ಮತ್ತೆ ಜಾಗತಿಕವಾಗಿ ಘರ್ಜಿಸಿದ ಮೋದಿ, ಜಗತ್ತಿನ ಮೂರನೇ ಪ್ರಭಾವಿ ನಾಯಕ
ದೆಹಲಿ: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತದ ಖ್ಯಾತಿ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಮೊದಲು ಅಮೆರಿಕವೇ ವೀಸಾ ನೀಡಿ ಮೋದಿ ಅವರಿಗೆ ರತ್ನಗಂಬಳಿ ಹಾಸಿತು, ಜಗತ್ತಿನ ಹಲವು ರಾಷ್ಟ್ರಗಳು ತಮ್ಮ ದೇಶಕ್ಕೆ ಭಾರತದ ಪ್ರಧಾನಿಯವರನ್ನು ಕರೆಸಿಕೊಂಡವು. ಪಾಕಿಸ್ತಾನ ಬಾಲ ಮುದುರಿಕೊಂಡಿತು. ಚೀನಾವೂ ಹಿಂದಡಿಯಿಟ್ಟಿತು.
ಈಗ ಪ್ರಧಾನಿ ಮೋದಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಜಗತ್ತಿನ ಮೂರನೇ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.
ಹೌದು, ಗ್ಯಾಲಪ್ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ವಿಶ್ವ ಜನಪ್ರಿಯ ನಾಯಕರ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಸಹ ಹಿಂದಿಕ್ಕಿ ಮೂರನೇ ಜಾಗತಿಕ ಪ್ರಭಾವಿ ನಾಯಕರಾಗಿದ್ದಾರೆ.
ಸಮೀಕ್ಷೆಗಾಗಿ ಜಗತ್ತಿನ 50 ರಾಷ್ಟ್ರಗಳ ಜನಾಭಿಪ್ರಾಯ ಸಂಗ್ರಹಿಸಿದ್ದು, ಮೊದಲ ಸ್ಥಾನದಲ್ಲಿ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್, ಫ್ರಾನ್ಸ್ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ.
ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರ ನಂತರದ ಸ್ಥಾನದಲ್ಲಿದ್ದಾರೆ.
Leave A Reply