭಾಜ್ಯ ಅಂಗವಾದ ಕಾಶ್ಮೀರಕ್ಕೆ ಬೇಕಾದ ಸಕಲ ಸೌಕರ್ಯ, ರಕ್ಷಣೆ ನೀಡುವ ತಾಕತ್ತು ಇರುವುದು ಭಾರತಕ್ಕೆ ಮಾತ್ರ ಹೀಗೆಂದು ಹೇಳಿದವರು ಕಾಶ್ಮೀರದ ಮಹೆಬೂಬಾ ಮುಫ್ತಿ. ನಾವು ಕಾಶ್ಮೀರದ ಸಂವಿಧಾನವನ್ನು ನಂಬದಿದ್ದರೇ, ಭಾರತದ ಸವಿಂಧಾನದ ಮೇಲೆ ವಿಶ್ವಾಸವಿಡದಿದ್ದರೇ, ನಮಗೆ ಎಲ್ಲಿಂದ ಏನು ದೊರೆಯುತ್ತದೆ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕು ಎಂದು ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಇದರ ಜತೆಗೆ ವಿಧಾನಸಭೆಯಲ್ಲಿ ಮುಫ್ತಿ ಭಾರತ ಸರ್ಕಾರದಿಂದ ಕಾಶ್ಮೀರಕ್ಕೆ ಏನೇನು ದೊರೆತಿದೆ ಎಂಬ ದಾಖಲೆಗಳನ್ನು ಇಡುತ್ತಾ, ಬೇರೆ ಯಾವುದೇ ದೇಶ ನಮಗೆ ಏನನ್ನು ನೀಡಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಇತ್ತೀಚೆಗೆ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನಕ್ಕೆ ಮನವಿ ಮಾಡಿದ್ದು, ಜಮ್ಮು ಕಾಶ್ಮೀರದ ಜನರ ನೆಮ್ಮದಿ ಕಾಪಾಡುವಂತೆ ಮನಿವ ಮಾಡಿದ್ದರು. ಅಲ್ಲದೇ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ಪಾಕಿಸ್ತಾನವೂ ಕೂಡ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಬಾರದು, ಕಾಶ್ಮೀರದ ಜನರ ಮತ್ತು ಸೈನಿಕರ ಪ್ರಾಣವೂ ನಮಗೆ ಮುಖ್ಯ. ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Leave A Reply