ಬ್ರಿಟನ್ ಪ್ರಧಾನಿ ‘ಮೆ’ ತಂಡದಲ್ಲಿ ಸ್ಥಾನ ಪಡೆದ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ
ಲಂಡನ್: ಬ್ರಿಟಿಷ್ ಪ್ರಧಾನಿ ತೆರೆಸಾ ಮೆ ಪ್ರಮುಖ ತಂಡದಲ್ಲಿ ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಸ್ಥಾನ ಪಡೆಯುವ ಮೂಲಕ, ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ತೆರೆಸಾ ಮೆ ಸರ್ಕಾರದ ಪ್ರಮುಖ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
36 ವರ್ಷದ ರಿಷಿ ಅವರು ಬ್ರಿಟಿಷ್ ಸರ್ಕಾರದ ಗೃಹ, ಸ್ಥಳೀಯ ಸಮುದಾಯಗಳ ಮತ್ತು ಸ್ಥಳೀಯ ಸರ್ಕಾರಗಳ ಸಚಿವಾಲಯದ ರಾಜ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಗುರುವಾರ ರಾತ್ರಿ ಟ್ವೀಟ್ ಮಾಡಿರುವ ತೆರೆಸಾ ಮೆ ‘ಸಂಸದ ರಿಷಿ ಗೃಹ, ಸ್ಥಳೀಯ ಸಮುದಾಯಗಳ ಮತ್ತು ಸ್ಥಳೀಯ ಸರ್ಕಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ ಎಂಬ ಮಾಹಿತಿ ನೀಡಿದೆ.
ರಿಷಿ 2015 ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಯಾರ್ಕಶೀರ್ ಪ್ರದೇಶದ ರಿಚ್ ಮಂಡ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಆಕ್ಸಫರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, 2014ರಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ. ಅಲ್ಲದೇ ಲಂಡನ್ ಮೂಲದ ಜಾಗತಿಕ ಹೂಡಿಕೆ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ಬ್ರಿಟನ್ ನಲ್ಲಿ ಸಣ್ಣ ಉದ್ದಿಮೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
Leave A Reply