ಭಾರತದ ಜತೆ ಉತ್ತಮ ಸಂಬಂಧ ಹೊಂದುವುದು ಒಳ್ಳೆಯ ವಿಚಾರ ಎಂದ ಟ್ರಂಪ್
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವ ಮೊದಲು ಹಾಗೂ ಅಧ್ಯಕ್ಷರಾದ ಬಳಿಕವೂ ಭಾರತದ ಮೇಲೆ ವಿಶೇಷ ಒಲವು ಹೊಂದಿದ್ದಾರೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಂಪ್ ನೀಡುವ ಸ್ವಾಗತ, ಪ್ರಾಮುಖ್ಯ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಅಮೆರಿಕ ಬೆಂಬಲ, ಪಾಕಿಸ್ತಾನದ ಭಯೋತ್ಪಾದನೆ ಪೋಷಣೆ ವಿರುದ್ಧ ಹೇಳಿಕೆ, ಪರಸ್ಪರ ಸಹಕಾರ ಸೇರಿ ಹಲವು ವಿಷಯಗಳಲ್ಲಿ ಭಾರತಕ್ಕೆ ಟ್ರಂಪ್ ಬೆಂಬಲಿಸುತ್ತಲೇ ಬಂದಿದ್ದಾರೆ.
ಇದೀಗ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಪರವಾಗಿಯೇ ಮಾತನಾಡಿದ್ದಾರೆ. ಭಾರತ ಸೇರಿ ಹಲವು ರಾಷ್ಟ್ರಗಳೊಂದಿಗೆ ಅಮೆರಿಕ ಉತ್ತಮ ಸಂಬಂಧ ಹೊಂದುವುದು ಒಳ್ಳೆಯ ವಿಚಾರವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಭಾರತ, ರಷ್ಯಾ ಹಾಗೂ ಚೀನಾ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದರಿಂದ ಅಮೆರಿಕದ ಅಭಿವೃದ್ಧಿಗೂ ಪೂರಕ ಎಂದು ನಾರ್ವೇ ಪ್ರಧಾನಿ ಎರ್ನಾ ಸೋಲ್ಬರ್ಗ್ ಜತೆ ಮಾತುಕತೆ ನಡೆಸಿದ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ತಿಳಿಸಿದ್ದಾರೆ.
ಭಾರತ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು, ಅದರೊಟ್ಟಿಗೆ ಕೆಲಸ ಮಾಡುವುದು ಸಂತಸದ ಸಂಗತಿಯೇ ಆಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಚುನಾವಣೆ ವೇಳೆಯಲ್ಲೂ ನನಗೆ ಮೋದಿ ಅವರ ಜತೆ ಕೆಲಸ ಮಾಡುವ ಬಯಕೆಯಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು.
Leave A Reply