ಉತ್ತರಾಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಪಾಠ
ಡೆಹರಾಡೂನ್: ಉತ್ತರ ಪ್ರದೇಶದ ಮದರಸಾಗಳಲ್ಲಿ ಸರ್ಕಾರದ ಪಠ್ಯ ಅಳವಡಿಸುವ ಕುರಿತು ಚಿಂತನೆ ನಡೆದಿರುವ ಬೆನ್ನಲ್ಲೇ ಉತ್ತರಾಖಂಡದ ಎಲ್ಲ ರಾಜ್ಯಗಳ ಮದರಸಾಗಳ ಪಠ್ಯದಲ್ಲಿ ಸಂಸ್ಕೃತ ಮತ್ತು ಕಂಪ್ಯೂಟರ್ ವಿಜ್ಞಾನ ಪಠ್ಯ ಸೇರಿಸಲು ಸರ್ಕಾರ ನಿರ್ಧರಿಸಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವಂತೆ ಉತ್ತರಾಖಂಡ ಶಿಕ್ಷಣ ನಿರ್ದೇಶಕ ಮತ್ತು ತರಬೇತಿ ಸಮಿತಿ ನಿರ್ದೇಶಕಿ ಪುಷ್ಪಾ ಜೋಷಿ ನೇತೃತ್ವದ ಉತ್ತರಾಖಂಡ್ ಮದರಸಾ ಎಜುಕೇಶನ್ ಬೋರ್ಡ್ 6 ಸಮಿತಿ ಸದಸ್ಯರ ಸಮತಿ ತೀರ್ಮಾನಿಸಿದೆ.
ರಾಜ್ಯದಲ್ಲಿರುವ ಎಲ್ಲ ಮದರಸಾಗಳಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಉತ್ತರಾಖಂಡ ಮದರಸಾ ವೆಲ್ ಫೇರ್ ಸೊಸೈಟಿ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ರಾಜ್ಯದಲ್ಲಿರುವ 297 ನೋಂದಾಯಿತ ಮದರಸಾಗಳಲ್ಲಿ ವಿಜ್ಞಾನ, ಆಯುಷ್, ಗಣಿತ ಹಾಗೂ ಸಾಮಾಜಿಕ ವಿಜ್ಞಾನ ವಿಷಯಗಳನ್ನು ಬೋಧಿಸಲಾಗುತ್ತಿದೆ. ಇವುಗಳ ಜತೆಗೆ ಈಗ ಸಂಸ್ಕೃತ ಮತ್ತು ಕಂಪ್ಯೂಟರ್ ವಿಜ್ಞಾನ ಅಳವಡಿಸಲು ಮುಂದಾಗಿದೆ.
ವಿಷಯಗಳ ಅಳವಡಿಕೆಗೆ ಮಂಡಳಿಯ ಸಮಿತಿ ಸದಸ್ಯರು ಒಪ್ಪಿಗೆ ಸೂಚಿಸಿದ್ದು, ಅನುಮೋದನೆಗಾಗಿ ಉನ್ನತ ಸಮಿತಿಗೆ ಕಳುಹಿಸಲಾಗಿದೆ. ರಾಜ್ಯದ ಮದರಸಾಗಳಲ್ಲಿ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
Leave A Reply