ಮಂಗಳೂರು ವಿವಿಯ ಅಕ್ರಮದ ವಿರುದ್ಧ ಹೋರಾಟಕ್ಕೆ ಬೆಂಗಳೂರಿನ ಶಿಕ್ಷಣಪ್ರೇಮಿ ಸಿದ್ಧ!!
ಕರ್ನಾಟಕ ವಿಶ್ವವಿದ್ಯಾನಿಲಯದ ಆಕ್ಟ್ 2000ರ ಚಾಪ್ಟರ್-4 ರ ಕಲಾಂ-39 ರ ಎರಡನೇ ವಾಕ್ಯವೇ ವಿಶ್ವವಿದ್ಯಾನಿಲಯದಲ್ಲಿ ಎರಡನೇ ಅವಧಿಗೆ ಸಿಂಡಿಕೇಟ್ ಸದಸ್ಯನಾಗಿ ನೇಮಕವಾಗುವ ಅವಕಾಶ ಇಲ್ಲ. ಇಷ್ಟು ಸ್ಪಷ್ಟವಾಗಿ ಒಂದು ನಿಯಮ ಇದೆ ಎಂದಾದರೆ ಮಂಗಳೂರು ವಿಶ್ವವಿದ್ಯಾನಿಲಯದ ಒಳಗೆ ಏನು ಆಗುತ್ತಿದೆ ಎನ್ನುವುದನ್ನು ನಾವು ನೋಡಬೇಕಿದೆ.
ಒಂದು ಕಾಯಿದೆಯನ್ನೇ ಗಾಳಿಗೆ ತೂರಿ ಮಂಗಳೂರು ವಿಶ್ವವಿದ್ಯಾನಿಲಯ ತನ್ನ ಮನಸ್ಸಿಗೆ ಬಂದಂತೆ ವರ್ತಿಸುತ್ತಿದೆ ಎಂದರೆ ಅದನ್ನು ಹೇಳುವರು ಕೇಳುವವರು ಯಾರೂ ಇಲ್ವಾ ಎನ್ನುವ ಪ್ರಶ್ನೆ ಮೂಡುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈಗ ಸಿಂಡಿಕೇಟ್ ಸದಸ್ಯರಾಗಿರುವ ಹರೀಶ್ ಆಚಾರ್ ಅವರದ್ದು ಈ ಬಾರಿ ಮೂರನೇ ಸಿಂಡಿಕೇಟ್ ಸದಸ್ಯತ್ವದ ಅವಧಿ. ಎರಡನೇ ಬಾರಿ ಸಿಂಡಿಕೇಟ್ ಸದಸ್ಯರಾಗುವುದೇ ಕಾನೂನುಬದ್ಧವಾಗಿ ತಪ್ಪಾಗಿರುವುದರಿಂದ ಇವರು ಹೇಗೆ ಮೂರನೇ ಬಾರಿ ಸದಸ್ಯರಾದರು ಎನ್ನುವುದು ಸೋಜಿಗ. ಇವರನ್ನು ಮೂರನೇ ಅವಧಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದವರು ರಾಜ್ಯಪಾಲ ವಜುಬಾಯಿ ಪಟೇಲ್. ಇನ್ನು ಅವರಿಗೆ ಸುಳ್ಳು ಮಾಹಿತಿ ಕೊಟ್ಟು ಹರೀಶ್ ಆಚಾರ್ ರನ್ನು ಸಿಂಡಿಕೇಟ್ ಮೆಂಬರ್ ಮಾಡಿದ್ದು ವಿಶ್ವವಿದ್ಯಾನಿಲಯದ ಕುಲಪತಿ ಭೈರಪ್ಪ.
ಈ ಸುದ್ದಿಯನ್ನು ತುಳುನಾಡು ನ್ಯೂಸ್ ಮೊದಲಿಗೆ ಬಹಿರಂಗಪಡಿಸಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರಿನ ಶಿಕ್ಷಣಪ್ರೇಮಿಯೊಬ್ಬರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಈ ಗೋಲ್ ಮಾಲ್ ಅನ್ನು ರಾಜ್ಯಪಾಲರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಹಾಗೆ ತಮಗೆ ಪೂರಕ ದಾಖಲೆ ನೀಡುವಂತೆ ಕೋರಿದ್ದಾರೆ. ಅವರ ವಿನಂತಿಯಂತೆ ತುಳುನಾಡು ನ್ಯೂಸ್ ತನ್ನಲ್ಲಿರುವ ದಾಖಲೆಯನ್ನು ನೀಡಿ ವಿಶ್ವವಿದ್ಯಾನಿಲಯದ ಒಳಗಿನ ಅವ್ಯವಹಾರದ ವಿರುದ್ಧ ಹೋರಾಟವನ್ನು ಮುಂದುವರೆಸಲಿದೆ.
ರಾಜ್ಯಪಾಲರು ಈ ಕುರಿತು ಕ್ರಮ ಕೈಗೊಂಡು ವಿಶ್ವವಿದ್ಯಾನಿಲಯದಲ್ಲಿ ಆಗಿರುವ ಸಮಗ್ರ ಅವ್ಯವಹಾರದ ತನಿಖೆಗೆ ಸೂಚಿಸಿದರೆ ಆಗ ವಿಶ್ವವಿದ್ಯಾನಿಲಯದ ಒಳಗೆ ಸಂಚಲನ ಮೂಡುವುದು ನಿಶ್ಚಯ!
Leave A Reply