ವಿಶ್ವಗುರುವಾಗುವತ್ತ ಭಾರತ, ರಾಹುಲ್ ಗೆ ಇಲ್ಲಿ ಕಾಣುವುದು 70 ವರ್ಷದ ಕಾಂಗ್ರೆಸ್ ಆಡಳಿತದ ದಾರಿದ್ರ್ಯ ಮಾತ್ರ
ವಿಶ್ವದಲ್ಲೇ ಭಾರತದ ಕೀರ್ತಿ ಪತಾಕೆ ಹಾರುತ್ತಿದೆ.. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳು, ಅಧ್ಯಯನಗಳೇ ಸಾರುತ್ತಿವೆ. ಆದರೆ ದುರಂತರವೆಂದರೇ ಭಾರತದಲ್ಲಿ 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಎಂಬ ಕುಟುಂಬ ಆಧರಿತ ಪಕ್ಷದ ನೇತೃತ್ವ ವಹಿಸಿಕೊಂಡಿರುವ ರಾಹುಲ್ ಗಾಂಧಿ ಎಂಬ ನಾಯಕನಿಗೆ ದೇಶದಲ್ಲಿ ಬರೀ ದಾರಿದ್ರ್ಯವೇ ಕಣ್ಣಿಗೆ ಕಾಣುತ್ತದೆ. ಆದರೆ ಅದನ್ನು ಜವಾಬ್ದಾರಿಯುತ ವಿರೋಧ ಪಕ್ಷದಲ್ಲಿದ್ದುಕೊಂಡು ಸೃಜನಾತ್ಮಕ ಸಲಹೆಗಳನ್ನು ನೀಡುವುದನ್ನು ಬಿಟ್ಟು, ದೇಶದ ಮಾನವನ್ನು ವಿಶ್ವಾದ್ಯಂತ ಹರಾಜು ಹಾಕುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ.
ರಾಹುಲ್ ಗಾಂಧಿ ತಮ್ಮ ರಾಜಕೀಯ ದುರಾಸೆಗಾಗಿ ಇತ್ತೀಚೆಗೆ ಬೆಹ್ರೇನ್ ಗೆ ಭೇಟಿ ನೀಡಿದ್ದ ವೇಳೆ ದೇಶದ ಮಾನವನ್ನು ಮತ್ತೊಮ್ಮೆ ಹರಾಜು ಹಾಕುವ ಮೂಲಕ ತಮ್ಮ ತೆವಲು ತೀರಿಸಿಕೊಂಡಿದ್ದರು. ಭಾರತದಲ್ಲಿ ಗಂಭೀರ ಸಮಸ್ಯೆಗಳಿವೆ ಅವುಗಳನ್ನು ಹೊಡೆದೊಡಿಸಬೇಕಿದೆ ಎಂದು ಅನಿವಾಸಿ ಭಾರತೀಯರ ಸಭೆಯಲ್ಲಿ ಮಾತನಾಡುವ ಮೂಲಕ ಅಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ಮನದಾಳದ ವಿಷ ಕಾರಿದ್ದರು. ಇವರು ದೇಶಕ್ಕೆ ಒಳ್ಳೆಯದಂತೂ ಮಾಡಲಿಲ್ಲ, ಆದರೆ ದೇಶದ ಹೆಸರನ್ನು ಕೆಡಿಸುವ ಎಲ್ಲ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ ರಾಹುಲ್ ಗಾಂಧಿ.
ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಬೊಗಳೆ ಬಿಟ್ಟಿದ್ದ ಕಾಂಗ್ರೆಸ್ ಬೆಂಬಲಿತ ಸ್ವಘೋಷಿತ ಬುದ್ಧಿ ಜೀವಿಗಳು ದೇಶದ ಸೌರ್ವಭೌಮತ್ವವನ್ನೇ ಪ್ರಶ್ನಿಸುತ್ತಾರೆ. ಕಾಶ್ಮೀರ ಸ್ವಾತಂತ್ರ್ಯವಾಗಬೇಕು ಎನ್ನುತ್ತಾರೆ, ದೇಶದ ಆತ್ಮ ಸಂಸತ್ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ ಗುರುವಿಗೆ ಗಲ್ಲು ಏರಿಸಿದನ್ನು, ಹಿಂಸೆ ಎಂದು ತೌಡು ಕುಟ್ಟುತ್ತಾರೆ.. ಇಂತಹವರ ಬೆಂಬಲಕ್ಕೆ ನಿಂತು ರಾಹುಲ್ ಗಾಂಧಿ ಜೈ ಕಾರ ಹಾಕುತ್ತಾರೆ. ರಾಹುಲ್ ಗೆ ದೇಶದ ಮಾನ ಮರ್ಯಾದೆಗಿಂತ ತನ್ನ ಕೊಳಕು ರಾಜಕೀಯವೇ ಹೆಚ್ಚು ಎಂಬಂತಾಗಿದೆ.
ಮೋದಿ ಸಾಧನೆ ಸಾರುತ್ತಿವೆ ಈ ಅಂಶಗಳು
- ವಿಶ್ವದ ಪ್ರಬಲ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ.
- ಮೋದಿ ಆರ್ಥಿಕ ನೀತಿಗಳು ಭವಿಷ್ಯದ ದೃಷ್ಟಿಯಿಂದ ಭಾರತಕ್ಕೆ ಬಲ ತರುತ್ತಿವೆ: ಐಎಂಎಫ್ ಅಧ್ಯಕ್ಷ
- ಜಿಎಸ್ ಟಿ, ನೋಟ್ಯಂತರ ಕ್ರಾಂತಿಕಾರಿ ನಿರ್ಧಾರಗಳು, ಭವಿಷ್ಯದಲ್ಲಿ ಆರ್ಥಿಕ ಬಲ ನೀಡಲಿವೆ
- ಮೋದಿ ಜತೆ ಸಂಬಂಧ ಬೆಳೆಸುವುದು ಉತ್ತಮ ವಿಚಾರ : ಡೊನಾಲ್ಡ್ ಟ್ರಂಪ್
- ಮೋದಿ ಪ್ರಭಾವಕ್ಕೆ ಒಳಗಾಗಿ ಅಮೆರಿಕದಲ್ಲಿ ಸಂಕ್ರಾಂತ್ರಿಗೆ ರಜೆ ಘೋಷಿಸಿದ ಅಮೆರಿಕ ಸಂಸತ್
- ಅಮೆರಿಕ ಭಾರತದ ಮುಖವಾಣಿ ಎನ್ನುವ ಹೇಳಿಕೆ ವಿರೋಧಿ ಪಾಕ್ ಸಚಿವನ ಬಾಯಿಯಿಂದ ಬರುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ.
- ಕೇಂದ್ರ ಸರ್ಕಾರದ ಕಟ್ಟು ನಿಟ್ಟಿನ ಕ್ರಮಗಳಿಂದ ಭಯೋತ್ಪಾದನೆಯನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
- ಜನವರಿ 26 ಗಣರಾಜ್ಯೋತ್ಸವದಂದು 10 ಏಷಿಯಾನ ರಾಷ್ಟ್ರಗಳ ಪ್ರಮುಖರನ್ನು ಆಹ್ವಾನಿಸಿ, ಭಾರತದ ಕೀರ್ತಿ ವಿಶ್ವಕ್ಕೆ ಸಾರುತ್ತಿದ್ದಾರೆ.
- ಭಾರತದ ಸರ್ಕಾರದ ಒತ್ತಡ ಮತ್ತು ಸಂದೇಶಕ್ಕೆ ಹೆದರಿರುವ ಪಾಕಿಸ್ತಾನ ಸರ್ಕಾರ ಭಯೋತ್ಪಾದನೆ ನಿಯಂತ್ರಣಕ್ಕೆ ಕಾರ್ಯ ನಿರ್ವಹಿಸುತ್ತಿದೆ.
ಹೀಗೆ ಸಾಲು ಸಾಲು ಶ್ಲಾಘನೆಗಳು ಭಾರತಕ್ಕೆ ಮತ್ತು ಮೋದಿ ನೇತೃತ್ವದ ಸರ್ಕಾರಕ್ಕೆ ಬರುತ್ತಿದ್ದರೆ, ರಾಹುಲ್ ಗಾಂಧಿ ಮತ್ತು ಸ್ವಘೋಷಿತ ಬುದ್ಧಿ ಜೀವಿಗಳು ದೇಶದಲ್ಲಿ ಅಶಾಂತಿ ಇದೆ, ಅಸಹಿಷ್ಣುತೆ ಇದೆ, ಮಾನವ ಹಕ್ಕುಗಳಿಗೆ ಬೆಲೆ ನೀಡುತ್ತಿಲ್ಲ ಎಂದು ಬೊಬ್ಬಿರಿಯುತ್ತಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನಂತ ಅಪ್ರಬುದ್ಧ ರಾಜಕಾರಣಿ ಮೋದಿ ವಿರುದ್ಧ ಮಾತನಾಡುವ ಮೂಲಕ ತನ್ನ ಮಾತಿನ ತೆವಲು ತೀರಿಸಿಕೊಳ್ಳುತ್ತಿದ್ದರೇ, ಅತ್ತ ವಿಶ್ವ ಸಮುದಾಯ ಮೋದಿಗೆ ಜೈ ಕಾರ ಹಾಕುತ್ತಾರೆ.
ದೇಶದಲ್ಲಿ ತಮ್ಮ ರಾಜಕೀಯದ ದುರಾಸೆಗಾಗಿ ದೇಶದ ಮಾನ ಮರ್ಯಾದೆ ಹಾಕುವವರಿಗೆ ದೇಶದ ಜನ ತಕ್ಕ ಉತ್ತರ ನೀಡುತ್ತಿದ್ದು, ವಿಶ್ವ ಸಮುದಾಯವೂ ಜೈ ಕಾರ ಹಾಕುತ್ತಿದೆ. ಇದೇ ಅಲ್ಲವೇ ಮೋದಿ ಕಾರ್ಯಗಳಿಗಿರುವ ತಾಕತ್ತು.
Leave A Reply